ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ

Public TV
2 Min Read

ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಜಾನ್ವಿ ಕಪೂರ್ ಬಗ್ಗೆ ಮಾತನಾಡಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಅವರನ್ನು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಬೆಸ್ಟೀಸ್ ಎನ್ನಲಾಗುತ್ತಿದೆ. ಅವರಿಬ್ಬರು ಯಾವಾಗಲೂ ಒಟ್ಟಿಗೆ ಟ್ರಿಪ್ ಹೋಗುವುದು, ಒಂದೇ ಜಿಮ್ ಟ್ರೈನರ್ ತೆಗೆದುಕೊಂಡಿರುವುದನ್ನು ನೋಡಿದ ಅಭಿಮಾನಿಗಳು ಇವರಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಕರಿಷ್ಮಾ ಫಿಟ್ನೆಸ್ ಹೊಗಳಿದ ಮಲೈಕಾ ಅರೋರಾ

ಜಾನ್ವಿ ಕಪೂರ್ ಜೊತೆಗಿನ ಬಾಂಧವ್ಯದ ಕುರಿತು ಮಾತನಾಡಿದ ಸಾರಾ, ಜನರು ಯೋಚಿಸಿದಂತೆ ಜಾನ್ವಿ ಮತ್ತು ನಾನು ಹೆಚ್ಚು ಸಾಮ್ಯತೆ ಹೊಂದಿದ್ದೇವೆ. ನಾವು ಉತ್ತಮ ಸ್ನೇಹಿತರಲ್ಲ. ನಾವಿಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದೇವೆ. ನಮ್ಮಿಬ್ಬರಲ್ಲಿಯೂ ಮಹತ್ವಾಕಾಂಕ್ಷೆಗಳಿವೆ. ವೃತ್ತಿ ಜೀವನದಲ್ಲಿ ಇಬ್ಬರು ಒಂದೇ ವೃತ್ತಿಯಲ್ಲಿದ್ದೇವೆ. ನಾವಿಬ್ಬರು ಬಲಿಷ್ಠ ಹುಡುಗಿಯರು ಎಂದರು.

 

View this post on Instagram

 

A post shared by Janhvi Kapoor (@janhvikapoor)

ನಾವು ಈ ಕೋವಿಡ್ ಕಾರಣದಿಂದ ನಮ್ಮ ವೃತ್ತಿಜೀವನದ ಎರಡು ವರ್ಷಗಳನ್ನು ಕಳೆದುಕೊಂಡಿದ್ದೇವೆ. ರಾಧಿಕಾ ಮದನ್ ಆಗಿರಲಿ ಅಥವಾ ಜಾನ್ವಿಯಾಗಿರಲಿ, ನಾನು ಅವರಿಬ್ಬರನ್ನೂ ನಿಜವಾಗಿಯೂ ಇಷ್ಟಪಡುತ್ತೇನೆ. ನಮಗೆ ನಮ್ಮ ಬಗ್ಗೆ ಗೊತ್ತಿದೆ. ಈ ಕಾರಣಕ್ಕೆ ಅನನ್ಯಾ ಪಾಂಡೆ, ರಾಧಿಕಾ, ಜಾನ್ವಿ ಅಥವಾ ನಾನು ಎಲ್ಲರೂ ಇಂದು ಇಲ್ಲಿರಲು ಸಾಧ್ಯವಾಗಿದೆ. ನಮ್ಮೆಲ್ಲರಲ್ಲಿಯೂ ಒಂದೊಂದು ವಿಶೇಷತೆ ಇದೆ. ನಾವು ಅದನ್ನು ನಂಬಬೇಕು ಎಂದು ವಿವರಿಸಿದರು.

ನಾನು ಸೆಟ್‍ನಲ್ಲಿ ನನ್ನ ಜೀವನ ಒಗ್ಗಿಕೊಳ್ಳುವ ಹೊತ್ತಿಗೆ, ಲಾಕ್‍ಡೌನ್ ಬಂತು. ಈ ಕೊರೊನಾದಿಂದ ನನ್ನ ಎಲ್ಲ ಯೋಜನೆಗಳು ನಿಂತು ಹೋಗಿದೆ. ಅದು ನಮ್ಮನ್ನು ಕಟ್ಟಿ ಹಾಕ್ಕಿತ್ತು. ನಾನು ಜಾನ್ವಿಗಿಂತ ಹೆಚ್ಚು ಸೆಟ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾನು ಲಾರ್ಡ್ ಶಿವ ಅಲ್ಲ, ನಾನು ನಿಮ್ಮ ಶಿವಣ್ಣ ಮಾತ್ರ: ಹ್ಯಾಟ್ರಿಕ್ ಹೀರೋ ಹೀಗಂದಿದ್ಯಾಕೆ..?

ಜಾನ್ವಿ ಮತ್ತು ಸಾರಾ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಸಾರಾ, ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿರುವ ವಿಕ್ಕಿ ಕೌಶಲ್ ಮುಖ್ಯ ಭೂಮಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾನ್ವಿ ‘ಗುಡ್ ಲಕ್ ಜೆರ್ರಿ’ ಮತ್ತು ‘ದೋಸ್ತಾನಾ 2’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *