ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಪವನ್ ಕಲ್ಯಾಣ್

Public TV
2 Min Read

ಟಾಲಿವುಡ್‌ನ (Tollywood) ಪವನ್ ಕಲ್ಯಾಣ್ (Pawan Kalyan) ಕೆಲ ದಿನಗಳಿಂದ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಅವರು ದಾಂಪತ್ಯ (Wedding Life) ಬದುಕು ಸರಿಯಿಲ್ಲ. 3ನೇ ಪತ್ನಿಗೂ ಡಿವೋರ್ಸ್ ನೀಡ್ತಿದ್ದಾರೆ ಎಂಬ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು ಮತ್ತು ಸುದ್ದಿಯಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಆ ಒಂದು ಪೋಸ್ಟ್‌ನಿಂದ ಉತ್ತರ ನೀಡಿದ್ದಾರೆ. ಈ ಮೂಲಕ ಗಾಸಿಪ್ ಪ್ರಿಯರ ಬಾಯಿಗೆ ಬೀಗ ಹಾಕಿದ್ದಾರೆ. ಇದನ್ನೂಓದಿ:ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

ಪವನ್ ಕಲ್ಯಾಣ್‌ಗೆ ಟಾಲಿವುಡ್‌ನಲ್ಲಿ (Tollywood) ಅತಿ ಹೆಚ್ಚು ಫ್ಯಾನ್ ಫಾಲೊಯಿಂಗ್ ಹೊಂದಿರುವ ನಟ. ಇವರ ಸಿನಿಮಾ ಸೋಲಲಿ ಗೆಲ್ಲಲಿ. ಭಕ್ತಗಣ ಸಂಖ್ಯೆ ಮಾತ್ರ ಕಮ್ಮಿಯಾಗಲ್ಲ. ನೋಡಲು ಸುರಸುಂದರ ಅಲ್ಲ, ಅದ್ಭುತ ಡಾನ್ಸ್ ಮಾಡುತ್ತಾರೆ ಎನ್ನುವಂತಿಲ್ಲ. ಇಂಥ ಅನೇಕ ಇಲ್ಲ ಇಲ್ಲಗಳ ನಡುವೆಯೂ ಟಾಲಿವುಡ್ ಪವರ್‌ಸ್ಟಾರ್ ಖದರ್ ಉಳಿದುಕೊಂಡು ಬಂದಿದ್ದಾರೆ. ಇದೇ ಪವನ್ ಅನೇಕ ವಿವಾದಕ್ಕೂ ಕಾರಣವಾಗಿದ್ದಾರೆ. ಅದು ಸಿನಿಮಾ, ರಾಜಕೀಯ ಹಾಗೂ ವೈಯಕ್ತಿಕ ಎಲ್ಲದರಲ್ಲೂ ಒಂದಿಲ್ಲೊಂದು ಕಪ್ಪು ಚುಕ್ಕೆ ಕಾಣುತ್ತದೆ. ಇದೀಗ ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ದೂರವಾಗಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು.

ಪವನ್ ಮೊಟ್ಟಮೊದಲು ಮದುವೆಯಾಗಿದ್ದು ನಂದಿನಿ ಜೊತೆ. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಂತರ ಹೀರೋಯಿನ್ ರೇಣು ದೇಸಾಯಿ ಜೊತೆ ಸಪ್ತಪದಿ ತುಳಿದರು. ಎರಡು ಮಕ್ಕಳು ಹುಟ್ಟಿದವು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಎರಡು ವರ್ಷ ಅಷ್ಟೇ. ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು ಪವನ್. ಇಬ್ಬರು ಮಕ್ಕಳೂ ಇದ್ದಾರೆ. ಮೊದಮೊದಲು ಜಂಟಿಯಾಗಿ ಸಮಾರಂಭಗಳಲ್ಲಿ ಕಾಣಿಸುತ್ತಿತ್ತು ಈ ಜೋಡಿ. ಆದರೆ ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು. ಹಾಗಾಗಿ ಮತ್ತೆ ಡಿವೋರ್ಸ್ (Divorce) ವಿಚಾರ ಚಾಲ್ತಿಗೆ ಬಂದಿತ್ತು.

ಅನ್ನಾ ಸಿಂಗಪೂರ್ ಅಥವಾ ದುಬೈನಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಾರಂತೆ ಅಥವಾ ರಷ್ಯಾಕ್ಕೇ ಹೋಗಿರಬಹುದು ಎಂದು ಯಾವಾಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂತೋ.ಪವನ್ ಕಲ್ಯಾಣ್ ಆಪ್ತ ಕಮ್ ನಿರ್ಮಾಪಕ ಬಂಡ್ಲಾ ಗಣೇಶ್ ಗರಂ ಆಗಿದ್ದರು. ಇದೆಲ್ಲ ನಿಜ ಎಂದು ನಿಮಗೆ ಯಾರು ಹೇಳಿದ್ದು? ಎಂದು ಪ್ರಶ್ನಿಸಿ ಪವನ್ ಕಲ್ಯಾಣ್ ಸ್ನೇಹಿತ ಫುಲ್ ಗರಂ ಆಗಿದ್ದರು.

ಈಗ ಡಿವೋರ್ಸ್ ಅಂತೆ ಕಂತೆ ಸುದ್ದಿಗೆ ಸ್ವತಃ ಪವನ್ ಕಲ್ಯಾಣ್ ಅವರೇ ಬ್ರೇಕ್ ಹಾಕಿದ್ದಾರೆ. ಪತ್ನಿ ಅನ್ನಾ ಲೇಜ್ನೇವಾ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇಬ್ಬರು ನಗು ನಗುತ್ತಾ ಹೆಜ್ಜೆ ಇಡ್ತಿರುವ ಫೋಟೋವನ್ನ ತಮ್ಮ ಜನಸೇನಾ ಪಕ್ಷದ (Janasena Party) ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, ಡಿವೋರ್ಸ್ ಎಂದು ಹೇಳವವರಿಗೆ ಬಾಯಿ ಮುಚ್ಚಿಸಿದ್ದಾರೆ. ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂದು ಪವನ್ ಕಲ್ಯಾಣ್ ಪರೋಕ್ಷವಾಗಿ ಸೂಚಿಸಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್