ಬೆಂಗಳೂರು: ಜನಾರ್ದನ ರೆಡ್ಡಿ (Janardhan Reddy) ಇರಾನ್ ಅಥವಾ ಅಮೆರಿಕದಿಂದಾದ್ರೂ ಭದ್ರತೆ (Security) ತರಿಸಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಲೇವಡಿ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಝೆಡ್+ ಭದ್ರತೆ ಕೇಳಿ ಅಮಿತ್ ಶಾ, ಸರ್ಕಾರಕ್ಕೆ ಪತ್ರ ಬರೆದಿರೋ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಝೆಡ್ ಭದ್ರತೆ ಆದರೂ ಕೇಳಲಿ, ಇರಾನ್‌ನಿಂದ ಯಾವುದಾದರೂ ಭದ್ರತೆ ತೆಗೆದುಕೊಂಡು ಬರಲಿ, ಅಮೆರಿಕದಿಂದ ಆದರೂ ತರಿಸಿಕೊಳ್ಳಲಿ ಅಥವಾ ಇವರಾದರೂ ಭದ್ರತೆ ಮಾಡಿಕೊಳ್ಳಲಿ ಯಾರು ಬೇಡ ಅಂದರು. ಪತ್ರ ಬರೆದಿರೋದು ಬಹಳ ಸಂತೋಷ. ಅವರ ಪಾರ್ಟಿ ಕೇಡರ್ಸ್ ಅವರನ್ನೆ ನೂರು ಜನರನ್ನ ಭದ್ರತೆಗೆ ರೆಡಿ ಮಾಡಿಕೊಳ್ಳಲಿ ಎಂದು ಟೀಕಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಎಸ್ಪಿ ಪವನ್ ನೆಜ್ಜೂರ್ ಡೆತ್‌ನೋಟ್ ಮುಚ್ಚಿಟ್ಟಿದೆ: ಶೋಭಾ ಕರಂದ್ಲಾಜೆ ಬಾಂಬ್
ಬಳ್ಳಾರಿ ಗಲಾಟೆಯಲ್ಲಿ ಫೈಯರ್ ಆಗಿರೋ ಬುಲೆಟ್ ಸತೀಶ್ ರೆಡ್ಡಿ ಗನ್ ಮ್ಯಾನ್‌ದು ಎಂಬ ವರದಿ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಯಾರೇ ಆಗಿದ್ದರೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: ಬೆಂಗಳೂರು| ರೋಡ್ ಸೈಡ್ ಪಾರ್ಕಿಂಗ್‌ಗೆ ಕಟ್ಟಬೇಕು ಕಾಸು – ಜಿಬಿಎ ಪೇ & ಪಾರ್ಕಿಂಗ್ ರೂಲ್ಸ್ ಶೀಘ್ರ ಜಾರಿ?
ಎಲ್ಲಾ ಕಡೆ ವಿಗ್ರಹ ಇಡುತ್ತಾರೆ. ಅವರ ಭಕ್ತಿ ಭಾವನೆ ತೋರಿಸುತ್ತಾರೆ. ಅದಕ್ಕೆ ಅಸೂಯೆ ಯಾಕೆ ಪಡಬೇಕು? ವಾಲ್ಮೀಕಿ ಒಂದು ಸಮುದಾಯಕ್ಕೆ ಸೇರಿದವರಾ? ವಾಲ್ಮೀಕಿ ಅವರು ಎಲ್ಲರ ಆಸ್ತಿ. ರಾಮಾಯಣ ವಾಲ್ಮೀಕಿ ಅವರು ಬರೆದರು. ನಾವೆಲ್ಲರು ರಾಮಾಯಣ ಓದೋದಿಲ್ವಾ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: VB-G RAM G ಕಾಯ್ದೆ ಕೇಂದ್ರ ಸರ್ಕಾರ ವಾಪಸ್ ಪಡೆಯಲ್ಲ: ಧರ್ಮೇಂದ್ರ ಪ್ರಧಾನ್
ಬಳ್ಳಾರಿ ಕೇಸ್ ಸಿಐಡಿಗೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಐಡಿಗೆ ಕೊಡುವ ಬಗ್ಗೆ ಚರ್ಚೆ ಆಗಿರೋದು ನನಗೆ ಗೊತ್ತಿಲ್ಲ. ಗೃಹ ಸಚಿವರು, ಸಿಎಂ ಸಿದ್ದರಾಮಯ್ಯ ಅವರು ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ ಅಂತ ತಿಳಿಸಿದರು. ಕೆಪಿಸಿಸಿ ಸತ್ಯಶೋಧನ ಸಮಿತಿಯ ಹೆಚ್‌ಎಂ ರೇವಣ್ಣ ಅವರು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಏನೇನು ವಿಚಾರ ಆಗಿದೆ ಅಂತ ಅನಧಿಕೃತ ಮಾಹಿತಿ ಕೊಟ್ಟಿದ್ದಾರೆ. ಒಳ್ಳೆಯ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ವರದಿ ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೇರಳ | ತ್ರಿಶೂರ್ ರೈಲು ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ – 200 ವಾಹನಗಳು ಭಸ್ಮ


