ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ, ಷರತ್ತುಗಳಿಲ್ಲದೇ ಪಕ್ಷ ಸೇರಿದ್ದೇನೆ: ಜನಾರ್ದನ ರೆಡ್ಡಿ

Public TV
2 Min Read

– ಬಿಜೆಪಿ ನೆಲೆಯೂರಲು ದೇವರು ಕಳಿಸಿದ ಅದ್ಭುತ ಸೃಷ್ಟಿ ಯಡಿಯೂರಪ್ಪ
– ಅಪ್ಪ-ಮಗನನ್ನು ಕೊಂಡಾಡಿದ ಶಾಸಕ

ಬೆಂಗಳೂರು: ಕೆಆರ್‌ಪಿಪಿ ಪಕ್ಷದ ಸ್ಥಾಪಕ ಶಾಸಕ ಜನಾರ್ದನ ರೆಡ್ಡಿ (Janardhana Reddy) ಅವರಿಂದು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಶ್ರೀರಾಮುಲು, ಆನಂದ್ ಸಿಂಗ್, ಸಿಟಿ ರವಿ, ಅಶ್ವಥ್‌ನಾರಾಯಣ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ (Bengaluru BJP Office) ನಡೆದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡಿದ್ದೇನೆ. ನನ್ನ ಪತ್ನಿ ಹಾಗೂ ನನ್ನ ಕಷ್ಟದ ಕಾಲದಲ್ಲಿ ಜೊತೆಗೆ ನಿಂತ ಎಲ್ರೂ ಬಿಜೆಪಿ ಸೇರಿದ್ದೇವೆ. ನನ್ನ ಗೆಳೆಯ ಶ್ರೀರಾಮುಲು ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದು ಭಾವುಕರಾಗಿದ್ದಾರೆ.

ಮೋದಿಯವರ ಕೈ ಬಲಪಡಿಸುವ ದೃಷ್ಟಿಯಿಂದ ಅಮಿತ್ ಶಾ ಅವರು ದೆಹಲಿಗೆ ಆಹ್ವಾನಿಸಿದ್ದರು. ಬಾಹ್ಯ ಬೆಂಬಲ ಬೇಡ, ಪಕ್ಷಕ್ಕೆ ಸೇರುವಂತೆ ಪ್ರೀತಿಯಿಂದ ಆಹ್ವಾನ ನೀಡಿದರು. ಅದನ್ನು ಒಪ್ಪಿ ಬಿಜೆಪಿಗೆ ಮತ್ತೆ ಸೇರಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರೀಕ್ಷಾ ದಿನವೇ SSLC ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಯಾವುದೇ ಷರತ್ತು ಹಾಕಿಲ್ಲ:
ಯಡಿಯೂರಪ್ಪ (BS Yediyurappa) ಅವರ ಬಗ್ಗೆ ಎರಡು ಮಾತಲ್ಲಿ ಹೇಳಲಾಗಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ದೇವರು ಕಳಿಸಿದ ಅದ್ಭುತ ಸೃಷ್ಟಿ ಯಡಿಯೂರಪ್ಪ. ಅವರ ಜೊತೆ ಚಿಕ್ಕ ವಯಸ್ಸಲ್ಲೇ ಸೇರಿಕೊಂಡು ಪಕ್ಷ ಕಟ್ಟಿದ್ದು ನನ್ನ ಪೂರ್ವ ಜನ್ಮದ ಪುಣ್ಯ. ತಂದೆ-ಮಗನ ಜೊತೆಗೂಡಿ ಈಗ ಮತ್ತೆ ಪಕ್ಷದ ಕೆಲಸ ಮಾಡ್ತೀನಿ. ಇದು ಬಹಳ ಸಂತೋಷ ತಂದಿದೆ. ಯಾವುದೇ ಷರತ್ತು ಹಾಕಿಲ್ಲ, ಫಲಾಫೇಕ್ಷೆ ಬಯಸದೇ ಸೇರಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಟೋ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ; ಪರಿಸ್ಥಿತಿ ಉದ್ವಿಗ್ನ – ಮೂವರು ಅರೆಸ್ಟ್

ತಾಯಿ ಮಡಿಲಿಗೆ ಸೇರಿದ್ದೇನೆ:
ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ. ಅನೇಕ ಏಳು-ಬೀಳು ಕಂಡಿದ್ದೇನೆ, ಯಾವುದೇ ಜವಾಬ್ದಾರಿ ಕೊಟ್ಟರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡ್ತೇನೆ. ನಾನು ನನ್ನ ಮನೆಗೆ ವಾಪಸ್ ಬಂದಿದ್ದೇನೆ. ರಕ್ತದ ಕಣಕಣದಲ್ಲೂ ಬಿಜೆಪಿ ಇದೆ. ಯಾವುದೋ ಅನಿವಾರ್ಯ ಕಾರಣದಿಂದ ಪಕ್ಷ ಬಿಡಬೇಕಾಗಿತ್ತು. ಈಗ ನಾನು ಸ್ವಂತ ಮನೆಗೆ ಮರಳಿದ್ದೇನೆ, ತಾಯಿ ಮಡಿಲಿಗೆ ಸೇರಿದ್ದೇನೆ. ನಾನು-ರಾಮುಲು ಒಂದು ಕುಟುಂಬ, ಒಟ್ಟಿಗೇ ಇರ್ತೀವಿ. ಇದು ನನ್ನ ಪಕ್ಷ ಎಂದು ಬೀಗಿದ್ದಾರೆ.  ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಸ್ಪಿರಿಟ್ ಟ್ಯಾಂಕರ್ – ತಪ್ಪಿದ ಭಾರೀ ದುರಂತ

Share This Article