ರವಿವರ್ಮನ ಕಲ್ಪನೆಯ ಸುಂದರಿಯರಂತೆ ಪತ್ನಿಯ ಫೋಟೋ ಶೂಟ್ ಮಾಡಿಸಿದ ಜನಾರ್ದನ ರೆಡ್ಡಿ

Public TV
2 Min Read

‘ರವಿ ವರ್ಮನ ಕುಂಚದ ಕಲೆ ಬಲೆ ಸಾಕಾರವೋ.. ಕವಿಕಲ್ಪನೆ ಕಾಣುವೆ ಚೆಲುವಿನಾ ಜಾಲವೋ..’ ಎಂದು ಸೊಸೆ ತಂದ ಸೌಭಾಗ್ಯ ಚಿತ್ರಕ್ಕಾಗಿ ಆರ್.ಎನ್.ಜಯಗೋಪಾಲ್ ಅವರು ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಕಲೆಯನ್ನು ಬಣ್ಣಿಸಿದ್ದರು. ಮುಂದುವರೆದು ‘ಉಯ್ಯಾಲೆಯಾ ಆಡಿ ನಲಿವಾ ರೂಪಸೀ, ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ’ ಎಂದೆಲ್ಲ ರೂಪಸಿಯನ್ನು ಹಾಡಿ ಅಟ್ಟಕ್ಕೇರಿಸಿದ್ದರು. ಆ ರೂಪಸಿಯೂ ಹಾಗೇ ಇದ್ದಳು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

ರವಿ ವರ್ಮನ ಕುಂಚದಲ್ಲಿ ಮೂಡಿ ಬಂದ ಅಷ್ಟೂ ರೂಪಸಿಯರು ರಸಿಕರ ಕಂಗಳಲ್ಲಿ ಇವತ್ತಿಗೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಕವಿತೆಯಾಗಿ, ಚಿತ್ರವಾಗಿ, ಕಲ್ಪನೆಯ ರಂಗಾಗಿ ಕಾಡಿದ್ದಾರೆ. ಇಂಥದ್ದೊಂದು ಕಾಡುವಿಕೆಯನ್ನು ತಮ್ಮದೇ ಆದ ರೀತಿಯಲ್ಲಿ ಪ್ರಚುರ ಪಡಿಸಿದ್ದಾರೆ ಮಾಜಿ ಮಂತ್ರಿ ಗಾಲಿ ಜನಾರ್ದನ ರೆಡ್ಡಿ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

29 ಏಪ್ರಿಲ್ 1848 ವಿಶ್ವಕಂಡ ಶ್ರೇಷ್ಠ ಚಿತ್ರಕಾರ ರಾಜಾ ರವಿವರ್ಮಾ ಅವರ ಹುಟ್ಟುಹಬ್ಬ. ಅದರ ನೆನಪಿಗಾಗಿ ಜನಾರ್ದನ್ ರೆಡ್ಡಿ ಅವರು ರವಿವರ್ಮಾ ಅವರ ಗ್ರೇಟ್ ಚಿತ್ರಗಳನ್ನು ಹೋಲುವಂತೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ. ಈ ಮೂಲಕ ರಾಜ ಮನೆತನದ ಅದ್ಭುತ ಕಲಾವಿದನನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

ರವಿ ವರ್ಮಾ ರಾಜಮನೆತನದಲ್ಲಿ ಹುಟ್ಟಿದ್ದರೂ, ಅವರು ಕಲೆಗೆ ಕೊಟ್ಟ ಪ್ರೋತ್ಸಾಹ ಅಪಾರ. ಅಲ್ಲದೇ, ಅನೇಕ ಮಹರಾಜರುಗಳು ಇವರನ್ನು ತಮ್ಮ ಆಸ್ಥಾನಗಳಿಗೆ ಕರೆಯಿಸಿಕೊಂಡು ತಮ್ಮ ಪತ್ನಿಯರ ಸೌಂದರ್ಯವನ್ನು ಇವರ ಕುಂಚದ ಮೂಲ ಇಂಚಿಂಚೂ ಕಂಡವರು. ಅದರಲ್ಲೂ ಸಾಂಪ್ರದಾಯಿಕ ಉಡುಪಿನೊಂದಿಗೆ ರವಿವರ್ಮಾ ಚಿತ್ರಿಸಿದ ಸುಂದರಿಯರು ಜಗತ್ತಿನ ಸುಂದರಿಯರಾಗಿ ಮೆರೆದವರು. ಇಂತಹ ಕೆಲವು ಚಿತ್ರಗಳಲ್ಲಿ ಆಯ್ದ  ಕೆಲವು ಚಿತ್ರಗಳಿಗೆ ತಮ್ಮ ಪತ್ನಿಯ ಫೋಟೋಶೂಟ್ ಮಾಡಿಸಿದ್ದಾರೆ ಜನಾರ್ದನ ರೆಡ್ಡಿ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

ನಳ-ದಮಯಂತಿ, ಮತ್ಸ್ಯಗಂಧಿ, ರಾಧಾ, ದೇವಕಿ, ಸುಭದ್ರೆ, ಮೇನಕೆ, ತಾರಾಮತಿ, ಸೀತಾ, ಗಂಗೆ ಸೇರಿದಂತೆ 14ಕ್ಕೂ ಹೆಚ್ಚು ತೈಲ ಚಿತ್ರಗಳನ್ನು ರಾಜಾ ರವಿವರ್ಮಾ ಬಿಡಿಸಿದ್ದಾರೆ. ಇವುಗಳಲ್ಲಿ ಆಯ್ದ ಚಿತ್ರಗಳ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಫೋಟೋಗೋ ಫೋಸ್ ಕೊಟ್ಟಿರುವುದು ವಿಶೇಷ.  ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್

ಈ ಹಿಂದೆಯೂ ಹೆಣ್ಣಿನ ಅಂದದ ಜೊತೆ ಆಕೆಯ ಖುಷಿ, ನೋವು, ತಲ್ಲಣಗಳನ್ನು ಅಭಿವ್ಯಕ್ತಿಸುವ ರಾಜಾ ರವಿವರ್ಮರ  ತೈಲ ಚಿತ್ರಗಳನ್ನು ಹೋಲುವಂತೆ ದಕ್ಷಿಣ ಭಾರತದ ನಟಿಯರಾದ ಶ್ರುತಿ ಹಾಸನ್, ಐಶ್ವರ್ಯಾ ರಾಜೇಶ್, ರಮ್ಯಾ ಕೃಷ್ಣ ಮತ್ತು ಸಮಂತಾ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಖತ್ ವೈರಲ್ ಕೂಡ ಆಗಿದ್ದವು. ಇದೀಗ ಅದೇ ಮಾದರಿಯಲ್ಲೇ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಾಣಿಸಿಕೊಂಡಿರುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *