ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?

Public TV
2 Min Read

ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ರಾಜಕೀಯ ಸಂಚಲನ ಆರಂಭವಾಗಿದೆ. ಗಣಿ ನಾಡಿನ ಇಬ್ಬರು ಸ್ನೇಹಿತರ ನಡುವೆ ಕೋಲ್ಡ್ ವಾರ್ ಆರಂಭವಾಗಿದೆ ಎನ್ನುವ ಅನುಮಾನ ಈಗ ವ್ಯಕ್ತವಾಗಿದೆ.

ಹೌದು. ಒಂದು ಕಾಲದಲ್ಲಿ ಸರ್ಕಾರವನ್ನು ಕಿತ್ತು ಹಾಕಿ ಮತ್ತೊಂದು ಸರ್ಕಾರ ರಚನೆ ಮಾಡುವ ಶಕ್ತಿ ಹೊಂದಿದ್ದ ಈ ಇಬ್ಬರು ನಾಯಕರು ಈಗ ದೂರಾ ದೂರಾ ಆಗಿದ್ದಾರೆ. ಅದಕ್ಕೆ ಕಾರಣ ಜನಾರ್ದನ ರೆಡ್ಡಿ (Janardhan Reddy) ಹಾಗೂ ಸಚಿವ ಶ್ರೀರಾಮುಲು (Sriramulu) ಅವರ ನಡುವಿನ ಕೋಲ್ಡ್ ವಾರ್. ಇಷ್ಟು ದಿನ ಮನಸ್ಸಿನಲ್ಲಿ ಮಾತ್ರ ಇದ್ದ ಕೋಲ್ಡ್ ವಾರ್ ಈಗ ಬಹಿರಂಗವಾಗಿದೆ.

    

ಕಳೆದ ಮೂರು ದಿನಗಳ ಹಿಂದೆ ಗಾಲಿ ಜನಾರ್ದನ ರೆಡ್ಡಿ ಅವರ ಮೊಮ್ಮಗಳ ನಾಮಕರಣ ಕಾರ್ಯಕ್ರಮವು ಬೆಂಗಳೂರಿನ ಪಾರಿಜಾತ ಅಪಾರ್ಟ್ ಮೆಂಟ್ (Parijatha Apartment) ನಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಗಾಲಿ ಸೋಮಶೇಖರ್ ರೆಡ್ಡಿ, ಗಾಲಿ ಕರುಣಾಕರ ರೆಡ್ಡಿ ಹಾಗೂ ಮಾಜಿ ಸಿಎಂ ಬಿಎಸ್‍ವೈ ಕೂಡಾ ಭಾಗಿಯಾಗಿದ್ದರು. ಆದರೆ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಮಾತ್ರ ಭಾಗಿ ಆಗಿರಲಿಲ್ಲ. ಈಗ ಇದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಕೊಡಲೇ ಇಲ್ಲಾ ಇದೇ ಕಾರಣಕ್ಕೆ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಲು ಮುಂದಾಗಿದ್ದು, ಇದೇ ಕಾರಣಕ್ಕೆ ರೆಡ್ಡಿ ರಾಮುಲು ನಡುವೆ ವೈ ಮನಸ್ಸು ಮೂಡಿದೆ ಎನ್ನಲಾಗಿದೆ.

ಹೀಗೊಂದು ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದೆ. ಇದೇ ಕಾರಣಕ್ಕೆ ರೆಡ್ಡಿ ಹೊಸ ಪಕ್ಷಕ್ಕೆ ರಾಮುಲು ಅವರನ್ನು ಕರೆದಿದ್ದು, ಕಾರಣ ರಾಮುಲು ಅವರು ಹೊಸ ಪಕ್ಷದ ಕಡೆಗೆ ಒಲವು ತೋರಿಲ್ಲ. ಹೀಗಾಗಿ ರೆಡ್ಡಿ ರಾಮುಲು ನಡುವೆ ಕೋಲ್ಡ್ ವಾರ್ ಆರಂಭವಾಗಿದೆ ಎನ್ನುವ ಮಾತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಇಂದಿನಿಂದ ಸಂಕೀರ್ತನಾ ಯಾತ್ರೆ- ಆಂಜನೇಯ ದೇಗುಲ ಪುನರ್ ಸ್ಥಾಪನೆಗೆ ಆಗ್ರಹ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು, ನಮ್ಮ ಸ್ನೇಹ ರಾಜಕೀಯ ಹೊರತಾಗಿಯೂ ಇದೆ ಎಂದಿದ್ದಾರೆ. ನನಗೆ ಮುಂಚೆ ಜೈಪುರ್ ಸ್ವಾಮೀಜಿ ತಂಗಿ ಮದ್ವೆ ಇತ್ತು. ಹಾಗಾಗಿ ನಾನು ಜನಾರ್ದನ ರಡ್ಡಿ ಮೊಮ್ಮಗಳ ನಾಮಕರಣಕ್ಕೆ ಹೋಗಿಲ್ಲ. ಈ ವಿಚಾರ ರಾಜಕೀಯ ಅರ್ಥ ಕಲ್ಪಸುವ ಅಗತ್ಯವಿಲ್ಲ. ಜೈಪುರ ಮದುವೆ ಮುಗಿಸಿ ಬರೋವಾಗ ತಡರಾತ್ರಿ ಆಯ್ತು ಅದ್ಕೆ ಹೋಗಿಲ್ಲ. ಜನಾರ್ದನ ರೆಡ್ಡಿ ಮೊಮ್ಮಗಳ ನಾಮಕರಣ ಹೋಗಿಲ್ಲ ಅಂತಾ ತಪ್ಪು ಕಲ್ಪಿಸುವುದು ಬೇಡ. ಬೇರೆ ಕೆಲಸದ ನಿಮಿತ್ತ ಕೆಲವೊಂದು ಕಾರ್ಯಕ್ರಮಕ್ಕೆ ಹೋಗಲು ಆಗಿಲ್ಲ. ಬೇರೆ ಕಾರ್ಯಕ್ರಮವಿತ್ತು ನಾನು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ರಾಜಕೀಯ ಹೊರತುಪಡಿಸಿ ನಾನು ಜನಾರ್ದನ ರೆಡ್ಡಿ ಸ್ನೇಹಿತರು, ಕುಟುಂಬ ಸ್ನೇಹ ರಾಜಕಾರಣ ಬೇರೆ, ಕುಟುಂಬ ಬೇರೆ. ಕೆಲವು ಬಾರಿ ರಾಜಕೀಯ ಮೇಲು ಕೆಳ ಆಗಬಹುದು. ರಾಜಕೀಯ ಹೊರತುಪಡಿಸಿ ನಾನು ಸ್ನೇಹಿತರು ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *