ʻಗೋಟ್ʼ ಸಿನಿಮಾ ಬಳಿಕ ರಾಜಕೀಯದಲ್ಲೇ ಸದ್ದು ಮಾಡ್ತಿದ್ದ ನಟ ದಳಪತಿ ವಿಜಯ್ (Thalapathy Vijay) ಈ ವಾರ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ವಿಶೇಷ ಅಂದ್ರೆ ವಿಜಯ್ ನಟನೆಯ ಕೊನೆಯ ಚಿತ್ರ ಎನ್ನಲಾಗುತ್ತಿರುವ `ಜನನಾಯಕನ್’ (Jana Nayagan) ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಮಲೇಷಿಯಾದಲ್ಲಿ ಶನಿವಾರ (ಡಿ.27) ಜರುಗಲಿದೆ.
ಆಡಿಯೋ ಲಾಂಚ್ ಹಿನ್ನೆಲೆ ಇಡೀ ಚಿತ್ರತಂಡ ಈಗಾಗಲೇ ಮಲೇಷಿಯಾ (Malaysia) ತಲುಪಿದೆ. ವಿಜಯ್ ಕಡೆಯ ಸಿನಿಮಾ ಕಾರ್ಯಕ್ರಮ ಎಂಬ ಉದ್ದೇಶದಿಂದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುವ ಕಾರ್ಯಕ್ರಮ ಇದು. ಆದರೆ ಪತ್ನಿ ಸಂಗೀತಾ ಹಾಗೂ ಮಕ್ಕಳು ಉಪಸ್ಥಿತರಿರುವುದಿಲ್ಲ ಎಂಬ ಅಧಿಕೃತ ಸುದ್ದಿ ಕೇಳಿಬಂದಿದೆ. ಇದನ್ನೂ ಓದಿ: ಟಾಕ್ಸಿಕ್‍ಗೆ ದುರಂಧರ್ ಎದುರಾಳಿ..!
ತಮಿಳಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಲೇಷಿಯಾದಲ್ಲಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಫಸ್ಟ್ ಟೈಂ ಜರುಗುತ್ತಿದೆ. ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯಲ್ಲಿ ರಘು ಪತ್ನಿ ಬರ್ತ್‌ಡೇ; ಸರ್ಪ್ರೈಸ್‌ಗೆ ಕಣ್ಣೀರಿಟ್ಟ ರಘು
ಟಿವಿಕೆ ಪಕ್ಷ ಸ್ಥಾಪಿಸಿರುವ ವಿಜಯ್ ಈ ಮೂಲಕ 2026ರ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಸ್ಪರ್ಧಿಸುವ ಉತ್ಸಾಹದಲ್ಲಿರುವ ವಿಜಯ್ ಸದ್ಯಕ್ಕೆ ಸಿನಿಮಾ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಹೀಗಾಗಿ ಈ ಕಾರ್ಯಕ್ರಮ ವಿಜಯ್ ಪಾಲಿಗೆ ದೊಡ್ಡ ಕಾರ್ಯಕ್ರಮ. ಇದಕ್ಕೆ ವಿಜಯ್ ಕುಟುಂಬಸ್ಥರು ಭಾಗಿಯಾಗದೇ ಇರೋದು ಅಭಿಮಾನಿಗಳಿಗೆ ನಿರಾಸೆ ತರಿಸಿದೆ.
ಅಂದಹಾಗೆ `ಜನನಾಯಕನ್’ ಚಿತ್ರವನ್ನ ಕನ್ನಡದ ಕೆವಿಎನ್ ಫಿಲ್ಮ್ಸ್ ನಿರ್ಮಿಸಿದ್ದು. ಮುಂದಿನ ವರ್ಷದ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ರಿಲೀಸ್ ಆಗಲಿದೆ. ಇದನ್ನೂ ಓದಿ: ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಾಮೆಂಟ್ – ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರಿಂದ 3 ವಿಶೇಷ ತಂಡ



