`ರೇಮೊ’ ಇಶಾನ್‌ಗೆ `ಜೇಮ್ಸ್’ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್

Public TV
1 Min Read

ಸ್ಯಾಂಡಲ್‌ವುಡ್‌ನಲ್ಲಿ `ಭರ್ಜರಿ’, `ಬಹದ್ದೂರ್’ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿರುವ ಚೇತನ್ ಕುಮಾರ್ `ಜೇಮ್ಸ್’ ಚಿತ್ರದ ನಂತರ ಈಗ ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ರೇಮೋ ಹೀರೋಗೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ `ಜೇಮ್ಸ್’ ಚಿತ್ರದ ನಂತರ ಯಾವ ಹೊಸ ಸಿನಿಮಾನೂ ಘೋಷಣೆ ಮಾಡಿರಲಿಲ್ಲ. ಈಗ ನಿರ್ದೇಶಕ ಚೇತನ್ ವಿಭಿನ್ನ ಸಿನಿಮಾ ಮೂಲಕ ಸೌಂಡ್ ಮಾಡ್ತಿದ್ದಾರೆ. ಇಶಾನ್‌ಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

ಪುರಿ ಜಗನ್ನಾಥ್ ನಿರ್ದೇಶನದ `ರೋಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟಿರೋ ನಟ ಇಶಾನ್ ಸದ್ಯ `ರೇಮೊ’ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಈಗ ಹೊಸ ಸಿನಿಮಾಗಾಗಿ ಚೇತನ್ ಕುಮಾರ್‌ಗೆ ಜತೆಯಾಗಿದ್ದಾರೆ. ಚೇತನ್ ಮತ್ತು ಇಶಾನ್ ಕಾಂಬಿನೇಷನ್ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಪಕ್ಕಾ ಮಾಸ್ ಜಾನರ್ ಕಥೆಯ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *