‘ಜೇಮ್ಸ್’ ನಿರ್ದೇಶಕನ ಜೊತೆ ಕೈಜೋಡಿಸಿದ ಅಣ್ಣಾವ್ರ ಮೊಮ್ಮಗ ಧೀರೆನ್

Public TV
1 Min Read

ದೊಡ್ಮನೆಯ ಕುಡಿ ಧೀರೆನ್ ರಾಜ್ ಕುಮಾರ್ (Dheeren Ramkumar) ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಜೇಮ್ಸ್’ (James) ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ (Chethan Kumar) ಜೊತೆ ಈ ಬಾರಿ ಅವರು ಕೈ ಜೋಡಿಸಿದ್ದಾರೆ. ದಸರಾ ಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಒಂದು ಕಡೆ ‘ಜೇಮ್ಸ್’ ನಂತರ ಗಟ್ಟಿಮೇಳ ರಕ್ಷ ಜೊತೆ ಸಿನಿಮಾ ಮಾಡುತ್ತಿದ್ದಾರೆ ಚೇತನ್ ಕುಮಾರ್. ಈ ಸಿನಿಮಾ ಮಾಡುವುದರ ಜೊತೆ ಜೊತೆಗೆ ಧೀರೆನ್ ಸಿನಿಮಾದ ಕೆಲಸದಲ್ಲೂ ಅವರು ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಗೆ ಹಾರಲು ಯಶ್ ಸರ್ವ ಸಿದ್ಧತೆ: ಭರ್ಜರಿ ತಯಾರಿಯಲ್ಲಿ ರಾಕಿಭಾಯ್

ಈ ಕಡೆ ಧೀರೆನ್ ಕೂಡ ತಮ್ಮದೇ ಆದ ರೀತಿಯಲ್ಲಿ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನ ಕಥೆಯ ಜೊತೆಗೆ ಧೀರೆನ್ ಮತ್ತು ಚೇತನ್ ಜೋಡಿ ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

‘ಶಿವ 143’ (Shiva 143) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ಧೀರೆನ್. ಇದೀಗ ಮತ್ತೊಂದು ಹೊಸ ಬಗೆಯ ಪಾತ್ರವನ್ನು ಮಾಡಲು ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಭರ್ ದಸ್ತ್ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್