ನೀವು ವೋಟು ಹಾಕದೇ ಮನೆಯಲ್ಲಿಯೇ ಕುಳಿತರೆ ಬಿಜೆಪಿಗೆ ಲಾಭ: ಮುಸ್ಲಿಮರಲ್ಲಿ ಜಮೀರ್ ಮನವಿ

Public TV
1 Min Read

ಬಾಗಲಕೋಟೆ: ನೀವು ವೋಟು ಹಾಕದೇ ಮನೆಯಲ್ಲಿಯೇ ಕುಳಿತರೆ ಬಿಜೆಪಿಗೆ ಲಾಭವಾಗುತ್ತದೆ. ಆದ್ದರಿಂದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಓಟು ಹಾಕಬೇಕು ಎಂದು ಮಾಜಿ ಸಚಿವ, ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (B.Z.Zameer Ahmed Khan) ಮುಸ್ಲಿಮರಲ್ಲಿ ಮನವಿ ಮಾಡಿದರು.

ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಸರ್ಕಾರದ ಅನ್ನಭಾಗ್ಯದ ಮಹತ್ವ ಕೊರೊನಾ ವೇಳೆ ಎಲ್ಲರಿಗೂ ಗೊತ್ತಾಯಿತು. ನನ್ನ ಕ್ಷೇತ್ರದ ಸ್ಲಮ್‍ಗಳ ಜನರು ದೇವರ ಮನೆಯಲ್ಲಿ ಸಿದ್ದರಾಮಯ್ಯ ಅವರ ಫೋಟೋ ಇಟ್ಟುಕೊಂಡಿದ್ದರು ಎಂದು ಹೇಳಿದರು. ಇದನ್ನೂ ಓದಿ: ‘KD’ ಅಡ್ಡಾದಲ್ಲಿ ಸಿಗ್ತಾರಂತೆ ಗುಳಿಕೆನ್ನೆ ಚೆಲುವೆ ಶಿಲ್ಪಾ ಶೆಟ್ಟಿ

ಬಿಜೆಪಿ (BJP) ಆಡಳಿತದಲ್ಲಿ ಅಡುಗೆ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಅದೇ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಮನೆಯ ಒಡತಿಗೆ ವರ್ಷಕ್ಕೆ 24 ಸಾವಿರ ರೂ. ಕೊಡುತ್ತೇವೆ. ಕಾಂಗ್ರೆಸ್ ಸರ್ಕಾರ ಯಾವಾಗ ಆಡಳಿತಕ್ಕೆ ಬಂದಿದೆಯೋ ಆಗ ಜನರಿಗೆ ಒಳ್ಳೆಯದಾಗಿದೆ. ಬಡವರ ಬಗ್ಗೆ ಕಾಳಜಿ ಮನಸ್ಸಿನಲ್ಲಿ ಇರಬೇಕು. ಬಿಜೆಪಿ ಬರೀ ಲೂಟಿ ಹೊಡೆಯುತ್ತಿದೆ ಎಂದು ಹರಿಹಾಯ್ದರು.

ಬಿಜೆಪಿ ಸಾಧನೆ ಮೇಲೆ ಮತಗಳನ್ನು ಕೇಳುವುದಿಲ್ಲ. ಹಿಂದೂ ಮುಸ್ಲಿಂ ಜನರ ನಡುವೆ ಜಗಳ ತಂದಿಟ್ಟು ಮತ ಕೇಳುತ್ತಾರೆ. ನನ್ನ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ 190 ಕೋಟಿ ರೂ. ಅನುದಾನ ತಂದಿದ್ದೆ. ಬಿಜೆಪಿ ಸರ್ಕಾರ ಬಂದಮೇಲೆ ಅದನ್ನೂ ಕೊಡಲಿಲ್ಲ. ಬಳಿಕ 20% ಕಮಿಷನ್ ಪಡೆದು 80 ಲಕ್ಷ ರೂ. ಅನುದಾನ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.

 ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರು ತಂದೆ ಸಿದ್ದು ನ್ಯಾಮಗೌಡರಿಗೆ ತಕ್ಕ ಮಗ. ಅಭಿವೃದ್ಧಿಯಲ್ಲಿ ತಂದೆಗೂ ಅಧಿಕ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಭರ್ಜರಿ ರೋಡ್‌ ಶೋ – ಮೋದಿಯಿಂದ ಮತ ಬೇಟೆ

Share This Article
Leave a Comment

Leave a Reply

Your email address will not be published. Required fields are marked *