ಕೇರಳ ಬಿಷಪ್ ಕಾಮ ಪುರಾಣ ಬಿಚ್ಚಿಟ್ಟಿದ್ದ ಫಾದರ್ ಅನುಮಾನಾಸ್ಪದ ಸಾವು!

Public TV
1 Min Read

ಕೊಚ್ಚಿ: ಅತ್ಯಾಚಾರ ಆರೋಪಿ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಸಾಕ್ಷ್ಯ ಹೇಳಿದ್ದ ಪಾದ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಕುರಿಯ ಕಟ್ಟುಥಾರ ಪಾದ್ರಿ (62) ಅವರ ಮೃತ ದೇಹ ಪಂಜಾಬಿನ ಹೊಶಿಯರ್‍ಪುರ ಜಿಲ್ಲೆಯ ಚರ್ಚ್‍ನಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೂವರೆಗೂ ಅವರ ಸಾವಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸದ್ಯ ಪಾದ್ರಿಯ ಕುಟುಂಬಸ್ಥರು ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ.

ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಿಷಪ್ ಫ್ರಾಂಕೋ ಮುಳಕಲ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಈ ವೇಳೆ ಅವರ ವಿರುದ್ಧ ಕುರಿಯ ಕಟ್ಟುಥಾರ ಅವರು ಸಾಕ್ಷಿ ಹೇಳಿ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಬಳಿಕ ಅವರ ವಿರುದ್ಧ ಬೆದರಿಕೆ ಕರೆಗಳು ಕೇಳಿ ಬರುತಿತ್ತು. ಸಾಕ್ಷ್ಯ ಹೇಳಿದ್ದಕ್ಕೆ ಕುರಿಯ ಕಟ್ಟುಥಾರ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಸಹೋದರ ಆರೋಪ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಎಸ್‍ಪಿ ಎಆರ್ ಶರ್ಮಾ, ಪಾದ್ರಿ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ಅವರು ವಾಸಿಸುವ ಚರ್ಚ್‍ನಲ್ಲಿಯೇ ಅವರ ಮೃತದೇಹ ಪತ್ತೆಯಾಗಿದೆ. ಅವರ ಮೃತ ದೇಹದ ಬಳಿ ವಾಂತಿ ಮಾಡಿಕೊಂಡಿದ್ದಾರೆ. ಅಲ್ಲದೇ ರಕ್ತದೊತ್ತಡದ ಮಾತ್ರೆಗಳು ಸ್ಥಳದಲ್ಲಿ ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಏನಿದು ಪ್ರಕರಣ:
ಕ್ರೈಸ್ತ ಸನ್ಯಾಸಿನಿ ಮೇಲೆ ಬಿಷಪ್ ಫ್ರಾಂಕೋ ಮುಳಕಲ್ ನಿರಂತರ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದಾರೆ. 2014 ರಿಂದ 2016 ವರೆಗೂ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಸನ್ಯಾಸಿನಿ ಆರೋಪಿಸಿದ್ದಾರೆ.

ಬಿಷಪ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಫ್ರಾಂಕೋ ಮುಳಕಲ್ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪ ಹೊಂದಿರುವ ಬಿಷಪ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ನ್ಯಾಯಾಲಯ ಆರೋಪಿ ಬಿಷಪ್ ಫ್ರಾಂಕೋ ಮುಳಕಲ್ ಗೆ ಜಾಮೀನು ನೀಡಿದೆ. ಜಾಮೀನು ಪಡೆದ ಆಗಮಿಸಿದ ಬಿಷಪ್‍ಗೆ ಆತನ ಭಕ್ತರು ಅದ್ಧೂರಿ ಸ್ವಾಗತ ಕೋರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *