ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ: ಜೈಶಂಕರ್ ಬೇಸರ

Public TV
1 Min Read

ಬ್ರೆಸಿಲಿಯಾ: ಚೀನಾ ಭಾರತದೊಂದಿಗಿನ ಗಡಿ ಒಪ್ಪಂದವನ್ನು ಕಡೆಗಣಿಸಿದೆ. ಗಲ್ವಾನ್ ಕಣಿವೆಯ ಬಿಕ್ಕಟ್ಟಿನಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು.

ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೈಶಂಕರ್ ಈ ವೇಳೆ ಮಾತನಾಡಿ, ನಾವು 1990ರ ದಶಕದಿಂದ ಚೀನಾದೊಂದಿಗೆ ಗಡಿ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಪಡೆಗಳನ್ನು ನಿಯೋಜಿಸುವುದನ್ನು ನಿಷೇಧಿಸುವ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ ಅವರು ಆ ಒಪ್ಪಂದವನ್ನು ನಿರ್ಲಕ್ಷಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ತಿಳಿಸಿದರು.

ಭಾರತ-ಚೀನಾ ನಡುವಿನ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್, ಸಂಬಂಧಗಳು ಏಕಮುಖವಾಗಿರಬಾರದು. ಸಂಬಂಧಗಳನ್ನು ಉಳಿಸಿಕೊಳ್ಳಲು ಪರಸ್ಪರ ಗೌರವ ಇರುವುದು ಮುಖ್ಯ. ಅವರು ನಮ್ಮ ನೆರೆಹೊರೆಯವರು. ಪ್ರತಿಯೊಬ್ಬರೂ ನೆರೆಹೊರೆಯವರೊಂದಿಗೆ ಬೆರೆಯಲು ಬಯಸುತ್ತಾರೆ. ಅದು ವೈಯಕ್ತಿಕ ಜೀವನ, ದೇಶಗಳ ನಡುವೆಯೂ ಅನ್ವಯಿಸುತ್ತದೆ ಎಂದರು. ಇದನ್ನೂ ಓದಿ: ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

ಭಾರತದ ಗಡಿ ಪ್ರದೇಶದಲ್ಲಿ ಚೀನಾ ಸೇನೆ ಒಪ್ಪಂದಗಳನ್ನು ಉಲ್ಲಂಘಿಸಿರುವ ಬಗ್ಗೆ ಭಾರತ ಹಾಗೂ ಚೀನಾ 2020ರ ಏಪ್ರಿಲ್-ಮೇ ತಿಂಗಳಿನಲ್ಲಿ ವಾಗ್ವಾದ ನಡೆಸಿದೆ. ಇದರ ಬೆನ್ನಲ್ಲೇ 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತದ ಸೇನೆಯೊಂದಿಗೆ ಚೀನಾ ಹಿಂಸಾತ್ಮಕ ಘರ್ಷಣೆ ನಡೆಸಿದ್ದು, ಇದರಿಂದ ಪರಿಸ್ಥಿತಿ ಹದಗೆಟ್ಟಿದೆ.

ಜೈಶಂಕರ್ ಅವರು 3 ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿದ್ದು, ಇಂದು ಬ್ರೆಜಿಲ್‌ನ ಸಾವೊ ಪಾಲೊದಲ್ಲಿ ಭಾರತೀಯ ಸಮುದಾಯವನ್ನು ಭೇಟಿ ಮಾಡಿದರು. ಜೈಶಂಕರ್ ಪರಾಗ್ವೆ ಮತ್ತು ಅರ್ಜೆಂಟೀನಾಗೂ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: 23 ಏಮ್ಸ್‌ಗಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸ್ಥಳೀಯ ನಾಯಕರ ಹೆಸರಿಡಿ – ಕೇಂದ್ರಕ್ಕೆ ಪ್ರಸ್ತಾವ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *