* 3.2 ಕೋಟಿಗೆ ಹರಾಜಾದ ಬೆಂಗಳೂರು ಟೀಮ್
* 31 ಕೋಟಿಗೆ 12 ತಂಡಗಳು ಹರಾಜು
ಅಹಮದಾಬಾದ್: ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಪ್ರಾಯೋಜಕತ್ವದ (JITO) ಜೈನ್ ಪ್ರೀಮಿಯರ್ ಲೀಗ್‌ನ (Jain Premier League) ಫ್ರಾಂಚೈಸಿ ಹರಾಜು ನಡೆಯಿತು. ಈ ಹರಾಜಿನಲ್ಲಿ 12 ತಂಡಗಳು 31 ಕೋಟಿ ರೂ.ಗೆ ಹರಾಜಾಗಿದ್ದು, ಬೆಂಗಳೂರು ತಂಡ (Bengaluru Team) 3.2 ಕೋಟಿ ರೂ.ಗೆ ಹರಾಜಾಗಿದೆ. ಈ ಮೂಲಕ ಅತಿ ಹೆಚ್ಚು ಬೆಲೆಗೆ ಹರಾಜಾದ ತಂಡದ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ.
ಜೈನ ಸಮುದಾಯದ ಕ್ರಿಕೆಟ್ ಆಟಗಾರರನ್ನು ಗುರಿಯಾಗಿಸಿಕೊಂಡು ಆರಂಭಗೊಂಡಿರುವ ಜೈನ್ ಪ್ರೀಮಿಯರ್ ಲೀಗ್ ಹರಾಜು ಐಪಿಎಲ್ ಶೈಲಿಯಲ್ಲೇ ಸ್ಪರ್ಧಾತ್ಮಕವಾಗಿ ನಡೆದಿದೆ. ಮುಂಬೈ ಸೊಬೊ ಸ್ಟಾರ್ 3.7 ಕೋಟಿ ರೂ.ಗಳಿಗೆ ಮಾರಾಟವಾಯಿತು, ಈ ಮೂಲಕ ಅತ್ಯಂತ ದುಬಾರಿ ಫ್ರಾಂಚೈಸ್ ಆಯಿತು. ನಂತರ ಬೆಂಗಳೂರು ತಂಡ 3.2 ಕೋಟಿ ರೂ.ಗೆ ಹರಾಜಾಗಿ ಎರಡನೇ ಸ್ಥಾನದಲ್ಲಿದೆ. ಸೂರತ್‌ನ ಉದ್ಯಮಿಯೊಬ್ಬರು ಗುಜರಾತ್ ಜೆಪಿಎಲ್ ತಂಡವನ್ನು 2.4 ಕೋಟಿ ರೂ.ಗಳಿಗೆ ಖರೀದಿಸಿದರು. 50ಕ್ಕೂ ಹೆಚ್ಚು ಬಿಡ್ಡರ್‌ಗಳು ಈ ಹರಾಜಿನಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಐಪಿಎಲ್ ನಕಲಿ ಟಿಕೆಟ್ ದಂಧೆಗೆ ಬೆಂಗಳೂರು ಪೊಲೀಸರ ಡಿಜಿಟಲ್ ಬ್ರೇಕ್!
ಜಿಐಟಿಒ ಸ್ಪೋರ್ಟ್ಸ್‌ನ ಕಾರ್ಯದರ್ಶಿ ಶ್ವೇತಾ ಹುಂಡಿಯಾ ಈ ಬಗ್ಗೆ ಮಾತನಾಡಿ, ಜೈನ ಸಮುದಾಯದ ಆಟಗಾರರಿಂದ 6,500 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಪ್ರಶಸ್ತಿ ಮತ್ತು ಟ್ರೋಫಿ ಪ್ರಾಯೋಜಕತ್ವಕ್ಕಾಗಿ 5.1 ಕೋಟಿ ರೂ.ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಐಟಿಒ ಅಪೆಕ್ಸ್ ಅಧ್ಯಕ್ಷ ಪೃಥ್ವಿರಾಜ್ ಕೊಠಾರಿ ಮಾತನಾಡಿ, ಹಿಂದಿನ ದತ್ತಿ ಮಾದರಿಯಿಂದ ಸಂಪೂರ್ಣವಾಗಿ ಲೀಗ್ ಕಾರ್ಪೊರೇಟ್ ಮಾದರಿಯಲ್ಲಿ ನಡೆಸಲಾಗುತ್ತಿದೆ. ಈ ವರ್ಷ, ಏಪ್ರಿಲ್-ಮೇ ತಿಂಗಳಲ್ಲಿ 12 ನಗರಗಳಲ್ಲಿ 40ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲು ನಾವು ಯೋಜಿಸಿದ್ದೇವೆ. ಪ್ಲೇಆಫ್‌ಗಳು ಮತ್ತು ಫೈನಲ್ ಪಂದ್ಯಗಳು ಮುಂಬೈನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ತಂಡದ ಮಾಲೀಕರು ಮೊದಲ ವರ್ಷದಲ್ಲಿ ಫ್ರಾಂಚೈಸಿ ಶುಲ್ಕದ ಕೇವಲ 50% ಪಾವತಿಸಬೇಕಾಗುತ್ತದೆ. JPL ನಿರ್ವಹಿಸುವ ಘಟಕವಾದ JITO ಸ್ಪೋರ್ಟ್ಸ್ ಫೌಂಡೇಶನ್ ತರಬೇತಿ, ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಭರಿಸಲಿದೆ. ಜೈನೇತರ ಹೂಡಿಕೆದಾರರು ತಂಡದಲ್ಲಿ 20% ಪಾಲನ್ನು ಹೊಂದಬಹುದು. ಋತುವಿನ ಕೊನೆಯಲ್ಲಿ, ಹೆಚ್ಚುವರಿ ಆದಾಯದ 40% ಅನ್ನು ತಂಡಗಳ ನಡುವೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಜೆಪಿಎಲ್‌ಗೆ ಘಟಾನುಘಟಿಗಳ ಸಾಥ್?
ಜೆಪಿಎಲ್‌ಗೆ ಪ್ರಮುಖ ಕ್ರಿಕೆಟಿಗರಾದ ಜಾಂಟಿ ರೋಡ್ಸ್, ಸನತ್ ಜಯಸೂರ್ಯ, ರಾಸ್ ಟೇಲರ್, ಶಿಖರ್ ಧವನ್, ಸುರೇಶ್ ರೈನಾ ಮತ್ತು ಮುನಾಫ್ ಪಟೇಲ್ ಸೇರಿದಂತೆ ಹಲವು ಹೆಸರುಗಳನ್ನು ಪರಿಗಣಿಸಲಾಗುತ್ತಿದೆ. ಅವರ ಒಳಗೊಳ್ಳುವಿಕೆ ಲೀಗ್‌ನ ವಿಶ್ವಾಸಾರ್ಹತೆ ಹೆಚ್ಚಿಸಲಿದೆ. ಇದನ್ನೂ ಓದಿ: ಅಂದು ರಾಹುಲ್, ಇಂದು ಪಂತ್ – ಸೋಲಿನ ಬೆನ್ನಲ್ಲೇ ಗೋಯೆಂಕಾ ಭಾರೀ ಚರ್ಚೆ

