ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ

Public TV
2 Min Read

ಬೆಳಗಾವಿ: ಚಿಕ್ಕೋಡಿ ಹಿರೇಕೋಡಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ (Kama Kumara Nandi Maharaj) ಹತ್ಯೆ ಪ್ರಕರಣ ತನಿಖೆ ಚುರುಕುಗೊಂಡಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು 7 ದಿನ ಕಸ್ಟಡಿಗೆ ಪಡೆದಿದ್ದಾರೆ. ಇದಕ್ಕೂ ಮುನ್ನ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದ ಆರೋಪಿ ನಾರಾಯಣ ಮಾಳಿ, ಮತ್ತೊಬ್ಬ ಆರೋಪಿ ಹಸನಸಾಬ್ ದಲಾಯತ್‍ನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯ್ತು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯ್ತು.

ಇಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ (Nalin Kumar Kateel) ನೇತೃತ್ವದ ಬಿಜೆಪಿ ಸಮಿತಿ ಹಿರೇಕೋಡಿ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ರಾಜ್ಯ ಸರ್ಕಾರದ ವಿರುದ್ಧ ಕಟೀಲ್ ವಾಗ್ದಾಳಿ ನಡೆಸಿದ್ರು. ಈ ಪ್ರಕರಣದಲ್ಲಿ ಕೇವಲ ಇಬ್ಬರಲ್ಲ, ಇನ್ನಷ್ಟು ಮಂದಿ ಇರುವ ಶಂಕೆ ಇದೆ ಅಂದ್ರು. ಎಲ್ಲವೂ ಸಂಶಯಾಸ್ಪದವಾಗಿದ್ದಾಗ ಪ್ರಕರಣವನ್ನು ಸಿಬಿಐಗೆ ವಹಿಸೋದ್ರಲ್ಲಿ ತಪ್ಪೇನಿದೆ. ಒಬ್ಬ ಆರೋಪಿ ಹೆಸರನ್ನು ಕೊನೆಯವರೆಗೂ ಮುಚ್ಚಿಟ್ಟಿದ್ದು ಏಕೆ ಎಂದು ಕಟೀಲ್ ಪ್ರಶ್ನಿಸಿದ್ರು.

ಈ ಪ್ರಕರಣ ಸಂಬಂಧ ಸದನಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್ (G Parameshwar), ಇದು 6 ಲಕ್ಷ ರೂಪಾಯಿ ವ್ಯವಹಾರ. ಹಣ ವಾಪಸ್ ಕೇಳಿದಾಗ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದ ತನಿಖೆ ಸರಿಯಾಗಿಯೇ ನಡೆಯುತ್ತಿದೆ. ಇದನ್ನು ಸಿಬಿಐಗೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನಮ್ ಪೊಲೀಸ್ರು ದೇಶದಲ್ಲೇ ಬೆಸ್ಟ್ ಎಂದು ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಜೈನ ಮುನಿ ಕೊಲೆ ಕೇಸ್‌ – ಸಿಬಿಐ ತನಿಖೆಗೆ ಆಗ್ರಹಿಸಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

ನಮ್ಮ ಕಾಲದಲ್ಲಿ ಮಾತ್ರ ಕೊಲೆ ನಡೆದಿಲ್ಲ. ಎಲ್ಲರ ಕಾಲದಲ್ಲೂ ನಡೆದಿದೆ ಎಂಬ ಗೃಹ ಸಚಿವರ ಮಾತು ಬಿಜೆಪಿಗರನ್ನು ಸಿಟ್ಟಿಗೆಬ್ಬಿಸಿತು. ಈ ವೇಳೆ ಪೊಲೀಸರನ್ನು ಸಿಎಂ ಸಮರ್ಥಿಸಿಕೊಂಡರು. ಸರ್ಕಾರದ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮತ್ತೆ ಸದನದ ಬಾವಿಗೆ ಇಳಿಯಿತು. ಪರಸ್ಪರ ವಾಕ್ಸಮರ ನಡೆದವು. ಸರಣಿ ಹತ್ಯೆಗಳನ್ನು ಖಂಡಿಸಿ ಬುಧವಾರ ಬಿಜೆಪಿ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್