ಜೈಲು ನಿಯಮ ಉಲ್ಲಂಘನೆ – ದರ್ಶನ್ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆ

Public TV
1 Min Read

ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ (Darshan) ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ದರ್ಶನ್ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇನ್ನೂ ನಿನ್ನೆ (ಅ.22) ವಿಮ್ಸ್ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ದರ್ಶನ್ ಬರುವ ಮುನ್ನ ಪತಿಯ ಒಳಿತಿಗೆ ಪತ್ನಿ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆಯಿದೆ. ಜೈಲು ನಿಯಮದ ಉಲ್ಲಂಘನೆ ಹಿನ್ನೆಲೆ ದರ್ಶನ್‌ಗೆ ಕಟ್ಟಿದ್ದ ದಾರ ತೆಗೆಸುವ ಸಾಧ್ಯತೆಯಿದೆ. ಇದನ್ನೂ ಓದಿ:ದರ್ಶನ್‌ ನೋಡಲು ಜೈಲಿಗೆ ಬಂದ ವಿಜಯಲಕ್ಷ್ಮಿ

ನಿನ್ನೆ ದರ್ಶನ್ ವಿಮ್ಸ್ ಆಸ್ಪತ್ರೆಗೆ ಸ್ಕ್ಯಾನಿಂಗ್‌ಗೆ ತೆರಳುವ ಮುನ್ನ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ, ಪತಿಗೆ ದೇವರ ಪ್ರಸಾದದ ಜೊತೆ ದಾರವನ್ನು ಕೂಡ ಕಟ್ಟಿದ್ದರು. ದರ್ಶನ್‌ಗೆ ಏನು ಸಮಸ್ಯೆ ಆಗಬಾರದು ಎಂದು ಪತ್ನಿ ದಾರವೊಂದನ್ನು ಕುತ್ತಿಗೆಗೆ ಕಟ್ಟಿದ್ದರು. ಅದನ್ನು ಕೂಡ ತೆಗೆಸುವ ಸಾಧ್ಯತೆ ಇದೆ. ಜೈಲು ನಿಯಮದ ಪ್ರಕಾರ, ಖೈದಿ ಅಥವಾ ವಿಚಾರಣಾಧಿನ ಖೈದಿ ಯಾವುದೇ ದಾರ, ಚೈನು, ಕಡಗ ಹಾಕಿಕೊಳ್ಳುವಂತಿಲ್ಲ. ಹಾಗಾಗಿ ರೂಲ್ಸ್ ಪ್ರಕಾರ, ದರ್ಶನ್ ಹಾಕಿಕೊಂಡಿರುವ ದಾರವನ್ನು ಕೂಡ ತೆಗೆಸಲಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಜೂನ್ 11ರಂದು ಬಂಧಿಸಿದ್ದು, ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Share This Article