ಭಾರತದ ವಿರುದ್ಧ ಸರಣಿ ಗೆದ್ದ ಬಳಿಕ ‘ಜೈ ಶ್ರೀರಾಮ್’ ಎಂದು ಸಂಭ್ರಮಿಸಿದ ಕೇಶವ್ ಮಹಾರಾಜ್

Public TV
1 Min Read

ಜೋಹನ್ಸ್‌ಬರ್ಗ್: ಟೀಂ ಇಂಡಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತವರಿನಲ್ಲಿ ಏಕದಿನ ಸರಣಿ ಸರಣಿ ಗೆದ್ದ ಬಳಿಕ ಆಫ್ರಿಕಾ ಸ್ಪಿನ್ನರ್ ಕೇಶವ್ ಮಹಾರಾಜ್ ಜೈ ಶ್ರೀರಾಮ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.‌

ಭಾರತದ ವಿರುದ್ಧ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಆಫ್ರಿಕಾ, ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿತ್ತು. ಸರಣಿ ಗೆದ್ದ ಖುಷಿಗೆ ಭಾರತ ಮೂಲದ ಆಟಗಾರ ಕೇಶವ್ ಮಹಾರಾಜ್, ಎಂತಹ ಅಧ್ಭುತವಾದ ಸರಣಿ ಇದು, ನಮ್ಮ ತಂಡದ ಬಗ್ಗೆ ಹೆಚ್ಚು ಹೆಮ್ಮೆ ಪಡಲು ಸಮಯವಿಲ್ಲ. ಮುಂದಿನ ಸರಣಿಗೆ ಸಿದ್ಧವಾಗುವ ಅನಿವಾರ್ಯತೆ ಇದೆ ಜೈ ಶ್ರೀರಾಮ್ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರೊ ಕಬಡ್ಡಿಗೆ ಕೊರೊನಾ ಅಡ್ಡಿ – ಇಂದಿನಿಂದ ಜ.28ರ ವರೆಗೆ ಪ್ರತಿದಿನ 1 ಪಂದ್ಯ

ಕೇಶವ್ ಮಹಾರಾಜ್ ಮೂಲತಃ ಭಾರತದವರು ಅವರ ಪೂರ್ವಜರು ಉತ್ತರಪ್ರದೇಶದಿಂದ ದಕ್ಷಿಣ ಆಫ್ರಿಕಾಗೆ ವಲಸೆ ಹೋಗಿದ್ದರು. ಅವರ ತಂದೆ ಕೂಡ ಕ್ರಿಕೆಟಿಗರಾಗಿದ್ದರು. ಇದೀಗ ಮಹಾರಾಜ್ ಆಫ್ರಿಕಾ ತಂಡದಲ್ಲಿ ಪ್ರಮುಖ ಆಟಗಾರನಾಗಿ ಮಿಂಚುತ್ತಿದ್ದಾರೆ. ಏಕದಿನ ಸರಣಿಯಲ್ಲಿ 2 ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಿತ್ತು ಮಿಂಚಿದ್ದಲ್ಲದೇ ಭಾರತದ ಬ್ಯಾಟಿಂಗ್ ಸರದಿಗೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಮುಳುವಾಗಿದ್ದರು.  ಇದನ್ನೂ ಓದಿ: ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿದರೆ ಉಳಿದವರ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳಲ್ಲ: ಹಫೀಜ್

 

View this post on Instagram

 

A post shared by Keshav Maharaj (@keshavmaharaj16)

ಆಫ್ರಿಕಾ ಸರಣಿಗೆ ಭಾರತ ತಂಡ ಸ್ಟಾರ್ ಆಟಗಾರೊಂದಿಗೆ ಬಲಿಷ್ಠ ತಂಡದೊಂದಿಗೆ ತೆರಳಿತ್ತು. ಆದರೆ ತವರಿನಲ್ಲಿ ಆಫ್ರಿಕಾ ತಂಡದ ಉತ್ತಮ ಪ್ರದರ್ಶನದ ಮುಂದೆ ಮಂಕಾದ ಭಾರತ ಟೆಸ್ಟ್ ಹಾಗೂ ಏಕದಿನ ಸರಣಿ ಸೋತು ಮುಖಭಂಗ ಅನುಭವಿಸಿದೆ.

Share This Article
Leave a Comment

Leave a Reply

Your email address will not be published. Required fields are marked *