ಕನ್ನಡ ನೆಲದ ಅನ್ನ ತಿಂದ ಸಮಯ ಸಾಧಕಿಯಿಂದ ವ್ಯರ್ಥಮಾತು: ರಮ್ಯಾಗೆ ಜಗ್ಗೇಶ್ ಟಾಂಗ್

Public TV
1 Min Read

ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಹೆಸರನ್ನು ಪ್ರಸ್ತಾಪಿಸದೇ ನವರಸನಾಯಕ ಜಗ್ಗೇಶ್ ತಿರುಗೇಟು ನೀಡಿದ್ದಾರೆ.

“ದೇಶ ಮೆಚ್ಚುವ ನರೇಂದ್ರ ಮೋದಿ ನಿರ್ಣಯಕ್ಕೆ ಕಂಗಾಲಾಗಿದ್ದ ಸಮಯ ಸಾಧಕರು. ದೇಶ ಸೈನಿಕ ಪಾಕ್‍ಗೆ ಸೆರೆಸಿಕ್ಕಾಗ ಮಾತನಾಡುತ್ತಿದ್ದಾರೆ. ಸದ್ಯ ವಿಷಯ ಸಿಕ್ಕಿತು ಎಂದು ಮೋದಿ ವಿರುದ್ಧ ಇಂದು ಮಾತನಾಡಲು ಎಂದು ನಿಂತಿದ್ದಾರೆ. ಅದರಲ್ಲಿ ನಮ್ಮ ನೆಲದ ಅನ್ನತಿಂದು, ನಮ್ಮ ಕನ್ನಡ ಜನ ಚಪ್ಪಾಳೆ ಪಡೆದು ಜೀವನ ಕಂಡ ಮಹನೀಯಳಂತು, ಮಾತನಾಡಲು ಅವಕಾಶ ಸಿಕ್ಕಿತು ಎಂದು ವ್ಯರ್ಥ ಮಾತು ಶುರುವಿಟ್ಟಿದ್ದಾಳೆ. ಸಮಯಸಾಧಕಿ” ಎಂದು ಹೆಸರು ಹೇಳದೆ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ: ರಮ್ಯಾ ಪ್ರಶ್ನೆ

ರಮ್ಯಾ, “ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂಬ ವಿಚಾರ ನಿಮಗೆ ಗೊತ್ತಿರಲಿಲ್ಲವೆ? ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ! ನಮ್ಮನ್ನು ಉದ್ದೇಶಿಸಿ ಮಾತನಾಡುವುದು ಬಿಟ್ಟು ಆ್ಯಪ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಪೈಲಟ್ ಬಗ್ಗೆ ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ” ಎಂದು ರಮ್ಯಾ ಟ್ವೀಟ್ ಮಾಡಿದ್ದರು.

ಅರುಣ್ ಜೇಟ್ಲಿ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪುಲ್ವಾಮಾ ದಾಳಿ ಬಳಿಕ ದೇಶಾದ್ಯಂತ ಶೋಕಾಚರಣೆಯಲ್ಲಿ ಮುಳುಗಿತ್ತು. ಬಿಜೆಪಿ ಮಾತ್ರ ಪುಲ್ವಾಮಾ ಉಗ್ರರ ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿತ್ತು. 2008ರಲ್ಲಿ ಉಗ್ರರ ದಾಳಿ ನಡೆದಾಗ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕೇಂದ್ರದತ್ತ ಬೊಟ್ಟು ಮಾಡಿದ್ದರು. ಇದೀಗ ಕಾಂಗ್ರೆಸ್ ಯೋಧ ಮತ್ತು ಸರ್ಕಾರದೊಂದಿಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮೋದಿತಯವರ ಕೆಲ ಹೇಳಿಕೆಗಳಳ್ಳು ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *