ಸಂವಿಧಾನದ ಮೂಲಭೂತ ಹಕ್ಕುಗಳ ಭಾಗದಲ್ಲಿ ಶ್ರೀರಾಮ-ಲಕ್ಷ್ಮಣ, ಸೀತಾದೇವಿಯ ಚಿತ್ರಗಳಿವೆ: ಜಗದೀಪ್‌ ಧನಕರ್‌

Public TV
1 Min Read

ನವದೆಹಲಿ: ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯದ ಮೇಲ್ಭಾಗದಲ್ಲಿ ಭಗವಾನ್‌ ಶ್ರೀರಾಮ, ಲಕ್ಷ್ಮಣ, ಸೀತಾ ದೇವಿಯ ಚಿತ್ರವನ್ನು ಚಿಂತನಾಶೀಲವಾಗಿ ಇರಿಸಲಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ (Jagdeep Dhankhar) ತಿಳಿಸಿದ್ದಾರೆ.

‘ರಾಮ ರಾಜ್ಯ’ದ ಪರಿಕಲ್ಪಿನೆಯನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ನಮ್ಮ ಸಂವಿಧಾನದಲ್ಲಿ 20 ಕ್ಕೂ ಹೆಚ್ಚು ಚಿತ್ರಗಳಿವೆ. ಮೂಲಭೂತ ಹಕ್ಕುಗಳ ಭಾಗದ ಮೇಲೆ ಭಗವಾನ್ ರಾಮ, ಲಕ್ಷ್ಮಣ ಮತ್ತು ಸೀತಾ ದೇವತೆಯ ಚಿತ್ರವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ

ರಾಷ್ಟ್ರೀಯ ಎಲೆಕ್ಟ್ರೋ ಹೋಮಿಯೋಪತಿ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಇತಿಹಾಸ ತಿಳಿಯದ ಅಜ್ಞಾನಿಗಳು ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಅಫಿಡವಿಟ್ ನೀಡಿದಾಗ ನನಗೆ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಗವಾನ್ ರಾಮ ಮತ್ತು ‘ರಾಮರಾಜ್ಯ’ದ ಪರಿಕಲ್ಪಿನೆಯನ್ನು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನದ ರೂಪಕರು ಅದನ್ನು ಉತ್ತುಂಗದಲ್ಲಿಟ್ಟಿದ್ದಾರೆ. ಭಗವಾನ್ ರಾಮನನ್ನು ಅಗೌರವಿಸುವವರು, ಬಹಳ ಚಿಂತನಶೀಲವಾಗಿ ಮತ್ತು ವಿವೇಚನೆಯಿಂದ ಸಂವಿಧಾನದಲ್ಲಿ ಭಗವಾನ್ ರಾಮನ ಆ ಚಿತ್ರಗಳನ್ನು ಇರಿಸಿರುವವರಿಗೆ ಅಗೌರವ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: I.N.D.I.A ಮೈತ್ರಿಕೂಟದ ಜವಾಬ್ದಾರಿ ಮಲ್ಲಿಕಾರ್ಜುನ್‌ ಖರ್ಗೆ ಹೆಗಲಿಗೆ

ಸಮಾಜದಲ್ಲಿ ಎಲ್ಲ ವರ್ಗಗಳು ಒಗ್ಗಟ್ಟಾಗಿ ಇದ್ದಾಗ ಮಾತ್ರ ಸಮಾಜ ಸ್ವಸ್ಥವಾಗಿ ಉಳಿಯುತ್ತದೆ. ಸಮಾಜವನ್ನು ಒಡೆಯಲು ಬಯಸುವವರು, ರಾಜಕೀಯ ಲಾಭಕ್ಕಾಗಿ ವಿಷವನ್ನು ಹರಡಲು ಬಯಸುವವರು ಸಮಾಜದ ಶತ್ರುಗಳು ಎಂದು ಕಿಡಿಕಾರಿದ್ದಾರೆ.

Share This Article