60ರ ದಶಕದ ನಟಿಯಾದ ಜಾಕ್ವೆಲಿನ್: ಪ್ರಿಯಾ ರಾಜ್‌ವಂಶ್ ಬಯೋಪಿಕ್‌ನಲ್ಲಿ `ರಾ ರಾ ರಕ್ಕಮ್ಮ’

Public TV
1 Min Read

ಬಾಲಿವುಡ್‌ನ ಪ್ರತಿಭಾವಂತ ನಟಿ ಪ್ರಿಯಾ ರಾಜ್‌ವಂಶ್ ಜೀವನವನ್ನ ತೆರೆಯ ಮೇಲೆ ತೋರಿಸಲು ನಿರ್ದೇಶಕ ಪ್ರದೀಪ್ ಸರ್ಕಾರ್ ಸಜ್ಜಾಗಿದ್ದಾರೆ. ಪ್ರಿಯಾ ರಾಜ್‌ವಂಶ್ ಬಯೋಪಿಕ್‌ಗೆ ರಾ ರಾ ರಕ್ಕಮ್ಮ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನ ಆಯ್ಕೆ ಮಾಡಲಾಗಿದೆ.

ಚೇತನ್‌ ಆನಂದ್‌ ನಿರ್ದೇಶನದ `ಹಕೀಕತ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪರಿಚಿತರಾದ ನಟಿ ಪ್ರಿಯಾ, ಸಿನಿಮಾ ಪ್ರಪಂಚದಲ್ಲಿ ಇದ್ದಿದ್ದು 22 ವರ್ಷ, ಮಾಡಿದ್ದು 7 ಸಿನಿಮಾ ಮಾತ್ರ. ಚೇತನ್ ಆನಂದ್ ನಿರ್ದೇಶನದ ಸಾಲು ಸಾಲು 7 ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ರು. ಇವರಿಬ್ಬರಿಗೂ ಮದುವೆಯಾಗಿದೆ ಎಂಬ ಗಾಸಿಪ್ ಕೂಡ ಹರಿದಾಡಿತ್ತು. ಈ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ಸಿನಿಮಾ ಮಾಡ್ತಿದ್ದರು. ಇದನ್ನೂ ಓದಿ:ಸೀರೆಯಲ್ಲಿ ಮಿಂಚಿದ ಉರ್ಫಿ ಜಾವೇದ್: ಹೀಗೂ ಸೀರೆ ಉಡಬಹುದಾ ಎಂದ ಫ್ಯಾನ್ಸ್

ಬಳಿಕ 1997ರಲ್ಲಿ ಚೇತನ್ ಆನಂದ್ ನಿಧನರಾದ್ದರು. ನಂತರ 2000 ಇಸವಿಯಲ್ಲಿ ಪ್ರಿಯಾ ರಾಜ್‌ವಂಶ್ ನಿಗೂಡವಾಗಿ ಹತ್ಯೆಯಾದ್ದರು. ಇದೀಗ ಈ ಟ್ರ್ಯಾಜಿಡಿ ಸ್ಟೋರಿಯನ್ನ ತೆರೆಗೆ ತರಲು ಪ್ರದೀಪ್ ಜತೆ ಜಾಕ್ವೆಲಿನ್ 60ರ ದಶಕದ ನಟಿಯಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಪ್ರಿಯಾ ರಾಜ್‌ವಂಶ್ ಪಾತ್ರಕ್ಕೆ ಜಾಕ್ವೆಲಿನ್ ಜೀವ ತುಂಬಿಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *