ಬೆಂಗಳೂರು: ಆಳಂದ ಕ್ಷೇತ್ರದಲ್ಲಿ ಅಕ್ರಮ ಆಗಿರೋದು ಸತ್ಯ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ (Sharana Prakash Patil) ಅವರು ರಾಹುಲ್ ಗಾಂಧಿ ಆರೋಪವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ.ಆರ್.ಪಾಟೀಲ್ ಆಳಂದದಲ್ಲಿ ಅಕ್ರಮ ಆಗಿತ್ತು ಅಂತ ಕಂಪ್ಲೇಂಟ್ ಕೊಟ್ಟಿದ್ದರು. ನಾನು, ಪ್ರಿಯಾಂಕ್ ಎಲೆಕ್ಷನ್ ಕಮೀಷನ್‌ಗೆ ದೂರು ಕೊಟ್ಟಿದ್ದೆವು. ವೋಟ್ ಎನ್ ರೋಲ್ ಮಾಡೋಕೆ ದೂರು ಕೊಡಲಾಗಿತ್ತು. ಅಕ್ರಮದ ಆರೋಪ ಮಾಡಿದಾಗ ಅದನ್ನ ಸ್ಟಾಪ್ ಮಾಡಿದ್ದರು. ಆದರೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿಲ್ಲ. ರಾಹುಲ್ ಗಾಂಧಿಯವರ ಮಾತು ಸತ್ಯವಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಸಾಫ್ಟ್‌ವೇರ್ ಬಳಸಿ ಆಳಂದದಲ್ಲಿ 6018 ಮತದಾರರು ಡಿಲೀಟ್: ರಾಹುಲ್ ಗಾಂಧಿ ಬಾಂಬ್
ಗುರುವಾರ (ಸೆ.18) ನವದೆಹಲಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ಎಲೆಕ್ಷನ್ ವೇಳೆ 6018 ಮತದಾರರನ್ನ ಡಿಲೀಟ್ ಮಾಡಲು ಯತ್ನಿಸಿದ್ದರು ಎಂದು ದೂರಿದ್ದಾರೆ. ಬೇರೆ ರಾಜ್ಯಗಳ ಫೋನ್ ನಂಬರ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್ ವೋಟ್‌ಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಸೂರ್ಯಕಾಂತ್ ಹೆಸರು ಬಳಸಿ 14 ನಿಮಿಷದಲ್ಲಿ 12 ವೋಟ್ ಡಿಲೀಟ್ ಮಾಡಲಾಗಿದೆ. ಕಾಂಗ್ರೆಸ್ ಬಲವಾಗಿರುವ ಬೂತ್‌ಗಳನ್ನೇ ಟಾರ್ಗೆಟ್ ಮಾಡಿ ಮತಗಳ್ಳತನ ಮಾಡಲಾಗಿದೆ ಎಂದಿದ್ದಾರೆ.