3 ತಿಂಗಳು ಎಟಿಎಂನಿಂದ ತೆಗೆಯೋ ಹಣಕ್ಕೆ ಸೇವಾ ಶುಲ್ಕ ಇಲ್ಲ

Public TV
2 Min Read

– ಜನ ಸಾಮಾನ್ಯರಿಗಾಗಿ ಸರ್ಕಾರದ ನಾಲ್ಕು ಹೆಜ್ಜೆ
– ಉದ್ಯೋಗಿ, ಉದ್ಯಮಿಗಳಿಗೆ ಕೊಂಚ ರಿಲೀಫ್

ನವದೆಹಲಿ: ಕೊರೊನಾ ವೈರಸ್ ಭಾರತದ ಅರ್ಥ ವ್ಯವಸ್ಥೆಗೆ ಭಾರೀ ಹೊಡೆತವನ್ನು ನೀಡಿದೆ. ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾದ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಇಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಜನಹಿತಕ್ಕಾಗಿ ಹಲವು ಪ್ಯಾಕೇಜ್ ಘೋಷಿಸಿದ್ದಾರೆ. ಈ ಎಲ್ಲ ಘೋಷಣೆಗಳು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರಲಿದೆ.

ಜನ ಸಾಮಾನ್ಯರಿಗಾಗಿ ಸರ್ಕಾರದ ನಾಲ್ಕು ಹೆಜ್ಜೆ
1. ಮುಂದಿನ ಮೂರು ತಿಂಗಳು ಯಾವುದೇ ಎಟಿಎಂನಿಂದ ಹಣ ಡ್ರಾ ಮೇಲೆ ಸೇವಾ ಶುಲ್ಕ ಇರುವುದಿಲ್ಲ.
2. ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಳ್ಳುವ ಅವಶ್ಯಕತೆ ಇಲ್ಲ.
3. ಐಟಿಆರ್ ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ಜೂನ್ 30ರವರೆಗೆ ವಿಸ್ತರಣೆ
4. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳುವ ಅವಧಿ ಜೂನ್ 30ರವರೆಗೆ ವಿಸ್ತರಣೆ.

ಉದ್ಯೋಗಿ, ಉದ್ಯಮಿಗಳಿಗೆ ಕೊಂಚ ರಿಲೀಫ್
1. ಟಿಡಿಎಸ್ ಪಾವತಿ ವಿಳಂಬ ಮೇಲಿನ ಬಡ್ಡಿಯನ್ನು ಶೇ.12ರಿಂದ ಶೇ.9ಕ್ಕೆ ಇಳಿಕೆ.
2. 2018-19 ಆರ್ಥಿಕ ವರ್ಷದ ಇನ್‍ಕಮ್ ಟ್ಯಾಕ್ಸ್ ಫೈಲ್ ಮಾಡಲು ಜೂನ್ 30ರವರೆಗೆ ಅವಕಾಶ.
3. ವಿವಾದ್ ಸೇ ವಿಶ್ವಾಸ್ ಯೋಜನೆ ಮತ್ತು ಆಧಾರ್-ಪ್ಯಾನ್ ಲಿಂಕ್ ಮಾಡುವ ದಿನಾಂಕ ಜೂನ್ 30ರವರೆಗೆ ವಿಸ್ತರಣೆ.
4. 5 ಕೋಟಿ ರೂ.ಗೂ ಕಡಿಮೆ ಟರ್ನ್ ಓವರ್ ಹೊಂದಿರುವ ಕಂಪನಿಗಳಿಗೆ ತಡವಾಗಿ ಮಾಡುವ ಜಿಎಸ್‍ಟಿ ಫೈಲಿಂಗ್ ಮೇಲೆ ವಿಧಿಸಲಾಗುವ ಬಡ್ಡಿ, ದಂಡ ಮತ್ತ ಲೇಟ್ ಫೀಸ್ ಗಳಿಂದ ವಿನಾಯ್ತಿ. ಮಾರ್ಚ್-ಏಪ್ರಿಲ್-ಮೇ ಫೈಲಿಂಗ್ ಮಾಡಲು ಜೂನ್ 30ರವರೆಗೆ ಅವಕಾಶ.
5. ರಫ್ತು ಮತ್ತು ಆಮದು ವ್ಯವಹಾರಗಳಲ್ಲಿ ಸರಳೀಕರಣ ಮತ್ತು ಪರಿಹಾರ. ಕಸ್ಟಮ್ ಕ್ಲಿಯರೆನ್ಸ್ ಸೇರಿದಂತೆ ಹಲವು ಸೇವೆಗಳು ಜೂನ್ 30ರವರೆಗೆ ಲಭ್ಯ. ಈ ಸಂಬಂಧ 24 ಗಂಟೆಗೂ ಕಾರ್ಯ ನಿರ್ವಹಣೆ
6. ಕಂಪನಿಯ ನಿರ್ದೇಶಕರು 182 ದಿನ ದೇಶದಲ್ಲಿ ಇರಬೇಕಾದ ಅನಿವಾರ್ಯತೆಯಿಂದ ಮುಕ್ತ.
7. ಒಂದು ಕೋಟಿ ರೂ.ಗಿಂತಲೂ ಕಡಿಮೆ ವ್ಯವಹಾರ ನಡೆಸುವ ಕಂಪನಿಗಳ ವಿರದ್ಧ ದಿವಾಳಿ ಪ್ರಕಿಯೆ ಆರಂಭಿಸಲ್ಲ.

ಕೊರೊನಾ ವೈರಸ್ ಹರಡುವ ಮೊದಲೇ ಭಾರತದ ಆರ್ಥಿಕ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳು ಸ್ತಬ್ಧಗೊಂಡಿದ್ದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

Share This Article
Leave a Comment

Leave a Reply

Your email address will not be published. Required fields are marked *