ಗರ್ಭಿಣಿಯನ್ನು 5 ಕಿಮೀ ಹೊತ್ತೊಯ್ದು ಆಸ್ಪತ್ರೆ ದಾಖಲಿಸಿದ ಯೋಧರು – ವಿಡಿಯೋ ವೈರಲ್

Public TV
1 Min Read

ರಾಯಪುರ: ಇಂಡೋ ಟಿಬೆಟಿಯನ್ ಗಡಿ ರೇಖೆಯ ಪೊಲೀಸರು(ಐಟಿಬಿಪಿ) ಗರ್ಭಿಣಿಯನ್ನು 5 ಕಿಮೀ ದೂರ ಹೆಗಲ ಮೇಲೆ ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ ಘಟನೆ ಛತ್ತೀಸ್‍ಗಢದ ಕೊಂಡಾಗವ್ನ್ ಜಿಲ್ಲೆಯಲ್ಲಿ ನಡೆಸಿದೆ.

ಜಿಲ್ಲೆಯ ಹದೇಲಿ ಗ್ರಾಮದ ಸಹದಲಿ ಎಂಬ ತುಂಬು ಗರ್ಭಿಣಿಯಾಗಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಸರಿಯಾದ ರಸ್ತೆ ಸಂಪರ್ಕ ಇಲ್ಲದ ಗ್ರಾಮಕ್ಕೆ ಅಂಬುಲೆನ್ಸ್ ಸೇವೆಯೂ ಲಭ್ಯವಿಲ್ಲದಾಗಿದೆ. ಇದೇ ವೇಳೆ ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಟಿಬಿಪಿ 41ನೇ ಪಡೆಯ ಯೋಧರು ಮಹಿಳೆಯ ಸಹಾಯಕ್ಕೆ ಆಗಮಿಸಿದ್ದಾರೆ.

ಈ ಕುರಿತ ವಿಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಘಟನೆಯ ಕುರಿತು ಮಾಹಿತಿ ನೀಡಿದೆ. ಮಾನವೀಯ ನೆಲೆಯ ಹಿನ್ನೆಲೆಯಲ್ಲಿ ಮಹಿಳೆಗೆ ಸಹಾಯ ಮಾಡಿದ್ದು, 5 ಕಿಮೀ ದೂರದ ಪಿಎಚ್‍ಸಿ ಮರ್ದಪಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಟ್ವೀಟ್ ನಲ್ಲಿ ಮಾಹಿತಿ ನೀಡಲಾಗಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯೋಧರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ಯಾವಾಗಲೂ ಯೋಧರೇ ಈ ಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ ಅದ್ದರಿಂದ ಹಳ್ಳಿಗಳಿಗೆ ಸಮಪರ್ಕ ರಸ್ತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹಲವರು ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Share This Article
Leave a Comment

Leave a Reply

Your email address will not be published. Required fields are marked *