ಆಲಿಯಾ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

Public TV
2 Min Read

ಮುಂಬೈ: ಬಾಲಿವುಡ್ ನಟ ಶಂತನು ಮಹೇಶ್ವರಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗಿನ ನಟನಾ ಅನುಭವವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಶುಕ್ರವಾರ ರಿಲೀಸ್ ಆದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ನಟನೆಗೆ ಅಲಿಯಾ ಮತ್ತು ತಂಡಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಗಂಗೂಬಾಯಿ ಜೊತೆ ಟೈಲರ್ ಆಗಿ ಪ್ರೇಕ್ಷಕರ ಗಮನ ಸೆಳೆದ ಶಂತನು ಮಹೇಶ್ವರಿ ಮಾಧ್ಯಮಗಳಿಗೆ ತಮ್ಮ ಸಿನಿಮಾಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಸಂತೋಷವಾಗಿದೆ ಎಂದು ತಿಳಿಸಿದರು.

ಶಂತನು ಅವರು ಮೂಲತಃ ನೃತ್ಯಪಟುವಾಗಿದ್ದು, ಸಿನಿಮಾದಲ್ಲಿ ಎಲ್ಲಿಯೂ ಅವರು ಡ್ಯಾನ್ಸ್ ಮಾಡಿಲ್ಲ. ಈ ಕುರಿತು ಮಾತನಾಡಿದ ಅವರು, ನಾನು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ನನಗೆ ಯಾವುದೇ ರೀತಿ ಅಸಮಾಧಾನವಿಲ್ಲ. ಏಕೆಂದರೆ ಬನ್ಸಾಲಿ ಅವರು ನಾನು ನೃತ್ಯ ಮಾಡುವುದನ್ನು ನೋಡುವುದಕ್ಕಿಂತ ಹೆಚ್ಚು ನಟನೆ ಮಾಡಿಸುವುದರಲ್ಲಿ ಆಸಕ್ತಿಯನ್ನು ಹೊಂದಿದ್ದರು. ಅಲ್ಲದೆ ಅವರು ನನ್ನಲ್ಲಿ ನಟನಾ ಕೌಶಲ್ಯ ಇದೆ ಎಂದು ನಂಬಿದ್ದಕ್ಕೆ ಹೆಚ್ಚು ಸಂತೋಷವಾಗಿದೆ ಎಂದು ಖುಷಿಪಟ್ಟರು. ಇದನ್ನೂ ಓದಿ:  ಸೋದರಸಂಬಂಧಿ ಮದುವೆಯಲ್ಲಿ ಯಶ್ ಫ್ಯಾಮಿಲಿ ಫುಲ್ ಮಿಂಚಿಂಗ್!

‘ಗಂಗೂಬಾಯಿ ಕಾಠಿಯಾವಾಡಿ’ ಆಲಿಯಾ ಭಟ್ ಜೊತೆಗಿನ ನಟನೆ ಕುರಿತು ಮಾತನಾಡಿದ ಅವರು, ‘ಮೇರಿ ಜಾನ್’ ಹಾಡಿನ ಸಮಯದಲ್ಲಿ ಅಲಿಯಾ ನನಗೆ ಕಪಾಳಮೋಕ್ಷ ಮಾಡಬೇಕಿತ್ತು. ಆದರೆ ಅಲಿಯಾ ಅವರಿಗೆ ನನಗೆ ತುಂಬಾ ಬಲವಾಗಿ ಕಪಾಳಮೋಕ್ಷ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ನಾವು ಆ ಸೀನ್ ಗೆ ಸುಮಾರು 20 ಟೇಕ್‍ಗಳನ್ನು ತೆಗದುಕೊಂಡಿದ್ದೆವು. ನಾನು ಅವರಿಗೆ ಏನು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದೆ. ನಂತರ ಅವರು ಕೂಲ್ ಆಗಿದ್ದರು ಎಂದು ವಿವರಿಸಿದರು.

Shantanu Maheshwari interview: On Gangubai Kathiawadi, meeting Alia Bhatt on Jhalak and more | Bollywood - Hindustan Times

ಈ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನನ್ನ ಮತ್ತು ಅಲಿಯಾ ಅವರ ಕೆಮಿಸ್ಟ್ರಿ ನೋಡಿ ಒಪ್ಪಿಕೊಂಡಿದ್ದಾರೆ. ಈ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಈ ಸಿನಿಮಾ ನೋಡಿದ ಮೇಲೆ ಜನರು ನನ್ನನ್ನು ಮಾತನಾಡಿಸುವ ರೀತಿ ಪೂರ್ತಿ ಬದಲಾಗಿದೆ. ನನ್ನ ಪೋಷಕರು ಈ ಪ್ರತಿಕ್ರಿಯೆ ನೋಡಿ ನನ್ನ ಮೇಲೆ ಹೆಮ್ಮೆಪಡುತ್ತಿದ್ದಾರೆ. ಇದನ್ನು ನೋಡಿ ನನಗೆ ಸಂತೋಷವಾಗಿಗೆ ಎಂದರು.

ಈ ಸಿನಿಮಾ ನೋಡಿದ ಮೇಲೆ ಮನೆಯವರಿಗೆ ಸಂತೋಷವಾಗಿದೆ. ಆದರೆ ನಾನು ಮೊದಲು ಮನೆಯಲ್ಲಿ ಹೇಗೆ ಇದ್ದೆ ಅದೇ ರೀತಿ ಈಗಲೂ ಇದ್ದೇನೆ. ನಾನು ಅವಿಭಕ್ತ ಕುಟುಂಬದಲ್ಲಿದ್ದು, ಮನೆಯಲ್ಲಿ ನಾನೇ ಚಿಕ್ಕವನು. ನನ್ನನ್ನು ಮೊದಲು ಮನೆಯಲ್ಲಿ ಯಾವ ರೀತಿ ನೋಡುತ್ತಿದ್ರೂ ಅದೇ ರೀತಿ ಈಗಲೂ ನೋಡುತ್ತಾರೆ. ಇದು ಒಳ್ಳೆಯ ವಿಷಯ ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಬಿಡುಗಡೆ ಆಗಲಿರುವ ಗಂಗೂಬಾಯಿ ಕಾಠಿಯಾವಾಡಿ ಟೈಟಲ್ ಬದಲಾಗತ್ತಾ? ಕೋರ್ಟ್ ಕೊಟ್ಟ ಸಲಹೆ ಏನು?

Gangubai Kathiawadi: Who is Shantanu Maheshwari, who is fighting love with Alia Bhatt? are very popular on social media - The India Print : theindiaprint.com, The Print

‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ. ಆಲಿಯಾ ಭಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಶುಕ್ರವಾರ ರಿಲೀಸ್ ಆದ ಈ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *