ಮದ್ವೆಯಲ್ಲಿ ಕಣ್ಣೀರು ಹಾಕಿದ ನಿಕ್ ಜೋನ್ಸ್

Public TV
1 Min Read

ಮುಂಬೈ: ಡಿಸೆಂಬರ್ 2 ಮತ್ತು 3ರಂದು ಜೋಧ್‍ಪುರ ಉಮೈದ್ ಭವನದಲ್ಲಿ ವೈವಾಹಿಕ ಜೀವನಕ್ಕೆ ಪ್ರಿಯಾಂಕ ಮತ್ತು ನಿಕ್ ಜೋನ್ಸ್ ಕಾಲಿರಿಸಿದ್ದಾರೆ. ಮದುವೆಯಾದ ಎರಡು ದಿನವಾದರೂ ಜೋಡಿ ಕಲ್ಯಾಣ ಮಂಟಪದ ದೃಶ್ಯಗಳು ಸೇರಿದಂತೆ ಮಾಂಗಲ್ಯಧಾರಣೆ ಮತ್ತು ರಿಂಗ್ ಬದಲಿಸಿಕೊಳ್ಳುವ ಫೋಟೋಗಳು ಹೊರ ಬಂದಿರಲಿಲ್ಲ. ಸೋಮವಾರ ಸಂಜೆ ಪ್ರಿಯಾಂಕ ಮತ್ತು ನಿಕ್ ಜೋನ್ಸ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಒಂದು ಫೋಟೋದಲ್ಲಿ ನಿಕ್ ಭಾವುಕರಾಗಿದ್ದನ್ನು ಕಾಣಬಹುದಾಗಿದೆ.

ಪ್ರಿಯಾಂಕರನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ನಿಕ್ ತನ್ನ ಗೆಳತಿ ವಧುವಿನ ಉಡುಪಿನಲ್ಲಿ ಬಂದು ನಿಂತಾಗ ಒಂದು ಕ್ಷಣ ಭಾವುಕರಾಗಿದ್ದಾರೆ. ತನ್ನ ಭಾವನೆಯನ್ನು ತಡೆಹಿಡಿಯುವ ಪ್ರಯತ್ನ ಮಾಡಿದ್ರು ಕಣ್ಣಂಚಲಿ ಕಣ್ಣೀರು ಬಂದಿದೆ. ನಿಕ್ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಫೋಟೋ ಒಳಗೊಂಡಂತೆ ಮದುವೆಯ ಸುಂದರ ಕ್ಷಣಗಳು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಅಕ್ಕನ ಮದ್ವೇಲಿ ಬಾವನ ಶೂ ಕದ್ದು 37 ಕೋಟಿಗೆ ಬೇಡಿಕೆಯಿಟ್ಟ ಪರಿಣೀತಿ!

ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಈ ಸುಂದರ ಕ್ಷಣ ಸೆರೆಯಾಗಿದೆ. ಇದಾದ ಬಳಿಕ ವೇದಿಕೆಯನ್ನು ತನ್ನ ಗೆಳತಿಯನ್ನು ಕರೆತರುವ ವೇಳೆಯೂ ಪ್ರಿಯಾಂಕರ ಕೈಗೆ ಮುತ್ತಿಕ್ಕಿದ್ದಾರೆ. ಉಂಗುರ ಬದಲಿಸಿಕೊಂಡ ನಂತರ ಎಲ್ಲರೆದುರು ಜೋಡಿ ತುಟಿಗೆ ತುಟಿ ಸೇರಿಸಿದ್ದರು.

ಮದುವೆ ಸಮಾರಂಭದಲ್ಲಿ ವಧುವಿನ ಡ್ರೆಸ್ ನಲ್ಲಿ ನೋಡಿದಾಗ ತುಂಬಾನೇ ಸಂತೋಷ ಆಯ್ತು. ಅದರಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ಶ್ವೇತ ವರ್ಣದ ಗೌನ್ ನಲ್ಲಿ ನನ್ನ ಕಣ್ಣಾಲಿಗಳು ಒದ್ದೆಯಾದವು. ನನ್ನ ಜೀವನದ ಅತ್ಯಂತ ಸುಂದರ ಕ್ಷಣವಾಗಿತ್ತು. ನನ್ನ ಬಾಳಸಂಗಾತಿ ಇಷ್ಟು ಪರಿಪೂರ್ಣವಾದ ಚೆಲುವೆ ಸಿಗುತ್ತಾಳೆಂದು ಕಲ್ಪನೆಯನ್ನು ಮಾಡಿಕೊಂಡಿರಲಿಲ್ಲ ಎಂದು ನಿಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

https://www.youtube.com/watch?v=RFqogBkmIPI

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *