ಫಯಾಜ್‌, ಕುಟುಂಬದವರ ಒಳಸಂಚು ಇದೆ ಎನಿಸುತ್ತಿದೆ: ನೇಹಾ ತಂದೆ ಆರೋಪ

Public TV
1 Min Read

– ಫಯಾಜ್‌ ತಂದೆ-ತಾಯಿ, ಸಹೋದರಿ ವಿರುದ್ಧ ದೂರು ನೀಡುವೆ: ನಿರಂಜನ ಹಿರೇಮಠ

ಹುಬ್ಬಳ್ಳಿ: ಆರೋಪಿ‌ ಫಯಾಜ್ (Fayaz) ತಂದೆ-ತಾಯಿ ಮತ್ತು ಸಹೋದರಿ ನೀಡುತ್ತಿರುವ ಹೇಳಿಕೆ ನೋಡಿದ್ರೆ ಅವರ ಕುಟುಂಬದಿಂದ ಫಯಾಜ್ ಕುಮ್ಮಕ್ಕು ಇದೆ. ಫಯಾಜ್ ಮತ್ತು ಕುಟುಂಬದವರ ಒಳಸಂಚು ಎನಿಸುತ್ತಿದೆ ಎಂದು ನೇಹಾ (Neha Hiremath) ತಂದೆ ನಿರಂಜನ ಹಿರೇಮಠ ಆರೋಪಿಸಿದ್ದಾರೆ.

ನಮ್ಮ ಮಗಳ ಸಾವಿನ ದುಃಖದಲ್ಲಿ ನಾವು ಇದ್ದೇವೆ. ಆದರೆ ನಮ್ಮ ಕುಟುಂಬದ ಗೌರವ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಆರೋಪಿ‌ ಫಯಾಜ್ ತಂದೆ-ತಾಯಿ ಮತ್ತು ಸಹೋದರಿ ನೀಡುತ್ತಿರುವ ಹೇಳಿಕೆ ನೋಡಿದ್ರೆ ಅವರ ಕುಟುಂಬದಿಂದ ಫಯಾಜ್ ಕುಮ್ಮಕ್ಕು ಇದೆ. ಇದು ಫಯಾಜ್ ಮತ್ತು ಕುಟುಂಬದವರ ಒಳಸಂಚು ಎನಿಸುತ್ತಿದೆ. ಹೀಗಾಗಿ, ಆರೋಪಿ‌ ಫಯಾಜ್ ತಂದೆ-ತಾಯಿ ಮತ್ತು ಸಹೋದರಿ ವಿರುದ್ಧ ದೂರು ನೀಡುವೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

ಪೋಟೋ, ವೀಡಿಯೋ ವೈರಲ್ ಮಾಡುತ್ತಿರುವವರ ವಿರುದ್ಧ ಸಹ ಸೈಬರ್ ಕ್ರೈಮ್‌ಗೆ ದೂರು ನೀಡುವೆ. ನನ್ನ ಮಗಳು ಸತ್ತ ಮೇಲೆ ಯಾರು ಪೋಟೋ ವೈರಲ್ ಮಾಡುತ್ತಿದ್ದಾರೆ? ಹುಬ್ಬಳ್ಳಿಯಲ್ಲಿ ಫಯಾಜ್‌ಗೆ ಆಶ್ರಯ ಕೊಟ್ಟವರು ಯಾರು? ಎಲ್ಲಾ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಇಂದು ಮಧ್ಯಾಹ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನಮ್ಮ ಮನೆಗೆ ಭೇಟಿ ನೀಡಲಿದ್ದಾರೆ. ಇದು ರಾಜಕೀಯ ಭೇಟಿಯಲ್ಲ. ಇದು ಮಾನವೀಯತೆ ಭೇಟಿ. ನನ್ನ ಅನುಮತಿ ಪಡೆದೇ ನಡ್ಡಾ ನಮ್ಮ ಮನೆಗೆ ಬರುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ – ನಗರಸಭೆ ಸದಸ್ಯ ಅರೆಸ್ಟ್‌

Share This Article