ಗ್ಯಾರಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ.. ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ: ಸಚಿವ ಚಲುವರಾಯಸ್ವಾಮಿ

Public TV
1 Min Read

ಬೆಂಗಳೂರು: ಗ್ಯಾರಂಟಿ (Congress Guarantee) ಪರ ಜನ ನಿಂತಿಲ್ಲ ಅನಿಸುತ್ತೆ. ಜೆಡಿಎಸ್-ಬಿಜೆಪಿಗೆ (BJP-JDS) ಗ್ಯಾರಂಟಿ ಬೇಕಿರಲಿಲ್ಲ. ಒಟ್ಟಾರೆ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ ಎಂದು ಸಚಿವ ಚಲುವರಾಯಸ್ವಾಮಿ (Chaluvarayaswamy) ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಫಲಿತಾಂಶದ ಕುರಿತು ಮಾತನಾಡಿದ ಅವರು, ಸ್ಟಾರ್ ಚಂದ್ರು ಭೇಟಿಗೆ ನಾವು ಹೋಗಿದ್ದೆವು. ಅವರ ಜೊತೆ ಡಿ.ಕೆ.ಸುರೇಶ್ ಅವರನ್ನೂ ಭೇಟಿಯಾಗಿದ್ದೆವು. ನಂತರ ಡಿಕೆಶಿಯನ್ನೂ ಭೇಟಿ ಮಾಡಿ ಮಾತನಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು, ಕಾಂಗ್ರೆಸ್ ಸೋಲಿಗೆ ಕಾರಣಗಳೇನು?

ಮಂಡ್ಯ ಸೋಲು ನಾವು ನಿರೀಕ್ಷಿಸಿರಲಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ಪೋಲಾಗಿದೆ. ಜನರ ತೀರ್ಪಿಗೆ ನಾವು ತಲೆ ಬಾಗಬೇಕಿದೆ. ಯಾಕೆ ಸೋಲಿಸಿದ್ರು ಎಂದು ವಿಮರ್ಶಿಸಬೇಕಿದೆ. ಜನರ ತೀರ್ಪನ್ನ ನಾವು ಸ್ವಾಗತ ಮಾಡ್ತೇವೆ. ಅವರ ಮೈತ್ರಿಗೆ ಮತ ಹಾಕಿದರೋ, ಸಮುದಾಯ ನೋಡಿ ಜನ ವೋಟ್ ಹಾಕಿದರೋ, ಯಾವ್ಯಾವ ಕಾರಣಕ್ಕೆ ವೋಟು ಹಾಕಿದ್ರು ಗೊತ್ತಿಲ್ಲ ಎಂದರು.

ಗ್ಯಾರೆಂಟಿ ಪರ ಜನ ನಿಂತಿಲ್ಲ ಅನ್ನಿಸುತ್ತೆ. ಜೆಡಿಎಸ್, ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಟೋಟಲಿ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ. ಸೋಲು ಗೆಲುವಿನ ಮೇಲೆ ಡಿಸೈಡ್ ಮಾಡಲಾಗಲ್ಲ. ನಮಗೆ ಜನ ಅಸೆಂಬ್ಲಿಯಲ್ಲಿ ಮ್ಯಾಂಡೇಟ್‌ ಕೊಟ್ಟಿದ್ದಾರೆ. ನಾವು ಒಂದರಿಂದ ಒಂಬತ್ತಕ್ಕೆ ಬಂದಿದ್ದೇವೆ. ನಮಗೆ ಹಳೆ ಮೈಸೂರು ಭಾಗದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ: ಹೆಚ್‍ಡಿಕೆ

2019ರಲ್ಲಿ ಅವರು ಓವರ್ ಕಾನ್ಫಿಡೆಂಟ್ ಇದ್ರು. ನಾವು ಏಳು ಜನ ಇದ್ರೂ ಆ ರೀತಿ ಇರಲಿಲ್ಲ. ಡೌನ್ ಟು ಅರ್ಥ್ ನಾವು ಕೆಲಸ ಮಾಡಿದ್ದೆವು. ಆದರೂ ನಮಗೆ ಸೋಲಾಗಿದೆ. ಸೋಲಿನ ಹೊಣೆಯನ್ನ ಸಾಮೂಹಿಕವಾಗಿ ಒಪ್ಪಿಕೊಳ್ತೇವೆ. ರಿಸಲ್ಟ್ ಮೇಲೆ ಹೊಣೆ ಹೊರೋಕೆ ಆಗಲ್ಲ. ಎಲ್ಲರೂ‌ ಪಕ್ಷಕ್ಕಾಗಿ ಕೆಲಸ ಮಾಡಿದ್ದೆವು. ಸಿಎಂ, ಡಿಸಿಎಂ ಇಬ್ಬರೂ ಕೆಲಸ ಮಾಡಿದ್ರು. ಡಿಸಿಎಂ ಬಗ್ಗೆ ನಾನು ಮಾತನಾಡಲ್ಲ. ಪಕ್ಷ ಹೈಕಮಾಂಡ್ ಇದೆ ತೀರ್ಮಾನಿಸ್ತಾರೆ ಎಂದರು.

Share This Article