ಸರ್ಕಾರವೇ ಎಲ್ಲವನ್ನೂ ಮಾಡುವುದು ಕಷ್ಟವಾಗಬಹುದು: ಶರಣಪ್ರಕಾಶ್ ಪಾಟೀಲ್‌

Public TV
2 Min Read

– ಯಶಸ್ವಿ ಕೈಗಾರಿಕೆ ಸಂಸ್ಥೆಗಳ ಮಾದರಿಯನ್ನು ಸರ್ಕಾರ ಕೂಡ ಅಳವಡಿಸಿಕೊಳ್ಳಬಹುದು
– ಪಿಇಎಸ್‌ ವಿವಿಯಲ್ಲಿ ನಡೆದ ಕಾರ್ಯಕ್ರಮ

ಬೆಂಗಳೂರು: ಸರ್ಕಾರವೇ ಎಲ್ಲವನ್ನೂ ಮಾಡುವುದು ಕಷ್ಟವಾಗಬಹುದು. ಯಶಸ್ವಿ ಕೈಗಾರಿಕಾ ಮಾದರಿಗಳಿಂದ ನಾವು ಕೂಡ ಕಲಿಯಬಹುದು.ಕೈಗಾರಿಕೆ ಸಂಸ್ಥೆಗಳು ನೀಡುವ ತರಬೇತಿಯನ್ನು ಶಿಕ್ಷಣಕ್ಕೆ ಮತ್ತು ಉದ್ಯೋಗಾವಕಾಶಗಳೊಂದಿಗೆ ಹೇಗೆ ಮಿಳಿತಗೊಳಿಸಬಹುದು ಎಂಬುದನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್‌ (Sharanprakash R Patil) ತಿಳಿಸಿದರು.

ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ಬಜಾಜ್ ಎಂಜಿನಿಯರಿಂಗ್ ಕೌಶಲ್ಯ ತರಬೇತಿ (ಬೆಸ್ಟ್) ಕೇಂದ್ರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಷಣ ಮಾಡಿದ ಸಚಿವರು, ಕೌಶಲ್ಯಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಹಾಗೂ ಯುವಕರನ್ನು ಸಬಲೀಕರಣಗೊಳಿಸಲು ಸಹಯೋಗದ ಪ್ರಯತ್ನಗಳಗೆ ಆದ್ಯತೆ ನೀಡಲಾಗುವುದು ಎಂದರು.

ಈ ಯೋಜನೆಯು ವಿಶೇಷವಾಗಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಗವಾಗುತ್ತದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯುವಕರನ್ನು ಉನ್ನತೀಕರಿಸುವ ಮಾದರಿಯಾಗಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಉಡುಪಿ | ಅಲೆಗಳ ಅಬ್ಬರಕ್ಕೆ ಮಗುಚಿದ ದೋಣಿ ಮೀನುಗಾರ ಸಾವು

 

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಗುರಿಗಳನ್ನು ಸಾಧಿಸಲು ಬಲವಾದ ಸರ್ಕಾರಿ-ಶೈಕ್ಷಣಿಕ-ಉದ್ಯಮ ಪಾಲುದಾರಿಕೆಯನ್ನು ನಾವು ಇನ್ನಷ್ಟು ಅನ್ವೇಷಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಬಜಾಜ್ ಆಟೋ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ನಡುವಿನ ಈ ಸಹಯೋಗವು ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಶೈಕ್ಷಣಿಕ ಕ್ಷೇತ್ರದ ಬಲವು ಉದ್ಯಮದ ನಿಖರತೆಗೆ ಪೂರಕವಾಗಿದೆ. ವಿಶೇಷವಾಗಿ ಕರ್ನಾಟಕದ ಸೌಲಭ್ಯ ವಂಚಿತ ಪ್ರದೇಶಗಳ ಯುವಕರನ್ನು ಸಬಲೀಕರಣಗೊಳಿಸುವುದು ಪ್ರೋತ್ಸಾಹದಾಯಕ ಕ್ರಮವಾಗಬಾರದು. ಅದು ನಮ್ಮ ಭವಿಷ್ಯದ ಕಾರ್ಯತಂತ್ರದ ಭಾಗವಾಗಿರಬೇಕು ಎಂದು ಡಾ. ಪಾಟೀಲ್‌ ಹೇಳಿದರು.  ಇದನ್ನೂ ಓದಿ: ತಪ್ಪಿದ ಭಾರಿ ಅನಾಹುತ: ಆಯತಪ್ಪಿ ಬಿದ್ದ ನಟಿ

320 ವಿದ್ಯಾರ್ಥಿಗಳಿಗೆ ತರಬೇತಿ
ಬಜಾಜ್ ಆಟೋ ಲಿಮಿಟೆಡ್‌ನ ಸಿಎಸ್‌ಆರ್ ಉಪಕ್ರಮವಾದ ಪಿಇಎಸ್ ವಿಶ್ವವಿದ್ಯಾಲಯದ ಬೆಸ್ಟ್ ಕೇಂದ್ರವು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೆಕಾಟ್ರಾನಿಕ್ಸ್, ಮೋಷನ್ ಕಂಟ್ರೋಲ್, ರೊಬೊಟಿಕ್ಸ್, ಇಂಡಸ್ಟ್ರಿ 4.0 ಮತ್ತು ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್‌ನಂತಹ ಸಮಕಾಲೀನ ತಂತ್ರಜ್ಞಾನಗಳಲ್ಲಿ ಸುಧಾರಿತ ತರಬೇತಿ ನೀಡುತ್ತದೆ. ಮೊದಲ ವರ್ಷದಲ್ಲಿ, ಈ ಕಾರ್ಯಕ್ರಮವು 320 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಅವರೆಲ್ಲರೂ ಉತ್ತಮ ಸಂಬಳದೊಂದಿಗೆ ಉದ್ಯೋಗ ಪಡೆದುಕೊಂಡಿದ್ದಾರೆ. ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.

ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ. ಜವಾಹರ್, ಉಪಕುಲಪತಿ ಡಾ. ಜೆ. ಸೂರ್ಯ ಪ್ರಸಾದ್ ಮತ್ತು ಬಜಾಜ್ ಆಟೋ ಲಿಮಿಟೆಡ್‌ನ ಸಿಎಸ್‌ಆರ್ ಉಪಾಧ್ಯಕ್ಷ ಸುಧಾಕರ್ ಗುಡಿಪತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article