ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಮ್ಮ ಅಭಿಪ್ರಾಯ ಹೇಳಿದ್ದೇವೆ: ಜಮೀರ್

Public TV
1 Min Read

ಬೀದರ್: ನಮ್ಮ ಅಭಿಪ್ರಾಯ ನಾವು ಹೇಳಿದ್ದೇವೆ ಎಂದು ಡಿಸಿಎಂ (DCM) ಸ್ಥಾನದ ಪ್ರಬಲ ಆಕಾಂಕ್ಷಿ ವಸತಿ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪರೋಕ್ಷವಾಗಿ ಡಿಸಿಎಂ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ (Bidar) ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಹೈಕಮಾಂಡ್ ಪಕ್ಷವಾಗಿದ್ದು ಈಗಾಗಲೇ ನಾನು ಮತ್ತು ರಹೀಂಖಾನ್ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಇನ್ನೂ ಡಾ.ಜಿ ಪರಮೇಶ್ವರ್, ರಾಜಣ್ಣ, ಸತೀಶ್ ಜಾರಕಿಹೊಳಿ ಹಾಗೂ ಎಂ.ಬಿ ಪಾಟೀಲ್ ಕೂಡ ಅವರ ಅಭಿಪ್ರಾಯಗಳನ್ನು ಹೇಳಿದ್ದು, ಅಂತಿಮವಾಗಿ ಡಿಸಿಎಂ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು. ಇದನ್ನೂ ಓದಿ: ನನ್ನನ್ನೂ ಜೈಲಿನಲ್ಲಿಟ್ಟು ಚಿತ್ರಹಿಂಸೆ ಕೊಟ್ಟಿದ್ದರು – ತುರ್ತುಪರಿಸ್ಥಿತಿ ಕರಾಳ ದಿನಗಳನ್ನು ನೆನೆದ ಅಶೋಕ್

ಈಗಾಗಲೇ ದರ್ಶನ್‌ಗೆ ಶಿಕ್ಷೆಯಾಗಿದ್ದು ಈಗ ಜೈಲಿನಲ್ಲಿ ಇದ್ದಾರೆ. ಹೀಗಾಗಿ ಈ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ತಿಳಿಸಿದರು. ಈ ದೇಶಕ್ಕೆ ಸ್ವಾತಂತ್ರ‍್ಯ ತಂದಿದ್ದು ನಾವು. ಸ್ವಾತಂತ್ರ‍್ಯ ತರಲು ಬಿಜೆಪಿ ಏನು ಮಾಡಿದೆ? ಬಿಜೆಪಿ ಹಾಗೂ ಆರ್‌ಎಸ್‌ಎಸ್ ಯಾರ ಜೊತೆ ಇದ್ದರೂ ಇತಿಹಾಸಕ್ಕೆ ಗೊತ್ತಿದೆ. ಈ ದೇಶ ನಮ್ಮದು ರೀ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಜೈಲಲ್ಲಿ ದರ್ಶನ್‍ನನ್ನು ಭೇಟಿಯಾದ ಪುತ್ರ ವಿನೀಶ್ – ಭಾವುಕನಾಗಿ ಕಣ್ಣೀರಿಟ್ಟ ಕಾಟೇರ

Share This Article