ನವದೆಹಲಿ: ಕರ್ನಾಟಕ ರಾಜ್ಯ ಅವಮಾನ ಪಡುವಂತಹ ಹೇಳಿಕೆ ಶಾಸಕ ಸಂಗಮೇಶ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ (Karnataka) ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿದ್ದಾರೆ.
ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು ಎಂಬ ಶಾಸಕ ಸಂಗಮೇಶ್ ಹೇಳಿಕೆ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಗಮೇಶ್ ಹೇಳಿಕೆ ನೋಡಿದರೆ ಕಾಂಗ್ರೆಸ್‌ನ (Congress) ಎಲ್ಲಾ ಶಾಸಕರು ಮುಸ್ಲಿಮರು ಆಗಬೇಕು ಅಂತಾ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರಾ? ಇದೊಂದು ಮತಾಂತರ ಮಾಡುವ ಕೆಲಸ ಅನ್ನಿಸುತ್ತದೆ. ಸಂವಿಧಾನ ಅಡಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಈ ರೀತಿ ಹೇಳಿಕೊಡುತ್ತಿದ್ದಾರೆ. ಸಂಗಮೇಶ್ ಹೇಳಿಕೆ ಇಡೀ ಕಾಂಗ್ರೆಸ್ ಹೇಳಿಕೆ ಆಗಿದೆ. ಕರ್ನಾಟಕ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದಿನ ಜನ್ಮ ಅಂತಿದ್ರೆ ಮುಸ್ಲಿಂ ಆಗಿಯೇ ಹುಟ್ಟಬೇಕು: `ಕೈ’ ಶಾಸಕ ಸಂಗಮೇಶ್
ಹಿಂದೂ ಅಂತಾ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಬೆಂಕಿ ಹಚ್ಚುವ ಹೇಳಿಕೆ ಆಗದೆ
ನಾಳೆ ನಾವು ಧರ್ಮದ ಉಳಿವಿಗಾಗಿ ನಾವು ಹೋಗುತ್ತಿದ್ದೇವೆ. ಇದೊಂದು ತಾಲಿಬಾನ್ ಸರ್ಕಾರ. ಹಿಂದೂಗಳನ್ನು ದ್ವಿತೀಯ ದರ್ಜೆ ನಾಗರಿಕರಾಗಿಸಿದ್ದಾರೆ. ಮಹದೇವಪ್ಪ ಅವರೇ, ನೀವು ಮನೆಯಲ್ಲಿ ಇದ್ರೆ ಸಾಕು, ಕರ್ನಾಟಕ ತಣ್ಣಗಿರುತ್ತೆ. ಕರ್ನಾಟಕ ಧಗಧಗ ಉರಿಯುವುದು ತಪ್ಪುತ್ತದೆ. ಮತಾಂಧರು ಈ ರೀತಿ ಹೇಳಿಕೆ ನೀಡಲು ನೀವೇ ಕಾರಣ. ಬಿಜೆಪಿ ಸರ್ಕಾರ ಇದ್ದಿದ್ದರೆ ಇಂಥವರನ್ನು ಒದ್ದು ಒಳಗಡೆ ಹಾಕುತ್ತಿದ್ದೆವು. ಪಾಕ್ ಜಿಂದಾಬಾದ್ ಅನ್ನೋ ಹೇಳಿಕೆಗಳು ಕಾಂಗ್ರೆಸ್ ಪ್ರಚೋದನೆಯಿಂದಲೇ ಬರುತ್ತಿರುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು