ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ: ಆರ್‌.ಅಶೋಕ್‌

Public TV
1 Min Read

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ (Siddaramaiah) ಟಿಪ್ಪು ಅಂದ್ರೆ ಬಹಳ ಪ್ರೀತಿ. ಅವರದ್ದು ಟಿಪ್ಪು ಅಜೆಂಡಾ. ಅವರು ಹಿಂದೂಗಳನ್ನ ಎರಡನೇ ದರ್ಜೆ ಥರಾ ನೋಡ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದರು.

ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಮುಸ್ಲಿಂ ಮತಕ್ಕಾಗಿ ಸಿದ್ಧರಾಮಯ್ಯ ಈ‌ ರೀತ ರಾಜಕಾರಣ ಮಾಡುತ್ತಿದ್ದಾರೆ. ಅವರು ಮುಸ್ಲಿಮರ ಓಲೈಕೆ ಜೊತೆಗೆ ಟಿಪ್ಪು ಜಯಂತಿ, ಶಾದಿ ಭಾಗ್ಯ, ಇವೆಲ್ಲಾ ಕೈ ಬಿಡಬೇಕು ಎಂದರು. ಇದನ್ನೂ ಓದಿ: ಅರ್ಜುನ ಆನೆಗೆ 64 ವರ್ಷ.. ಕಾಡಾನೆ ಸೆರೆಗೆ ಯಾಕೆ ಬಳಸಿದ್ರು: ಸರ್ಕಾರಕ್ಕೆ ಕೋಟಾ ಪ್ರಶ್ನೆ

ರಾಜ್ಯದಲ್ಲಿ 13 ತಾಲೂಕು ಬಿಟ್ರೆ ಉಳಿದ ಎಲ್ಲಾ ಕಡೆ ಬರಯಿದೆ. ಈ‌ ಸಮಯದಲ್ಲಿ ಸರ್ಕಾರಕ್ಕೆ ತಾಯಿ‌ ಹೃದಯ ಇರಬೇಕಿತ್ತು. ‌ಆದ್ರೆ ಸರ್ಕಾರಕ್ಕೆ ಕಟುಕನ ಹೃದಯವಿದೆ. ಬರ ನಿರ್ವಹಣೆ ಮಾಡೋದು ಬಿಟ್ಟು ತೆಲಂಗಾಣದಲ್ಲಿ ರಾಜಕೀಯ ಮಾಡುವುದಕ್ಕೆ ಹೋಗ್ತಾರೆ. ಇದು ಜನ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವೆ. ಬಿಜೆಪಿ ಕಾರ್ಯಕರ್ತರ ಮೇಲೆ ಆರು ತಿಂಗಳಿಂದಲೂ ಹಲ್ಲೆ ಮಾಡಲಾಗುತ್ತಿದೆ. ಪೊಲೀಸರನ್ನು ಬಳಸಿಕೊಂಡು ಮಂಗಳೂರು, ಉಡುಪಿ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಗಡಿಪಾರು ಮಾಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಗರಂ ಆದರು. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ- ಡಿಕೆಶಿಗೆ ಮತ್ತೆ ನೋಟಿಸ್ ನೀಡುತ್ತಾ ಸಿಬಿಐ?

ನಮ್ಮ ಸದಸ್ಯ ಏನೇ ಆಗಿರಲಿ. ಆದರೆ ಆತನಿಗೆ ಹೊಡೆಯಲು ಅಧಿಕಾರ ಕೊಟ್ಟವರಾರು? ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತೆ. ಕಾನೂನನ್ನ ಕೈಗೆತ್ತಿಕೊಳ್ಳಲು ಇವರು ಯಾರು? ಇದರಲ್ಲಿ ಕಾಂಗ್ರೆಸ್ ಕೈವಾಡ ಇದೆ ಆರೋಪಿಸಿದರು.

Share This Article