ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಈ ಬಗ್ಗೆ ಮಾಹಿತಿ ಇದೆ: ಕೆ.ಜಿ ಬೋಪಯ್ಯ ಸ್ಫೋಟಕ ಹೇಳಿಕೆ

Public TV
1 Min Read

ಮಡಿಕೇರಿ: ಮಂಗಳೂರು (Mangaluru) ಕುಕ್ಕರ್ ಬಾಂಬ್ ಸ್ಫೋಟವಾದ ಬಳಿಕ ರಾಜ್ಯದ ಕೆಲವು ಜಿಲ್ಲೆಗಳಲ್ಲೂ ಸರ್ಕಾರ ಹೈ ಅಲರ್ಟ್ ಮಾಡಿದೆ. ಈ ಬೆನ್ನಲ್ಲೇ ಇದೀಗಾ ಕೊಡಗಿನಲ್ಲೂ ಉಗ್ರ ಚಟುವಟಿಕೆಗಳಿಲ್ಲ ಎಂದು ಹೇಳುವಂತಿಲ್ಲ ಅದರ ಬಗ್ಗೆ ಮಾಹಿತಿ ಕೂಡ ಇದೆ‌ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ (K.G Bopaiah) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ (Madikeri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಗ್ರಚಟುವಟಿಕೆಗಳಿಗೆ ಕೊಡಗಿನಲ್ಲಿ ಅದರದ್ದೇ ಪ್ರತ್ಯೇಕ ಪ್ರದೇಶಗಳಿವೆ. ಮಡಿಕೇರಿ ತಾಲೂಕು, ಸುತ್ತಮುತ್ತ ಮತ್ತು ವಿರಾಜಪೇಟೆ ತಾಲೂಕಿನಲ್ಲೂ ಇವೆ. ಈ ಕುರಿತು ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎಂದು ತಿಳಿಸಿದ ಅವರು ಕೊಡಗಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಮಾಡಲಾದ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ದೇಶದ್ರೋಹಿ ಕೆಲಸಗಳಲ್ಲಿ ಒಂದು ವರ್ಗದ ಜನ ತೊಡಗಿದ್ದಾರೆ. ಅನ್ಯಕೋಮಿನ ಜನರು ಆ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಎಲ್ಲಾ ಕಡೆ ಪ್ರಾಣ ಹಾನಿ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಹಿಂದೂಗಳೇ ಜಾಗೃತಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

ದೇಶದಲ್ಲಿ ಅನ್ಯಕೋಮಿನ ಜನರು ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಕೊಡಗಿನಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಎಲ್ಲೆಡೆ ಊರಿನಲ್ಲಿ ಜಾತ್ರೆ ವಾರ್ಷಿಕೋತ್ಸವಗಳು ನಡೆಯುತ್ತವೆ. ಮತ್ತೊಂದೆಡೆ ಕುಕ್ಕರ್‌ಗಳಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಜನರೇ ಜಾಗೃತರಾಗಿ ಅನ್ಯಕೋಮಿನ ಜನರಿಗೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿಲ್ಲ. ಅದನ್ನು ನಾನು ಸ್ವಾಗತ ಮಾಡುತ್ತೇನೆ. ಇದು ಎಲ್ಲಾ ಕಡೆ ಆಗಬೇಕಾಗಿದೆ. ಅನ್ಯಕೋಮಿನವರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅನ್ಯಕೋಮಿನ ಯುವಕರು ಉಗ್ರತರಬೇತಿಗಳಿಗೆ ಹೋಗಿ ಬರುವವರನ್ನು ಜಿಲ್ಲೆಗೆ ಬರಲು ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಧ್ಯದ ಬೆರಳು ತೋರಿಸಿದ ಬೈಕ್ ಸವಾರನಿಗೆ ಮನಬಂದಂತೆ ಥಳಿಸಿದ BMTC ಚಾಲಕ ಅಮಾನತು

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *