‌Chandrayaan-3: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ವಿಕ್ರಮ್ – ಇಸ್ರೋದಿಂದ ವೀಡಿಯೋ ರಿಲೀಸ್‌

By
2 Min Read

ನವದೆಹಲಿ: ಚಂದ್ರನ (Moon) ದಕ್ಷಿಣ ಧ್ರುವದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ 10 ದಿನಗಳ ನಂತರ, ಚಂದ್ರಯಾನ -3 (Chandrayaan-3) ಲ್ಯಾಂಡರ್ (Vikram Lander) ಕೆಲವು ಸೆಕೆಂಡುಗಳ ಕಾಲ ಚಂದ್ರನ ಮೇಲ್ಮೈಯಲ್ಲಿ ಪ್ರಾಯೋಗಿಕವಾಗಿ ಸ್ವಲ್ಪ ಎತ್ತರಕ್ಕೆ ಹಾರಾಟ ನಡೆಸಿ ಮತ್ತೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಟ್ವೀಟ್‌ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವಿಕ್ರಮ್ ಲ್ಯಾಂಡರ್ ತನ್ನ ಮಿಷನ್ ಉದ್ದೇಶಗಳನ್ನು ಮೀರಿದೆ. ಇದು ಹಾಪ್ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ಆಜ್ಞೆಯ ಮೇರೆಗೆ ಎಂಜಿನಿಗಳ ಸಹಾಯದಿಂದ ಮೇಲಕ್ಕೆ ಹಾರಿಸಲಾಯಿತು. ನಿರೀಕ್ಷೆಯಂತೆ ಸುಮಾರು 40 ಸೆಂ.ಮೀ ಎತ್ತರಕ್ಕೆ ಹಾರಿಸಿ, 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಯಿತು ಎಂದು ತಿಳಿಸಿದೆ. ಇದನ್ನೂ ಓದಿ: ಚಂದ್ರಯಾನ-3ರ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದ ಇಸ್ರೋ ವಿಜ್ಞಾನಿ ವಲರ್ಮತಿ ಹೃದಯಾಘಾತದಿಂದ ನಿಧನ

ಏನಿದರ ಪ್ರಾಮುಖ್ಯತೆ?
ಚಂದ್ರನಲ್ಲಿ ಕತ್ತಲು ಆವರಿಸುತ್ತಿರುವ ಹಿನ್ನೆಲೆ ವಿಕ್ರಮ್‌ ಲ್ಯಾಂಡರನ್ನು ಇಸ್ರೋ ಸ್ಲೀಪ್‌ ಮೋಡ್‌ಗೆ ಹಾಕಿತ್ತು. ಬಳಿಕ ವಿಜ್ಞಾನಿಗಳು ವಿಕ್ರಮ್‌ನ ಕಿಕ್-ಸ್ಟಾರ್ಟ್ ಮಾಡಿದ್ದಾರೆ. ಎಂಜಿನ್‌ಗಳ ಸಹಾಯದಿಂದ 40 ಸೆಂ.ಮೀ ಎತ್ತರಕ್ಕೆ ಹಾರಿಸಿ 30 – 40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಲಾಗಿದೆ. ಕಿಕ್ ಸ್ಟಾರ್ಟ್‌ನಿಂದ ಭವಿಷ್ಯದಲ್ಲಿ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ. ಚಂದ್ರನಲ್ಲಿ ಮತ್ತೊಮ್ಮೆ ಬೆಳಕಿನ ನಂತರ ಕಾರ್ಯಾಚರಣೆ ಮಾಡಲು ಪೂರ್ವ ತಯಾರಿ ಮಾಡಲಾಗಿದೆ. ವಿಕ್ರಮ್ ಲ್ಯಾಂಡರ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರನ ಮೇಲ್ಮೈಯನ್ನು ಯಶಸ್ವಿಯಾಗಿ ಮುಟ್ಟಿದ ಕೆಲ ದಿನಗಳ ನಂತರ ಚಂದ್ರಯಾನ-3 ರ ಪ್ರಗ್ಯಾನ್ ರೋವರ್ 100 ಮೀಟರ್‌ಗಳಷ್ಟು ಕ್ರಮಿಸಿದೆ. ರೋವರ್ ತನ್ನ ಕಾರ್ಯಯೋಜನೆಗಳನ್ನು ಪೂರ್ಣಗೊಳಿಸಿದೆ. ಈಗ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಗ್ಯಾನ್ ರೋವರನ್ನು ಸ್ಲೀಪ್‌ ಮೋಡ್‌ಗೆ ಹೊಂದಿಸಲಾಗಿದೆ ಎಂದು ಕೆಲ ದಿನಗಳ ಹಿಂದೆ ಇಸ್ರೋ ತಿಳಿಸಿತ್ತು. ಇದನ್ನೂ ಓದಿ: ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌, ಪ್ರಗ್ಯಾನ್‌ ರೋವರ್‌

ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ. ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್‌ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಟ್ವೀಟ್‌ ಮಾಡಿ ಇಸ್ರೋ ಮಾಹಿತಿ ನೀಡಿತ್ತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್