ಯಶಸ್ವಿಯಾಗಿ ಉಡಾವಣೆಗೊಂಡ ‘EOS-02’, ‘ಆಜಾದಿ ಸ್ಯಾಟ್’ ಉಪಗ್ರಹ

Public TV
2 Min Read

ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿಯ ವೀಕ್ಷಣಾ ಉಪಗ್ರಹ EOS-02 ಅನ್ನು SSLV-D1  ಉಡಾವಣಾ ವಾಹಕ ಮೂಲಕ ಉಡಾಯಿಸಿದೆ.

ಇಒಎಸ್-1 ಎರಡು ಉಪಗ್ರಹಗಳನ್ನು ಹೊತ್ತು ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‍ನಿಂದ ಇಂದು ಬೆಳಗ್ಗೆ 9:18ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರ ಜೊತೆ ಭಾರತ 75ನೇ ಅಮೃತ ಮಹೋತ್ಸವ ಆಚರಿಸುತ್ತಿರುವ ನೆನಪಿನಾರ್ಥವಾಗಿ ಗ್ರಾಮೀಣ ಭಾಗದ 75 ಸರ್ಕಾರಿ ಶಾಲೆಗಳ 750 ವಿದ್ಯಾರ್ಥಿನಿಯರು ಸೇರಿ ತಯಾರಿಸಿರುವ 8 ಕೆಜಿ ತೂಕದ `ಆಜಾದಿ ಸ್ಯಾಟ್’ ಉಪಗ್ರಹವನ್ನು ಕಕ್ಷೆಗೆ ಕೊಂಡೊಯ್ದಿದೆ. ಇದನ್ನೂ ಓದಿ: ಅಮೃತ ಮಹೋತ್ಸವಕ್ಕೆ 750 ಗ್ರಾಮೀಣ ಹೆಣ್ಣುಮಕ್ಕಳೇ ತಯಾರಿಸಿದ ಆಜಾದಿ ಉಪಗ್ರಹ ಉಡಾವಣೆ – ಏನಿದರ ವಿಶೇಷತೆ?

ಕಳೆದ 7 ದಿನಗಳಿಂದ ಇಸ್ರೋ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸುತ್ತಿತ್ತು. ಇಂದು ಬೆಳಗ್ಗೆ 9:18ರ ಸುಮಾರಿಗೆ ಉಡಾವಣೆಗೊಂಡಿದೆ. ಈ ಉಪಗ್ರಹಗಳಿಂದ ರಾಕೆಟ್ ನಿರ್ಮಿಸಲು ಸಹಾಯ ಮಾಡುವ ಹೊಸ ವೈಶಿಷ್ಟ್ಯಗಳಿಂದ ನಿರ್ಮಿಸಲಾಗಿದ್ದು, ಮಾಡ್ಯುಲರ್ ಸಿಸ್ಟಮ್, ಪೈರೋ ಸರ್ಕ್ಯೂಟ್, ಮಲ್ಟಿ ಸ್ಯಾಟಲೈಟ್ ಅಡಾಪ್ಟರ್ ಡೆಕ್, ಕಮರ್ಷಿಯಲ್ ಆಫ್ ದಿ ಶೆಲ್ಫ್ ಘಟಕಗಳೊಂದಿಗೆ ಮಿನಿಯೇಚರ್ ಕಡಿಮೆ ವೆಚ್ಚದ ಏವಿಯಾನಿಕ್ಸ್, ಇಂಟರ್‍ಫೇಸ್‍ನೊಂದಿಗೆ ವೇಗವಾಗಿ ಚೆಕ್ ಔಟ್ ವ್ಯವಸ್ಥೆಯನ್ನು ಹೊಂದಿರುವ ಬೋರ್ಡ್ ಕಂಪ್ಯೂಟರ್‌ಗಳು ಇರಲಿದೆ. ಉಡಾವಣೆಗೊಂಡ ಸುಮಾರು 13.2 ನಿಮಿಷಗಳ ಬಳಿಕ ಉಪಗ್ರಹಗಳನ್ನು ಈ ರಾಕೆಟ್ ಕಕ್ಷೆಗೆ ತಲುಪಿಸಿದೆ. ಇದನ್ನೂ ಓದಿ: ಗುಂಡನನ್ನು ಹುಡುಕಿಕೊಟ್ಟವರಿಗೆ 30 ಸಾವಿರ ರೂ. ಬಹುಮಾನ – ಮಗನಂತೆ ಸಾಕಿದ್ದ ಶ್ವಾನಕ್ಕಾಗಿ ಮಹಿಳೆ ಕಣ್ಣೀರು

ಎಸ್‍ಎಸ್‍ಎಲ್‍ವಿ-ಡಿ1 ವಿಶೇಷತೆ:
ಇಸ್ರೋದ ವರ್ಕ್ಹಾರ್ಸ್ ಎಂದೇ ಖ್ಯಾತಿ ಪಡೆದಿರುವ ಪಿಎಸ್‍ಎಲ್‍ವಿಗಿಂತ ಬರೋಬ್ಬರಿ 10 ಮೀ. ಚಿಕ್ಕದಾಗಿರುವ ಎಸ್‍ಎಸ್‍ಎಲ್‍ವಿ-ಡಿ1 ಕೇವಲ 34 ಮೀ. ಉದ್ದ ಹಾಗೂ 2 ಮೀ. ವ್ಯಾಸವನ್ನು ಹೊಂದಿದೆ. ಈ ರಾಕೆಟ್ ಒಟ್ಟು 120 ಟನ್ ತೂಕವಿದ್ದು, ಸುಮಾರು 500 ಕೆಜಿ ಪೇಲೋಡ್ ಅನ್ನು 500 ಕಿ.ಮೀ. ದೂರದಲ್ಲಿರುವ ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ.

ಆಜಾದಿ ಸ್ಯಾಟ್ ವಿಷೇಷತೆ:
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆದ ಕಾರಣ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಶೇಷವಾಗಿ 75 ಪೇಲೋಡ್ ಇರುವ 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ಮಕ್ಕಳು ಆಜಾದಿ ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದಾರೆ. ಈ ಪ್ರಯತ್ನದ ಮೂಲಕ ಬಾಹ್ಯಾಕಾಶ ಅಧ್ಯಯನದಲ್ಲಿ ಬಾಲಕಿಯರಿಗೂ ಪ್ರೇರಣೆ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *