ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು: ಭೂಕಕ್ಷೆ ತೊರೆದು ಚಂದ್ರನ ಕಡೆಗೆ ಯಶಸ್ವಿ ಪ್ರಯಾಣ

By
1 Min Read

ಬೆಂಗಳೂರು: ಚಂದ್ರಯಾನ-3 (Chandrayaan-3) ಗಗನನೌಕೆಯ ಪಯಣ ಮಹತ್ವದ ಮಜಲು ತಲುಪಿದೆ. ಭೂಮಿಯ ಕಕ್ಷೆಯಲ್ಲಿ ಯಶಸ್ವಿಯಾಗಿ 5 ಸುತ್ತು ಹಾಕಿದ ಚಂದ್ರಯಾನ-3 ನೌಕೆ ಈಗ ಚಂದ್ರನ ಕಕ್ಷೆಯತ್ತ ಹೊaರಟಿದೆ.

ಕಳೆದ 15 ದಿನಗಳಲ್ಲಿ ಭೂಮಿಯ ಕಕ್ಷೆಯಲ್ಲಿ ಐದು ರೌಂಡ್ ಪೂರ್ಣಗೊಳಿಸಿರುವ ಚಂದ್ರಯಾನ-3 ನೌಕೆ ಈಗ ಇಸ್ರೋ ತೋರಿಸಿದ ಟ್ರಾನ್ಸ್ ಲೂನಾರ್ ಪಥದಲ್ಲಿ ಚಲಿಸತೊಡಗಿದೆ. ಸೋಮವಾರ ಮಧ್ಯರಾತ್ರಿ ಗಗನನೌಕೆ ತನ್ನ ಪಥ ಬದಲಿಸಿದೆ. ಮುಂದಿನ ನಿಲ್ದಾಣ ಚಂದ್ರನ ಅಂಗಳ ಎಂದು ಇಸ್ರೋ (ISRO) ಟ್ವೀಟ್ ಮಾಡಿದೆ. ಇದನ್ನೂ ಓದಿ: ಶ್ರೀಹರಿಕೋಟಾದಿಂದ ಸಿಂಗಾಪುರದ 7 ಉಪಗ್ರಹಗಳ ಉಡಾವಣೆ – ಯಶಸ್ವಿಯಾಗಿ ಕಕ್ಷೆ ಸೇರಿಸಿದ ISRO ರಾಕೆಟ್‌

ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು 14 ದಿನಗಳ ಕಾಲ ಅಲ್ಲಿ ಪ್ರಯೋಗಗಳನ್ನು ನಡೆಸುತ್ತದೆ. ಈ ಕಾರ್ಯಾಚರಣೆಯ ಮೂಲಕ, ಇಸ್ರೋ ಚಂದ್ರನ ಮೇಲ್ಮೈಯಲ್ಲಿ ಭೂಕಂಪಗಳು ಹೇಗೆ ಸಂಭವಿಸುತ್ತವೆ ಮತ್ತು ಚಂದ್ರನ ಮಣ್ಣನ್ನು ಅಧ್ಯಯನ ಮಾಡುತ್ತದೆ ಎಂಬುದನ್ನು ಕಂಡುಹಿಡಿಯುತ್ತದೆ. ಇಸ್ರೋ ಆಗಸ್ಟ್ 23 ರಂದು ಸಂಜೆ 5.47ಕ್ಕೆ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಇಳಿಸಲು ಪ್ರಯತ್ನಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 14ರಂದು ಚಂದ್ರಯಾನ-3 ಗಗನನೌಕೆಯ ಉಡಾವಣೆ ನಡೆದಿತ್ತು. ಮುಂದಿನ 25 ದಿನದಲ್ಲಿ ಈ ನೌಕೆ ಚಂದ್ರನ ಮೇಲ್ಮೈನಲ್ಲಿ ಇಳಿಯುವ ಸಂಭವ ಇದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್