ಚಂದ್ರನ ಕಕ್ಷೆಯಿಂದ ಭೂಮಿ ಕಕ್ಷೆಗೆ ಮತ್ತೆ ಚಂದ್ರಯಾನ-3 ಪ್ರೊಪಲ್ಷನ್‌ ಮಾಡ್ಯೂಲ್‌

Public TV
1 Min Read

ನವದೆಹಲಿ: ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್‌ ಮಾಡ್ಯೂಲ್‌ (Propulsion Module) ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಇಸ್ರೋ (ISRO) ಯಶಸ್ವಿಯಾಗಿ ಮರಳಿ ತರಲಿದೆ.

ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್‌ ಮಾಡ್ಯೂಲ್‌ ಅನ್ನು ಚಂದ್ರನಿಂದ ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಇದನ್ನೂ ಓದಿ: ಭೂಮಿಗೆ ಬಿತ್ತು ಚಂದ್ರಯಾನ-3 ರಾಕೆಟ್ ಅವಶೇಷ

ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಜು.14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆ.23 ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಐತಿಹಾಸಿಕ ಸಾಧನೆ ಮಾಡಿತು. ಪ್ರಗ್ಯಾನ್‌ ರೋವರ್‌ ಯಶಸ್ವಿಯಾಗಿ ಚಂದ್ರನ ಮೇಲ್ಮೈಯನ್ನು ಸಮೀಕ್ಷೆ ನಡೆಯಿತು. ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್

ಲ್ಯಾಂಡರ್‌ ಮತ್ತು ರೋವರ್‌ 1 ಚಂದ್ರನ ದಿನ (ಭೂಮಿಯ 14 ದಿನಗಳಿಗೆ ಸಮ) ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿವೆ. ಆ ಮೂಲಕ ಚಂದ್ರಯಾನ-3 ಮಿಷನ್‌ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿವೆ.

Share This Article