ಟೆಲ್ ಅವಿವ್: ಅಮೆರಿಕ (USA) ಮತ್ತು ಇರಾನ್ (Iran) ನಡುವೆ ಕದನ ವಿರಾಮ ಘೋಷಣೆ ಮಾಡಿದ ಪಾಕಿಸ್ತಾನಕ್ಕೆ (Pakistan) ಮುಖಭಂಗವಾಗಿದ್ದು ಲೆಬನಾನ್ (Lebanon) ಮೇಲೆ ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಹೇಳಿದೆ.
ಪಾಕ್ ಪ್ರಧಾನಿ ಷರೀಫ್ (Shehbaz Sharif) ಅವರು, ಈ ಕದನ ವಿರಾಮವು ಕೇವಲ ಅಮೆರಿಕ ಮತ್ತು ಇರಾನ್ ನಡುವೆ ಮಾತ್ರವಲ್ಲದೆ ಲೆಬನಾನ್ ಮತ್ತು ಇತರ ಸಂಘರ್ಷ ಪೀಡಿತ ಪ್ರದೇಶಗಳಿಗೂ ಅನ್ವಯಿಸಲಿದೆ ಎಂದು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
With the greatest humility, I am pleased to announce that the Islamic Republic of Iran and the United States of America, along with their allies, have agreed to an immediate ceasefire everywhere including Lebanon and elsewhere, EFFECTIVE IMMEDIATELY.
I warmly welcome the…— Shehbaz Sharif (@CMShehbaz) April 7, 2026
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪಾಕ್ ಪ್ರಧಾನಿಯ ಹೇಳಿಕೆಯನ್ನು ತಿರಸ್ಕರಿಸಿ, ಈ ಕದನ ವಿರಾಮವು ಕೇವಲ ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ವಿರುದ್ಧದ ಇಸ್ರೇಲ್‌ನ ಕಾರ್ಯಾಚರಣೆಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್ ಭಾರೀ ಕುಸಿತ
Israel also supports the US effort to ensure that Iran no longer poses a nuclear, missile and terror threat to America, Israel, Iran’s Arab neighbors and the world.
— Prime Minister of Israel (@IsraeliPM) April 8, 2026
ಬೆಂಜಮಿನ್ ನೆತನ್ಯಾಹು ಕಚೇರಿ ಹೇಳಿದ್ದೇನು?
ಇರಾನ್ ವಿರುದ್ಧದ ದಾಳಿಗಳನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಅಧ್ಯಕ್ಷ ಟ್ರಂಪ್ ಅವರ ನಿರ್ಧಾರವನ್ನು ಇಸ್ರೇಲ್ ಬೆಂಬಲಿಸುತ್ತದೆ. ಇರಾನ್ ಇನ್ನು ಮುಂದೆ ಅಮೆರಿಕ, ಇಸ್ರೇಲ್, ಇರಾನ್‌ನ ಅರಬ್ ನೆರೆಹೊರೆಯವರು ಮತ್ತು ಜಗತ್ತಿಗೆ ಪರಮಾಣು, ಕ್ಷಿಪಣಿ ಮತ್ತು ಭಯೋತ್ಪಾದನಾ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಅಮೆರಿಕದ ಪ್ರಯತ್ನವನ್ನು ಇಸ್ರೇಲ್ ಬೆಂಬಲಿಸುತ್ತದೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್ ಪ್ರಧಾನಿ ಫುಲ್ ಟ್ರೋಲ್

