ಇರಾನ್ ಅಧ್ಯಕ್ಷರ ಸಾವಿನಲ್ಲಿ ನಮ್ಮ ಕೈವಾಡವಿಲ್ಲ: ಇಸ್ರೇಲ್‌ ಸ್ಪಷ್ಟನೆ

Public TV
1 Min Read

ಟೆಲ್‌ ಅವಿವ್‌: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿನಲ್ಲಿ ನಮ್ಮ ದೇಶವು ಭಾಗಿಯಾಗಿಲ್ಲ ಎಂದು ಇಸ್ರೇಲ್‌ನ (Israel) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Iran President Ebrahim Risi), ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ ಮತ್ತು ಇತರ ಆರು ಮಂದಿ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಆದರೆ ಈ ಅವಘಡದಲ್ಲಿ ದೇಶ ಭಾಗಿಯಾಗಿರುವ ಕುರಿತು ಬರುತ್ತಿರುವ ಆರೋಪಗಳನ್ನು ಇಸ್ರೇಲಿ ಅಧಿಕಾರಿ ನಿರಾಕರಿಸಿದ್ದಾರೆ. ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ಇಸ್ರೇಲ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಆರೋಪ ಏಕೆ..?: ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಪ್ರಾಕ್ಸಿ ಗುಂಪುಗಳನ್ನು ಒಳಗೊಂಡ ದಾಳಿಗಳು ಮತ್ತು ಸಂಘರ್ಷಗಳು ಹುಟ್ಟಿಕೊಂಡವು. ಇದು ಗಾಜಾದಲ್ಲಿ ರಕ್ತಪಾತಕ್ಕೆ ಕಾರಣವಾಯಿತು. ಇದನ್ನೂ ಓದಿ: ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

ಒಟ್ಟಿನಲ್ಲಿ ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಮ್ಮೆ ಸೇಡಿನ ಕಿಡಿ ಹೊತ್ತಿಕೊಂಡಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೀಗಾಗಿ ಇಬ್ರಾಹಿಂ ರೈಸಿ ಸೇರಿದಂತೆ ಇರಾನ್ ವಿದೇಶಾಂಗ ಸಚಿವರು ಹಾಗೂ ಅಧಿಕಾರಿಗಳ ಸಾವಿಗೆ ಇಸ್ರೇಲ್ ಕಾರಣ ಎಂಬ ಆರೋಪ ಕೇಳಿಬಂದಿತ್ತು.

Share This Article