ಬೆಂಗಳೂರಿನಲ್ಲಿರೊ ಇಸ್ರೇಲ್ ರಾಯಭಾರ ಕಚೇರಿ, ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಬೆದರಿಕೆ

Public TV
1 Min Read

ಬೆಂಗಳೂರು: ನಗರದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ಹಾಗೂ ಹೈಕೋರ್ಟ್‌ಗೆ RDX ಇಟ್ಟಿರೋದಾಗಿ ಇ-ಮೇಲ್‌ ಮೂಲಕ ಬೆದರಿಕೆ ಸಂದೇಶ ಬಂದಿದೆ. ಶುಕ್ರವಾರ ಪ್ರಾರ್ಥನೆ ವೇಳೆ ಸ್ಫೋಟ ಆಗುತ್ತೆ ಎಂದೂ ಸಹ ಮೇಲ್​ನಲ್ಲಿ ತಿಳಿಸಲಾಗಿದೆ.

ಸೆ.22 ರಂದು Cho_ramaswamy@hotmail ಎಂಬ ಐಡಿಯಿಂದ ಮೇಲ್ ಕಳಿಸಲಾಗಿದೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ರಿಸ್ಕ್ ತೆಗೆದುಕೊಳ್ಳದೇ ಮೇಲ್ ಬಂದ ಬಳಿಕ ಸರ್ಚ್ ಆಪರೇಷನ್ ಕೈಗೊಂಡಿದ್ದಾರೆ. ತೀವ್ರ ತಪಾಸಣೆ ಬಳಿಕ ಇದು ಹುಸಿ ಬೆದರಿಕೆ ಮೇಲ್ ಎಂಬುದು ದೃಢವಾಗಿದೆ. IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಪದೇ ಪದೇ ರಾಮಸ್ವಾಮಿ ಎಂಬ ಇ.ಮೇಲ್ ಐಡಿಯಿಂದ ಬೆದರಿಕೆ ಇ-ಮೇಲ್ ಬರುತ್ತಿದ್ದರಿಂದ ರಾಮಸ್ವಾಮಿ ಎಂಬ ಇ-ಮೇಲ್ ಐಡಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಜ್ಞಾತ ಸ್ಥಳದಿಂದ ಬೆದರಿಕೆ ಇ.ಮೇಲ್ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ಬೆಂಗಳೂರು ಪೊಲೀಸರಿಗೆ ಕಿಡಿಗೇಡಿಯನ್ನ ಪತ್ತೆ ಹಚ್ಚುವುದು ದೊಡ್ಡ‌ ಸವಾಲಾಗಿದೆ. ನಿರಂತರವಾಗಿ Cho_ramaswamy@hotmail ಎಂಬ ಮೇಲ್ ಐಡಿ ಹಿಂದೆ ಬಿದ್ದಿದ್ದರು ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ.

ಸದ್ಯ ಪೊಲೀಸರು ಹಾಟ್ ಮೇಲ್‌ಗೆ ಪತ್ರ ಬರೆದು ಮಾಹಿತಿ ಕೇಳಿದ್ದು, ಹಾಟ್ ಮೇಲ್ ನಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ. ಹೀಗಾಗಿ IP ಅಡ್ರೆಸ್ ಮೂಲಕ ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಘಟನೆ ಬಗ್ಗೆ ವಿಧಾನಸೌಧ ಹಾಗು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, 10 ತಂಡಗಳನ್ನ ಮಾಡಿ ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Share This Article