ಇಸ್ರೇಲ್‌, ಅಮೆರಿಕ ವಾಯುನೆಲೆಗಳ ಮೇಲೆ ದಾಳಿ ಮಾಡ್ತೀವಿ: ಟ್ರಂಪ್‌ಗೆ ಇರಾನ್‌ ವಾರ್ನಿಂಗ್‌

1 Min Read

ಟೆಹ್ರಾನ್: ಅಮೆರಿಕ (America) ಮತ್ತು ಇಸ್ರೇಲ್‌ (Israel) ವಾಯುನೆಲೆಗಳ ಮೇಲೆ ದಾಳಿ ಮಾಡ್ತೀವಿ ಎಂದು ಇರಾನ್‌ (Iran) ಎಚ್ಚರಿಕೆ ಕೊಟ್ಟಿದೆ. ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮೂರನೇ ವಾರಕ್ಕೆ ಕಾಲಿಟ್ಟಿದ್ದು, 116ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಹೊತ್ತಿನಲ್ಲೇ ಟ್ರಂಪ್‌ಗೆ ಇರಾನ್‌ ವಾರ್ನಿಂಗ್‌ ಮಾಡಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಪ್ರತಿಭಟನಾಕಾರರನ್ನು ಟಾರ್ಗೆಟ್‌ ಮಾಡಿ ಹತ್ಯೆ ನಡೆಸಿದರೆ, ಇರಾನ್‌ ತಪ್ಪ ಬೆಲೆ ತೆರಬೇಕಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಈಗ ಅಮೆರಿಕ ಅಧ್ಯಕ್ಷರಿಗೆ ಇರಾನ್‌ ಕೂಡ ಕೌಂಟರ್‌ ಕೊಟ್ಟಿದೆ. ಇದನ್ನೂ ಓದಿ: ಭಾರತಕ್ಕೆ ನನ್ನನ್ನು ಕಂಡರೆ ಭಯ, ಪಾಕ್‌ ಸೇನೆಯಿಂದ ನನಗೆ ಆಹ್ವಾನ – ಪಹಲ್ಗಾಮ್ ಸಂಚುಕೋರನಿಂದ ಪುಂಗಿ

ಇರಾನ್ ಮೇಲೆ ದಾಳಿ ನಡೆದರೆ, ಆಕ್ರಮಿತ ಪ್ರದೇಶ (ಇಸ್ರೇಲ್ ಅನ್ನು ಉಲ್ಲೇಖಿಸಿ) ಮತ್ತು ಈ ಪ್ರದೇಶದ ಎಲ್ಲಾ ಅಮೆರಿಕನ್ ಮಿಲಿಟರಿ ಕೇಂದ್ರಗಳು, ನೆಲೆಗಳು ಮತ್ತು ಹಡಗುಗಳು ನಮ್ಮ ಟಾರ್ಗೆಟ್‌ ಆಗುತ್ತವೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ರಾಜಧಾನಿಯ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಈ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್‌ ಜೊತೆ ಯುದ್ಧಕ್ಕೆ ಇರಾನ್ ಸನ್ನದ್ಧವಾಗಿದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಹಾಕೈ | ಅಮೆರಿಕ ಏರ್‌ಸ್ಟ್ರೈಕ್‌ – ಸಿರಿಯಾದಲ್ಲಿ 36 ಐಸಿಸ್‌ ಉಗ್ರರ ನೆಲೆಗಳು ಉಡೀಸ್‌

ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದ್ದು, ಪ್ರತಿಭಟನೆಗಳು ಭುಗಿಲೆದ್ದಿವೆ. ದೇಶಾದ್ಯಂತ ಸರ್ಕಾರಿ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಇಸ್ರೇಲ್‌ನೊಂದಿಗಿನ 12 ದಿನಗಳ ಯುದ್ಧದ ಪರಿಣಾಮಗಳ ವಿರುದ್ಧ ಜನರು ಸಿಡಿದೆದ್ದಿದ್ದಾರೆ.

Share This Article