ಉತ್ತರ ಲೆಬನಾನ್‌ ಮೇಲೆ ಇಸ್ರೇಲ್‌ ವಾಯುದಾಳಿ – ಹಮಾಸ್‌ ಟಾಪ್‌ ಕಮಾಂಡರ್‌ ಹತ್ಯೆ

Public TV
2 Min Read

– ಈವರೆಗೆ 2,000ಕ್ಕೂ ಹೆಚ್ಚು ಸೇನಾ ನೆಲೆಗಳ ಗುರಿಯಾಗಿಸಿ ದಾಳಿ; ಐಡಿಎಫ್‌

ಬೈರೂತ್: ಇಸ್ರೇಲ್ ಮತ್ತು ಇರಾನ್ (Israel Iran War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ದಕ್ಷಿಣ ಲೆಬನಾನ್‌ ಬಳಿಕ ಹಿಜ್ಬುಲ್ಲಾ (Hezbollah) ಭಯೋತ್ಪಾದಕರ ಗುಂಪನ್ನು ಗುರಿಯಾಗಿಸಿ ಉತ್ತರ ಲೆಬನಾನ್‌ (North Lebanon) ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದೆ. ಟ್ರಿಪೋಲಿ ಶನಿವಾರ ಟ್ರಿಪೋಲಿ ನಗರದ ಮೇಲೆ ದಾಳಿ ನಡೆಸಿ, ಹಮಾಸ್‌ನ ಚೀಫ್‌ ಕಮಾಂಡರ್‌ ಹಾಗೂ ಆತನ ಕುಟುಂಬವನ್ನು ಹತ್ಯೆಗೈದಿದೆ.

ಈ ಬೆನ್ನಲ್ಲೇ ಇಸ್ರೇಲ್‌ ಸೇನೆಯು ಇನ್ನಷ್ಟು ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ತಕ್ಷಣವೇ ಆ ಪ್ರದೇಶದ ನಿವಾಸಿಗಳು ಸ್ಥಳದಿಂದ ಎತ್ತಂಗಡಿ ಮಾಡುವಂತೆ ಎಚ್ಚರಿಸಿದೆ. ಇದನ್ನೂ ಓದಿ: ಎಲ್ಲರೂ ಒಟ್ಟಾಗಿ ಇಸ್ರೇಲ್‌ ಸೋಲಿಸೋಣ – ಇರಾನ್‌ ಸುಪ್ರೀಂ ಲೀಡರ್‌ ಕರೆ

250 ಹಿಜ್ಬುಲ್ಲಾ ಭಯೋತ್ಪಾದಕರ ಹತ್ಯೆ:
ಶುಕ್ರವಾರವಷ್ಟೇ ಹಿಜ್ಬುಲ್ಲಾ ಭಯೋತ್ಪಾದಕರನ್ನು ಹತ್ಯೆಗೈದಿರುವ ಬಗ್ಗೆ ಇಸ್ರೇಲ್‌ ಮಾಹಿತಿ ಹಂಚಿಕೊಂಡಿತ್ತು. ಕಳೆದ ಒಂದು ವಾರದಲ್ಲಿ ಇಸ್ರೇಲ್‌ ಹಿಜ್ಬುಲ್ಲಾದ 2,000ಕ್ಕೂ ಹೆಚ್ಚು ಸೇನಾ ನೆಲೆಗಳ ಗುರಿಯಾಗಿಸಿ ದಾಳಿ ನಡೆಸಿದ್ದು, 250ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿದೆ. ಇದರಲ್ಲಿ 5 ಬೆಟಾಲಿಯನ್‌ ಕಮಾಂಡರ್‌, 10 ಕಂಪನಿ ಕಮಾಂಡರ್‌ ಹಾಗೂ 6 ಪ್ಲಟೂನ್‌ ಕಮಾಂಡರ್‌ಗಳನ್ನ ಕೊಂದಿರುವುದಾಗಿ ಹೇಳಿಕೊಂಡಿತ್ತು. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌

ಇರಾನ್ ಸುಪ್ರೀಂ ಲೀಡರ್ ಯುದ್ಧಕ್ಕೆ ಕರೆ
ಟೆಗ್ರಾನ್ ನಗರದ ಕೇಂದ್ರ ಭಾಗದಲ್ಲಿರುವ ಇಮಾಮ್ ಖೊಮೇನಿ ಗ್ರ‍್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಮಾತನಾಡಿದ ಇರಾನ್ ಸರ್ವೋಚ್ಛ ನಾಯಕ ಹಾಗೂ ಧರ್ಮ ಗುರು ಅಯತೊಲ್ಲಾ ಅಲಿ ಖಮೇನಿ, ‘ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು. ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ ಎಂದು ಕರೆ ಕೊಟ್ಟಿದ್ದರು. ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!

ಇಸ್ರೇಲ್ ಮೇಲಿನ ದಾಳಿಗೆ ಖಮೇನಿ ಸಮರ್ಥನೆ!
ಇಸ್ಲಾಮಿಕ್ ರಿಪಬ್ಲಿಕ್ ದೇಶವಾದ ಇರಾನ್ ಕೆವು ದಿನಗಳ ಹಿಂದೆ ಇಸ್ರೇಲ್ ಮೇಲೆ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗಳನ್ನು ‘ಕಾನೂನುಬದ್ದ’ ಎಂದು ಪ್ರತಿಪಾದಿಸಿದ ಖಮೇನಿ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನೂ ‘ನ್ಯಾಯಸಮ್ಮತ’ ಎಂದು ಪ್ರತಿಪಾದಿಸಿದ್ದರು.

Share This Article