Israel Strikes Iran | ಖಮೇನಿ ಟಾರ್ಗೆಟ್‌ ಮಾಡಿ 7 ಮಿಸೈಲ್ ಲಾಂಚ್‌ – ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

2 Min Read

– ಇತ್ತ ಇರಾನ್, ಇರಾಕ್ ವಾಯುಸೀಮೆ ಬಂದ್‌

ಟೆಹ್ರಾನ್: ಪರಮಾಣು ಶಸ್ತ್ರಾಸ್ತ್ರಗಳ ಒಪ್ಪಂದ ಕುರಿತು ಮಾತುಕತೆ ನಡೆಯುತ್ತಿರುವಾಗಲೇ ಇಸ್ರೇಲ್‌ – ಅಮೆರಿಕ ಇರಾನ್‌ ಮೇಲೆ ಜಂಟಿಯಾಗಿ ದಾಳಿ ನಡೆಸಿವೆ. ಈಗಾಗಲೇ ದಾಳಿಯ ಭೀಕರತೆ ಬಿಚ್ಚಿಡುವ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಇಸ್ರೇಲ್‌ ಮೇಲೆ ಪ್ರತಿದಾಳಿಗೆ ಇರಾನ್‌ ಸಜ್ಜಾಗಿದೆ.

ಖಮೇನಿ ಸ್ಥಳಾಂತರ
ಇರಾನ್‌ನ ಪರಮಾಣು ಕೇಂದ್ರ, ಇಂಟಲಿಜೆನ್ಸ್‌ ಹಾಗೂ ಗುಪ್ತಚರ ಸಂಸ್ಥೆ ಸೇರಿದಂತೆ ಸುಮಾರು 30 ಗುರಿಗಳನ್ನ ಟಾರ್ಗೆಟ್‌ ಮಾಡಿ ಇಸ್ರೇಲ್‌ ಅಮೆರಿಕ ಜಂಟಿ ದಾಳಿ ನಡೆಸಿವೆ. ಈ ಪೈಕಿ ಇರಾನ್‌ ಸರ್ವೋಚ್ಛ ನಾಯಕ ಅಲಿ ಖಮೇನಿಯನ್ನೇ ಟಾರ್ಗೆಟ್‌ ಮಾಡಿ 7 ಮಿಸೈಲ್‌ ಹಾರಿಸಲಾಗಿದೆ. ರಾಜಧಾನಿ ಟೆಹ್ರಾನ್‌ಗೆ ಮಿಸೈಲ್‌ಗಳು ಅಪ್ಪಳಿಸುತ್ತಿದ್ದಂತೆ ಖಮೇನಿ ಅವರನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇರಾನ್-ಇರಾಕ್ ವಾಯುಸೀಮೆ ಬಂದ್‌
ಮಿಸೈಲ್‌ ದಾಳಿ ಬಳಿಕ ಯುದ್ಧ ಕಾರ್ಮೋಡ ಮತ್ತಷ್ಟು ಹೆಚ್ಚಾಗಿದ್ದು, ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಇರಾನ್ ತನ್ನ ವಾಯುಪ್ರದೇಶವನ್ನ ಮುಚ್ಚಿದೆ. ಜೊತೆಗೆ ಇರಾಕ್‌ಗೂ ಕೂಡ ತನ್ನ ವಾಯುಪ್ರದೇಶ ಮುಚ್ಚಲು ಮುನ್ನೆಚ್ಚರಿಕೆ ನೀಡಿದೆ. ಈ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆ ಹೆಚ್ಚುತ್ತಿರುವುದರಿಂದ ಈ ಕ್ರಮಕ್ಕೆ ಮುಂದಾಗಿವೆ.

ಇಸ್ರೇಲ್‌ನಲ್ಲಿ ಶಾಲೆಗಳು ಬಂದ್‌
ಇನ್ನೂ ಇರಾನ್‌ ಕೂಡ ಪ್ರತಿದಾಳಿಗೆ ಸಜ್ಜಾಗುತ್ತಿರುವ ಹಿನ್ನೆಲೆ ಇಸ್ರೇಲ್‌ ಸಾರ್ವಜನಿಕರನ್ನ ಎಚ್ಚರಿಸುತ್ತಿದೆ. ದೇಶಾದ್ಯಂತ ಪ್ರಮುಖ ಪ್ರದೇಶಗಳಲ್ಲಿ ವಾಯುದಾಳಿ ಕುರಿತ ಸೈರನ್‌ ಗಳ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಜೊತೆಗೆ ಇಸ್ರೇಲ್‌ನ ಜೆರುಸಲೆಮ್‌ನಲ್ಲಿ ಸೋಮವಾರ (ಮಾ.2) ಸಂಜೆ 6:00 ಗಂಟೆಯವರೆಗೆ ಶಾಲೆಗಳು ಮತ್ತು ಇತರ ಎಲ್ಲಾ ಕಚೇರಿಗಳನ್ನು ಮುಚ್ಚುವಂತೆ ಘೋಷಿಸಿದೆ.

ಇರಾನ್‌ನ ಯಾವ ಯಾವ ಗುರಿಗಳ ಮೇಲೆ ದಾಳಿ?
(ಇಸ್ರೇಲ್‌-ಅಮೆರಿಕ ಜಂಟಿ ದಾಳಿ)
* ರಕ್ಷಣಾ ಸಚಿವಾಲಯ
* ಗುಪ್ತಚರ ಪ್ರಧಾನ ಕಚೇರಿ
* ಸುಪ್ರೀಂ ನಾಯಕ ಅಲಿ ಖಮೇನಿ ಅವರ ಕಚೇರಿ
* ಇರಾನ್‌ನ ಪರಮಾಣು ಶಕ್ತಿ
* ಪಾರ್ಚಿನ್

ಯಾವ ಯಾವ ನಗರಗಳಲ್ಲಿ ದಾಳಿ?
ಟೆಹ್ರಾನ್, ಕೋಮ್, ತಬ್ರಿಜ್, ಕೆರ್ಮನ್‌ಶಾ, ಕರಾಜ್, ಇಸ್ಫಹಾನ್.

Share This Article