ಇಸ್ರೆಲ್‌ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು

By
1 Min Read

ಟೆಲ್‌ ಅವಿವ್‌: ಗಾಜಾ ವಿರುದ್ಧದ ಯುದ್ಧದ ಹೊತ್ತಲ್ಲೇ ಇಸ್ರೇಲ್‌ನಲ್ಲಿ (Isreal) ಮಹತ್ವದ ಬೆಳವಣಿಗೆ ನಡೆದಿದೆ. ಗಾಜಾ ಯುದ್ಧದ ವಿಚಾರದಲ್ಲಿ ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ರಕ್ಷಣಾ ಮಂತ್ರಿ ಯೋವ್ ಗಾಲೆಂಟ್‌ರನ್ನು (Yoav Gallant) ಪ್ರಧಾನಿ ನೆತನ್ಯಾಹು (Benjamin Netanyahu) ತಮ್ಮ ಸಂಪುಟದಿಂದ ರಾತ್ರೋರಾತ್ರಿ ಪದಚ್ಯುತಗೊಳಿಸಿದ್ದಾರೆ.

ರಕ್ಷಣಾ ಮಂತ್ರಿಯನ್ನು ವಜಾಗೊಳಿಸಿದ ಬೆನ್ನಲ್ಲೇ ನೆತನ್ಯಾಹು ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಧ್ಯರಾತ್ರಿಯೇ ಟೆಲ್ ಅವೀವ್‌ನಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆದಿದೆ.  ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ನೆತನ್ಯಾಹು ವಿರೋಧಿ ಘೋಷಣೆಗಳು ಮುಗಿಲುಮುಟ್ಟಿದ್ದು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಸಂಬಂಧ ನೆತನ್ಯಾಹು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.

ಕಳೆದ ವರ್ಷವೇ ಯೋವ್ ಗಾಲೆಂಟ್ ತಲೆದಂಡಕ್ಕೆ ನೆತನ್ಯಾಹು ಯತ್ನಿಸಿದ್ದರು. ಆಗಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ಯುದ್ಧದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರ ನಡುವೆ ಸಂಪೂರ್ಣ ನಂಬಿಕೆಯ ಅಗತ್ಯವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿ 251 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು ಈ ಪೈಕಿ 100 ಮಂದಿ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.

 

Share This Article