ʻನಾನು ಸತ್ತಿದ್ದೇನೆʼ – ಕಾಫಿ ಕುಡಿಯುತ್ತಾ ವಿರೋಧಿಗಳನ್ನು ಟ್ರೋಲ್‌ ಮಾಡಿದ ನೆತನ್ಯಾಹು

1 Min Read

ಟೆಲ್‌ ಅವೀವ್‌: ನಾನು ಸತ್ತಿಲ್ಲ ಬದುಕಿದ್ದೇನೆ ಎಂದು ಇಸ್ರೇಲ್‌ (Israel) ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಕೆಫೆಯಲ್ಲಿ ಕಾಫಿ ಕುಡಿಯುತ್ತಾ ತನ್ನ ವಿರೋಧಿಗಳನ್ನು ಟ್ರೋಲ್‌ ಮಾಡಿದ್ದಾರೆ.

ನಾನು ಸತ್ತಿದ್ದೇನೆ.. ಕಾಫಿಗಾಗಿ ಎಂದು ಹೀಬ್ರೂ ಭಾಷೆಯಲ್ಲಿ ಹೇಳಿದ್ದಾರೆ. ಅಲ್ಲದೇ ನಾನು ಸಾಯುವರೆಗೆ ನನ್ನ ದೇಶವನ್ನು ಪ್ರೀತಿಸುತ್ತೇನೆ ಎಂದು ಹೇಳಿ ಟಾಂಗ್‌ ಕೊಟ್ಟಿದ್ದಾರೆ. ವಿಡಿಯೋದಲ್ಲಿ ಇಸ್ರೇಲಿಗಳು ತಾಜಾ ಗಾಳಿಯನ್ನು ಸೇವಿಸಲು ಮನೆಯಿಂದ ಹೊರಗಡೆ ಬರಬೇಕು. ಆದರೆ ಬಂಕರ್‌ನಲ್ಲೇ ಇರಿ ಎಂದು ಜನರಿಗೆ ಸಂದೇಶ ಕಳುಹಿಸಿದ್ದಾರೆ. ಇದನ್ನೂ ಓದಿ: 9/11 ರೀತಿ ದಾಳಿ ನಡೆಸಿ ನಮ್ಮ ಮೇಲೆ ಆರೋಪ ಹೊರಿಸಲು ಎಪ್ಸ್ಟೀನ್ ಜಾಲ ಪ್ಲ್ಯಾನ್‌: ಇರಾನ್ ಆರೋಪ

ಬಲಗೈಯಲ್ಲಿ 6 ಬೆರಳು ಇದೆ ಎಂದು ಫೇಕ್‌ ವಿಡಿಯೋ ಮಾಡಿದ್ದಕ್ಕೆ ಬಲಗೈಯಲ್ಲೇ ಕಾಫಿ ಕುಡಿಯುತ್ತಿರುವ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದಾರೆ. ಇದನ್ನೂ ಓದಿ: ಎನ್‌ಡಿಎ ಗೆದ್ದರೆ ವಿಜಯ್‌ಗೆ ಡಿಸಿಎಂ ಹುದ್ದೆ- ಟಿವಿಕೆಗೆ ಬಿಜೆಪಿ ಆಫರ್‌

ಏನಿದು ಸುಳ್ಳು ವದಂತಿ?
ಗುರುವಾರ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಬೆಂಜಮಿನ್‌ ನೆತನ್ಯಾಹು ಮಾತನಾಡಿದ್ದರು. ಈ ವೇಳೆ ಇರಾನ್‌ ನಡೆಸಿದ ದಾಳಿಗೆ ನೆತನ್ಯಾಹು ಮೃತಪಟ್ಟಿದ್ದಾರೆ. ಇದು ಎಐ ವಿಡಿಯೋ ಆಗಿದ್ದು ಬಲಗೈಯಲ್ಲಿ 6 ಬೆರಳು ಇದೆ. ಮೃತಪಟ್ಟರೂ ಎಐ ವಿಡಿಯೋ ಮಾಡುವ ಮೂಲಕ ಬದುಕಿದ್ದೇನೆ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂಬ ಹೆಡ್‌ಲೈನ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Share This Article