ಬೆಂಗಳೂರು: ವಿದೇಶ ಪ್ರಯಾಣದ ದಿನಾಂಕ ಮರುನಿಗದಿಗೆ ಕೋರಿ ದರ್ಶನ್ (Darshan) ಅವರು 57ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಡೆವಿಲ್ ಸಿನಿಮಾ ಶೂಟಿಂಗ್‌ಗೆ (Devil Shooting) ವಿದೇಶಕ್ಕೆ ತೆರಳಲು ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಯಾಗಿರುವ ದರ್ಶನ್‌ಗೆ ಜುಲೈ 1 ರಿಂದ 25ರ ವರೆಗೆ ಕೋರ್ಟ್ ಅನುಮತಿ ನೀಡಿತ್ತು. ಆದರೆ ಇಸ್ರೇಲ್ (Israel) ಮತ್ತು ಇರಾನ್ (Iran) ಮಧ್ಯೆ ಯುದ್ದದ ವಾತಾವರಣದಿಂದ ದುಬೈ ಪ್ರಯಾಣವನ್ನು ಚಿತ್ರ ತಂಡ ಕೈಬಿಟ್ಟಿದೆ. ಆದರೆ ಈಗ ಶೂಟಿಂಗ್ ಅನ್ನು ಥಾಯ್ಲೆಂಡ್‌ನಲ್ಲಿ ಮಾತ್ರ ಮಾಡಲು ಚಿತ್ರತಂಡ ಮುಂದಾಗಿದೆ. ಇದನ್ನೂ ಓದಿ: ರಶ್ಮಿಕಾ ಹೇಳಿದ್ರೆ ಅದು ನಿಜ ಆಗೋಲ್ಲ – ನಿಧಿ ಸುಬ್ಬಯ್ಯ ಕೌಂಟರ್
ಇಂದು ನ್ಯಾಯಾಲಯಕ್ಕೆ ಈ ವಿಚಾರ ತಿಳಿಸಿದ ದರ್ಶನ್ ಪರ ಸುನಿಲ್ ಕುಮಾರ್, ಕೋರ್ಟ್ ಜು.1ರಿಂದ ಜು.25ರ ವರೆಗೆ ದುಬೈ ಮತ್ತು ಯುರೋಪ್‌ಗೆ ತೆರಳಲು ಅವಕಾಶ ನೀಡಿದೆ. ಆದರೆ ಯುದ್ಧದ ಕಾರಣದಿಂದ ಜುಲೈ 11 ರಿಂದ 30 ರವರೆಗೆ ಅವಕಾಶ ನೀಡುವಂತೆ ಕೋರಿದರು. ಇದನ್ನೂ ಓದಿ: ಕಿಚ್ಚ ಸುದೀಪ್ ಹೊಸ ಚಿತ್ರಕ್ಕೆ ಚೆನ್ನೈನಲ್ಲಿ ಮುಹೂರ್ತ
ಈಗಾಗಲೇ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ ನೀಡಿದೆ. ದಿನಾಂಕ ಮತ್ತು ಸ್ಥಳ ಬದಲಾವಣೆಗೆ ಮಾತ್ರ ನಾವು ಅನುಮತಿ ಕೇಳುತ್ತಿದ್ದೇವೆ. ಜು.10 ರಂದು ಕೋರ್ಟ್‌ಗೆ ಬಂದು ನನ್ನ ಕಕ್ಷಿದಾರ ದರ್ಶನ್ ಹಾಜರಾಗುತ್ತಾರೆ ಎಂದು ತಿಳಿಸಿದರು. ಮರುನಿಗದಿಗೆ ಕೋರಿ ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಂಗಳವಾರ (ನಾಳೆ) ಆದೇಶ ಪ್ರಕಟಿಸುವುದಾಗಿ ತಿಳಿಸಿತು.