ಬಾಂಬ್‌ ಹಾಕಿದ ಬೆನ್ನಲ್ಲೇ ಇರಾನ್‌ಗೆ MIGA ಘೋಷಿಸಿದ ಟ್ರಂಪ್‌

Public TV
2 Min Read

ವಾಷಿಂಗ್ಟನ್‌: ಪರಮಾಣು ಸ್ಥಾವರಗಳ ಮೇಲೆ ಅಮೆರಿಕ (USA) ಬಾಂಬ್‌ ದಾಳಿ ನಡೆಸಿದ ನಂತರ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು MAGA ದಂತೆ ಇರಾನ್‌ ಅಭಿವೃದ್ಧಿಗೆ MIGA ಘೋಷಿಸಿದ್ದಾರೆ.

ಪ್ರಸ್ತುತ ಇರಾನಿನ ಆಡಳಿತವು ಇರಾನ್ ಅನ್ನು ಮತ್ತೆ ಶ್ರೇಷ್ಠವಾಗಿಸಲು ಸಾಧ್ಯವಾಗದಿದ್ದರೆ ಆಡಳಿತ ಬದಲಾವಣೆ (Regime Change) ಯಾಕೆ ಮಾಡಬಾರದು ಎಂದು ಪ್ರಶ್ನಿಸಿ MIGA ಎಂದು ಬರೆದಿದ್ದಾರೆ.

ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯಗಳ ಮೇಲೆ ದಾಳಿ ನಡೆಸಿ ನಾಶ ಮಾಡಿದ್ದೇವೆ. ಮಧ್ಯಪ್ರಾಚ್ಯದ ದೇಶಗಳನ್ನು ಬೆದರಿಸುತ್ತಿದ್ದ ಇರಾನ್‌ನಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ಗೆ ಅಣ್ವಸ್ತ್ರ ನೀಡಲು ಮುಂದೆ ಬಂದ ಹಲವು ದೇಶಗಳು!

ಏನಿದು MIGA?
ಭಾರತದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಅಭಿಯಾನವನ್ನೇ ನಡೆಸಿದ್ದರು. ಅದೇ ರೀತಿ ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ ಮಗಾ (MAG) ಅಭಿಯಾನವನ್ನೇ ನಡೆಸಿ ಜಯಗಳಿಸಿದ್ದರು. ಇದನ್ನೂ ಓದಿ: ಲೇಡಿ ಕಿಲ್ಲರ್‌ನಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!

Make America Great Again ಅನ್ನು ಸಂಕ್ಷಿಪ್ತವಾಗಿ MAGA ಎಂದು ಕರೆಯಲಾಗುತ್ತದೆ. ಅಮೆರಿಕದ ಕಂಪನಿಗಳು ಅಮೆರಿಕದಲ್ಲೇ ಬಂಡವಾಳ ಹೂಡಬೇಕು. ಅಮೆರಿಕದ ಜನರಿಗೆ ಉದ್ಯೋಗ ನೀಡಬೇಕು. ಮತ್ತೊಮ್ಮೆ ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿಸಬೇಕು ಎನ್ನುವುದು ಈ MAGA ಅಭಿಯಾನದ ತಿರುಳು. ಅಮೆರಿಕ MAGA ದಂತೆ ಟ್ರಂಪ್‌ ಅವರು ಇರಾನ್‌  ಮತ್ತೊಮ್ಮೆ ಶ್ರೇಷ್ಠ ದೇಶವಾಗಬೇಕು. ಇದಕ್ಕೆ MAKE IRAN GREAT AGAIN (MIGA) ಆರಂಭವಾಗಬೇಕು ಎಂದು ಸಲಹೆ ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ಗೆ ಎಚ್ಚರಿಕೆ ಕೊಟ್ಟು ಆತಂಕ ಹೊರಹಾಕಿದ ಮುನೀರ್‌

Share This Article