ಇರಾನ್‌ನಿಂದ ಕ್ಷಿಪಣಿ ದಾಳಿ – ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು, ಟರ್ಕಿಯಲ್ಲಿ ಲ್ಯಾಂಡಿಂಗ್‌

Public TV
1 Min Read

ಇಸ್ತಾಂಬುಲ್‌/ಬೆಂಗಳೂರು: ಇಸ್ರೇಲ್ (Isreal) ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳ (Missile) ಮೂಲಕ ಇರಾನ್‌ (Iran) ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.

ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್‌ನಿಂದ (Zurich) ದುಬೈಗೆ ಬಂದು ದುಬೈನಿಂದ (Dubai) ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ವೇಳೆ ಇರಾನ್‌ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಕ್ಷಿಪಣಿ ದಾಳಿಯ ಬೆನ್ನಲ್ಲೇ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ (Istanbul) ಲ್ಯಾಂಡ್‌ ಮಾಡಲಾಗಿದೆ. ಕ್ಷಿಪಣಿ ದಾಳಿಯಿಂದ ಕರ್ನಾಟಕದ ಪ್ರಯಾಣಿಕರ ಜೊತೆ ಸುಮಾರು 300 ಮಂದಿ ಪ್ರಯಾಣಿಕರು ವಿಮಾನದಲ್ಲಿ ಇದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ರಾಕೆಟ್‌ ಸುರಿಮಳೆ – ಏಕಕಾಲಕ್ಕೆ 400ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್‌ ಅಟ್ಯಾಕ್‌

ಜ್ಯೂರಿಕ್‌ ಕಾಲಮಾನ ಮಧ್ಯಾಹ್ನ 3:25ಕ್ಕೆ ಟೇಕಾಫ್‌ ಆದ ವಿಮಾನ ರಾತ್ರಿ10 ಗಂಟೆಗೆ ದುಬೈ ತಲುಪಬೇಕಿತ್ತು. ಕಳೆದ 6 ಗಂಟೆಯಿಂದ ನಾವು ವಿಮಾನದಲ್ಲೇ ಇದ್ದೇವೆ ಎಂದು ವಿಡಿಯೋ ಕಾಲ್‌ ಮಾಡಿ ತಿಳಿಸಿದ್ದಾರೆ.

ಸದ್ಯ ಇರಾನ್‌ ಮತ್ತು ಇರಾಕ್‌ ವಾಯುಸೀಮೆ ಬಂದ್‌ ಆಗಿದ್ದು ಯಾವುದೇ ವಿಮಾನ ಹಾರಾಟ ನಡೆಸುತ್ತಿಲ್ಲ.

Share This Article