– ಅಮೆರಿಕ ದಾಳಿ ನಡೆಸಿದ ಮರುದಿನವೇ ಅಟ್ಯಾಕ್
ಟೆಹ್ರಾನ್/ಟೆಲ್ ಅವಿವ್: ಅಮೆರಿಕ ಬಾಂಬ್ ದಾಳಿ ನಡೆಸಿದ ಒಂದು ದಿನದ ನಂತರ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ (Fordow Nuclear Site) ಮೇಲೆ ಮೇಲೆ ಇಸ್ರೇಲ್ ಕೂಡ ದಾಳಿ (Israel Strikes) ನಡೆದಿದೆ.
ಫೋರ್ಡೋ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನ್‌ನ (Iran) ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಬಳಿಕ ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ದಾಳಿಯನ್ನು ಖಚಿತಪಡಿಸಿದ್ದಾರೆ. ನಮ್ಮ ರಕ್ಷಣಾಪಡೆಗಳು ಟೆಹ್ರಾನ್ ಮಧ್ಯಭಾಗದ ಗುರಿಗಳ ಮೇಲೆ ನಿಖರ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಸ್ಥಳದಲ್ಲಿ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಈ ನಡುವೆ ಉತ್ತರ ಟೆಹ್ರಾನ್‌ನಲ್ಲೂ ಭಾರೀ ಸ್ಫೋಟಗಳು ಸಂಭವಿಸಿದೆ. ಇದನ್ನೂ ಓದಿ: ಅಮೆರಿಕನ್ನರು ಹಿಂದೆಂದೂ ನೋಡಿರದ ದಾಳಿ ಎದುರಿಸಲು ಸಿದ್ಧರಾಗಿ – ಖಮೇನಿ ಬಿಗ್ ವಾರ್ನಿಂಗ್
ಇರಾನ್‌ನ ಫೋರ್ಡೋ ಪರಮಾಣು ಘಟಕವನ್ನ ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು. ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ಹತ್ತಿರದಲ್ಲಿ ನಿರ್ಮಾಣವಾಗಿರುವ ಈ ಘಟಕದ ನಿಜವಾದ ಗಾತ್ರ ಮತ್ತು ಒಳಗಡೆ ಯಾವೆಲ್ಲ ಸಂಶೋಧನೆಗಳು ನಡೆಯುತ್ತಿದೆ.
ಫೋರ್ಡೋ ಅಣು ಕೇಂದ್ರ ಎಷ್ಟು ಸೇಫ್?
ಫೋರ್ಡೋ ಘಟಕದ ಮುಖ್ಯ ಸಭಾಂಗಣವು ನೆಲದಡಿಯಲ್ಲಿ ಸುಮಾರು 80 ರಿಂದ 90 ಮೀಟರ್ (295 ಅಡಿ) ಆಳದಲ್ಲಿದೆ. ಇಷ್ಟು ಅಡಿ ಆಳದಲ್ಲಿರುವ ಈ ಘಟಕವನ್ನು ಇಸ್ರೇಲ್ ಹೊಂದಿರುವ ಯಾವುದೇ ವೈಮಾನಿಕ ಬಾಂಬ್‌ನಿಂದ ಧ್ವಂಸ ಮಾಡಲು ಸಾಧ್ಯವಿಲ್ಲ. ಹೀಗಾಗಿಯೇ ವಿಶ್ವದಲ್ಲೇ ಅತಿಹೆಚ್ಚು ಪವರ್‌ಫುಲ್ ಆಗಿರುವ ಸ್ವದೇಶಿ ನಿರ್ಮಿತ GBU-57A/B Massive Ordinance Penetrator ಬಾಂಬ್‌ನಿಂದ ಅಮೆರಿಕ ದಾಳಿ ನಡೆಸಿದೆ. ಇದನ್ನೂ ಓದಿ: ವಿಶ್ವದ ಪವರ್‌ಫುಲ್ ವೆಪೆನ್ ʻಬಂಕರ್ ಬಸ್ಟರ್ʼ – 14,000 ಕೆಜಿ ತೂಕದ ಬಾಂಬ್ ಬಳಸಿ ಇರಾನ್ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ
ಅಮೆರಿಕ ದಾಳಿ ಎಷ್ಟು ಭೀಕರ?
ಇರಾನ್‌ನ ಫೋರ್ಡೊ, ನಟಾಂಜ್ ಮತ್ತು ಇಸ್ಪಹಾನ್ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಯಶಸ್ವಿ ಬಾಂಬ್ ದಾಳಿ ನಡೆಸಿದೆ. ಅಮೆರಿಕವು 6 ಶಕ್ತಿಶಾಲಿ Northrop B-2 Spirit ಯುದ್ಧವಿಮಾನ ಬಳಸಿಕೊಂಡು ಡಜನ್‌ಗಟ್ಟಲೇ ಜಿಬಿಯು -57 ಎ/ಬಿ ಬೃಹತ್ ಆರ್ಡ್‌ನೆನ್ಸ್ ಪೆನೆಟ್ರೇಟರ್ (MOP) ಬಾಂಬ್‌ಗಳನ್ನ ಬಳಸಿ ದಾಳಿ ನಡೆಸಿದೆ. ಇದನ್ನ ʻಬಂಕರ್ ಬಸ್ಟರ್ʼ ಎಂದೂ ಕರೆಯಲಾಗುತ್ತದೆ. ಈ ʻಬಂಕರ್ ಬಸ್ಟರ್ʼ ಇರಾನ್ ರಾಜಧಾನಿ ಟೆಹ್ರಾನ್‌ನಿಂದ 100 ಕಿಮೀ ದೂರದಲ್ಲಿರುವ ಫೋರ್ಡೋ ಘಟಕದ ಮೇಲೆ ದಾಳಿ ಮಾಡಿದ್ರೆ, ಜಲಾಂತರ್ಗಾಮಿ ನೌಕೆಗಳಿಂದ ಹಾರಿಸಲಾದ 30 ಟೊಮಾಹಾಕ್ ಕ್ಷಿಪಣಿಗಳು (ಕ್ರೂಸ್ ಕ್ಷಿಪಣಿ) ಉಳಿದ 2 ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿವೆ.
ಅಮೆರಿಕ ದಾಳಿ ಬಳಿಕ ಇರಾನ್, ಇಸ್ರೇಲ್ ಮೇಲೆ ಖಂಡಾಂತರ ಕ್ಷಿಪಣಿ ಹಾರಿಸಿತ್ತು. 10ಕ್ಕೂ ಹೆಚ್ಚು ನಗರಗಳ ಮೇಲೆ 30ಕ್ಕೂ ಹೆಚ್ಚು ಮಿಸೈಲ್‌ಗಳನ್ನ ಹಾರಿಸಿ ದಾಳಿ ಮಾಡಿತ್ತು. ಇದಕ್ಕೆ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದೆ. ಇದನ್ನೂ ಓದಿ: America Strikes | ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಬೆಂಬಲಿಸಿದ್ದ ಪಾಕ್‌ನಿಂದ ಇರಾನ್ ಮೇಲಿನ ದಾಳಿ ಖಂಡನೆ