ಆತ್ಮರಕ್ಷಣೆಗಾಗಿ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – ಪ್ರತ್ಯುತ್ತರವಾಗಿ 300 ರಾಕೆಟ್‌ ಹಾರಿಸಿದ ಹಿಜ್ಬುಲ್ಲಾ

Public TV
1 Min Read

ಜೆರುಸಲೇಂ: ಲೆಬನಾನ್‌ (Lebanon) ಮೂಲದ ಬಂಡುಕೋರರ ಗುಂಪು ಹಿಜ್ಬುಲ್ಲಾ ಮತ್ತು ಇಸ್ರೇಲ್‌ (Israel) ಪರಸ್ಪರ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಇಳಿದಿವೆ. ಇರಾನ್ ಬೆಂಬಲಿತ ಗುಂಪು ಹಿಜ್ಬುಲ್ಲಾ, ಪ್ರಮುಖ ಇಸ್ರೇಲಿ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು 320 ಕ್ಕೂ ಹೆಚ್ಚು ಕತ್ಯುಶಾ ರಾಕೆಟ್‌ ದಾಳಿ ನಡೆಸಿರುವುದಾಗಿ ಘೋಷಿಸಿದೆ.

ದಾಳಿ ತಟಸ್ಥಗೊಳಿಸಲು ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಇಸ್ರೇಲಿ ನಾಗರಿಕರಿಗೆ ತಕ್ಷಣದ ಅಪಾಯವನ್ನುಂಟುಮಾಡುವ ಹಿಜ್ಬುಲ್ಲಾ ಸ್ಥಾನಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.‌ ಇದನ್ನೂ ಓದಿ: ಪಾಕ್ ಕ್ರಿಕೆಟಿಗ ಶಾಹೀನ್ ಶಾ ಅಫ್ರಿದಿಗೆ ಗಂಡು ಮಗು ಜನನ – `ತಾತ’ನಾದ ಪಾಕ್‌ನ ಹೊಡಿ ಬಡಿ ದಾಂಡಿಗ ಶಾಹಿದ್ ಅಫ್ರಿದಿ!

ಉತ್ತರ ಮತ್ತು ಮಧ್ಯ ಇಸ್ರೇಲ್ ಟಾರ್ಗೆಟ್‌ ಮಾಡಿರುವ ಸಾವಿರಾರು ಹಿಜ್ಬುಲ್ಲಾ (Hezbollah) ರಾಕೆಟ್ ಲಾಂಚರ್‌ಗಳ ಮೇಲೆ ತನ್ನ ಫೈಟರ್ ಜೆಟ್‌ಗಳು ದಾಳಿ ಮಾಡಿದವು ಎಂದು ಇಸ್ರೇಲ್ ಹೇಳಿದೆ.

ಅಂದಾಜು 100 IAF ಫೈಟರ್ ಜೆಟ್‌ಗಳು, ದಕ್ಷಿಣ ಲೆಬನಾನ್‌ನಲ್ಲಿ ಹುದುಗಿದ್ದ ಸಾವಿರಾರು ಹಿಜ್ಬುಲ್ಲಾ ರಾಕೆಟ್ ಲಾಂಚರ್ ಬ್ಯಾರೆಲ್‌ಗಳನ್ನು ಹೊಡೆದು ನಾಶಪಡಿಸಿವೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ. ಈ ಲಾಂಚರ್‌ಗಳಲ್ಲಿ ಹೆಚ್ಚಿನವು ಉತ್ತರ ಇಸ್ರೇಲ್‌ನ ಕಡೆಗೆ ಗುರಿಯಿಟ್ಟುಕೊಂಡಿದ್ದವು. ಕೆಲವು ಕೇಂದ್ರ ಇಸ್ರೇಲ್‌ನತ್ತ ಗುರಿಯಿರಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಭದ್ರತಾ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ನೆತನ್ಯಾಹು ಅವರ ಕಚೇರಿಯ ಹೇಳಿಕೆಯ ಪ್ರಕಾರ, ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಮುಂದಿನ 48 ಗಂಟೆಗಳ ಕಾಲ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ, ಇಸ್ರೇಲ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ತಿಳಿಸಿದೆ. ತುರ್ತು ಸೇವೆಗಳು ಲಭ್ಯವಿದ್ದು, ಹಿಜ್ಬುಲ್ಲಾದಿಂದ ದೊಡ್ಡ ಪ್ರಮಾಣದ ದಾಳಿ ನಡೆಸುವ ಸಾಧ್ಯತೆ ಇದೆ.

Share This Article