ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

Public TV
2 Min Read

ಮಾಸ್ಕೋ: ಪ್ರವಾದಿ ಮೊಹಮ್ಮದರನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅವರನ್ನು ಹತ್ಯೆ ಮಾಡಿ ಪ್ರತೀಕಾರ ತೆಗೆದುಕೊಳ್ಳಲು ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಸ್ ಉಗ್ರ ಮುಂದಾಗಿದ್ದ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ರಷ್ಯಾದಲ್ಲಿ ನಿನ್ನೆ ಬಂಧಿತನಾಗಿರುವ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರ ಅಜಮೋವ್ ಆತ್ಮಾಹುತಿ ದಾಳಿ ಮೂಲಕ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಯೋಜನೆಯನ್ನು ಮಾಡಿಕೊಂಡಿದ್ದ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದೆ.

1992ರಲ್ಲಿ ಜನಿಸಿದ ಅಜಮೊವ್ ಟರ್ಕಿಯಲ್ಲಿ ಐಎಸ್‍ನಿಂದ ನೇಮಕಗೊಂಡು ತರಬೇತಿ ಪಡೆದಿದ್ದ. ಈತ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಾರೆ. ಆದ್ದರಿಂದ ಅವರನ್ನು ಹತ್ಯೆಗೈದು ಪ್ರತಿಕಾರ ತೀರಿಸಿಕೊಳ್ಳಬೇಕೆಂದುಕೊಂಡಿದ್ದ ಎಂದು ವಿಚಾರಣೆ ವೇಳೆ ಅಜಮೊವ್ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸ್ಕೆಚ್ ಹಾಕಿದ್ದು ಬಿಜೆಪಿ ನಾಯಕರು ನಮ್ಮ ಟಾರ್ಗೆಟ್ ಎಂದು ಒಪ್ಪಿಕೊಂಡಿದ್ದಾನೆ. ಭಾರತದಲ್ಲಿ ಆತ್ಮಾಹುತಿ ದಾಳಿ ನಡೆಸಲೆಂದು ಈ ಶಂಕಿತ ಉಗ್ರನನ್ನು ಐಸಿಸ್ ನೇಮಕ ಮಾಡಿಕೊಂಡಿದೆ. ಈ ಉಗ್ರ ಭಾರತ ಪ್ರವೇಶ ಮಾಡುವ ಬಗ್ಗೆ ತಯಾರಿ ಆರಂಭಿಸಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

bjP

ಈ ಯೋಜನೆಯ ಭಾಗವಾಗಿಯೇ ಭಾರತದ ವೀಸಾ ಪಡೆಯಲು ಆತನನ್ನು ರಷ್ಯಾಕ್ಕೆ ಕಳುಹಿಸಲಾಗಿತ್ತು. ಆತ ಭಾರತಕ್ಕೆ ಬಂದ ನಂತರ ನವದೆಹಲಿಯಲ್ಲಿ ಸ್ಥಳೀಯ ನೆರವು ನೀಡುವುದಾಗಿಯೂ ಭರವಸೆ ನೀಡಲಾಗಿತ್ತು ಎಂಬ ವಿಚಾರ ಇದೀಗ ಬಯಲಾಗಿದೆ. ಮಧ್ಯ ಏಷ್ಯಾ ಪ್ರಾಂತ್ಯದಲ್ಲಿ ಸಕ್ರಿಯವಾಗಿರುವ ಐಸಿಸ್ ಸಂಘಟನೆಗೆ ರಷ್ಯಾದಲ್ಲಿ ನಿಷೇಧ ಹೇರಲಾಗಿದೆ. ಈ ಸಂಘಟನೆಯ ಸದಸ್ಯನನ್ನು ಸೋಮವಾರ ಮಾಸ್ಕೋನಲ್ಲಿ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ ಘಟಕವು ಸೆರೆ ಹಿಡಿದಿದೆ. ಇದನ್ನೂ ಓದಿ: ಗಣೇಶನ ಹಬ್ಬದಂದೇ ಅದ್ಧೂರಿ ಸಾವರ್ಕರ್‌ ಉತ್ಸವ ಆಚರಣೆಗೆ ಸಿದ್ಧತೆ

ಉಗ್ರ ಸೆರೆ ಸಿಕ್ಕಿದ್ದು ಹೇಗೆ?: ಕಿರ್ಗಿಸ್ತಾನ, ಉಜ್ಜೇಕಿಸ್ತಾನದ ಇಬ್ಬರು ಭಾರತದ ವೀಸಾಕ್ಕೆ ಯತ್ನಿಸಿದ್ದಾರೆ. ಆ ಪ್ರಯತ್ನ ವಿಫಲವಾದಾಗ ರಷ್ಯಾದ ಮೂಲಕ ಭಾರತಕ್ಕೆ ಬರಬಹುದು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಇದರಿಂದಾಗಿ ಜು. 27ರಂದು ಭಾರತದ ಜೊತೆಗೆ ಈ ಎಲ್ಲಾ ಮಾಹಿತಿಯನ್ನು ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಾಳಿ ಕುರಿತು ವಿದೇಶಿ ಗುಪ್ತಚರ ಸಂಸ್ಥೆಗಳಿಂದ ಭಾರತಕ್ಕೆ ಮಾಹಿತಿ ದೊರೆತಿದೆ. ಈ ಮಹತ್ವದ ಮಾಹಿತಿಯನ್ನು ರಷ್ಯಾಗೆ ಭಾರತ ಸರ್ಕಾರ ಕಳುಹಿಸಿದೆ. ಇದರ ಜಾಡು ಹಿಡಿದ ರಷ್ಯಾ ಪೊಲೀಸರು ಟೆಲಿಗ್ರಾಂ ಆ್ಯಪ್‍ನಲ್ಲಿ ನಡೆಸಿದ ಸಂವಹನವನ್ನು ಪತ್ತೆ ಹಚ್ಚಿ ಉಗ್ರನನ್ನು ಬಂಧಿಸಿದ್ದಾರೆ.

ಬಂಧಿತ ಅಜಮೊವ್‍ನಿಗೆ ಆತ್ಮಹತ್ಯಾ ದಾಳಿ ಕುರಿತು ಐಸಿಸ್ ಟರ್ಕಿಯಲ್ಲಿ ತರಬೇತಿ ನೀಡಿತ್ತು. ಟರ್ಕಿಯಿಂದ ರಷ್ಯಾಗೆ ಟರ್ಕಿಯಿಂದ ರಷ್ಯಾಗೆ ತೆರಳಿ ಅಲ್ಲಿಂದ ಭಾರತಕ್ಕೆ ಬರಲು ಉದ್ದೇಶಿಸಿದ್ದ. ಜೊತೆಗೆ ಭಾರತಕ್ಕೆ ಆಗಮಿಸಿದ ಬಳಿಕ ದಾಳಿಗೆ ಅಗತ್ಯ ಸರಕು ಪಡೆಯುವವನಿದ್ದ ಎನ್ನುವ ವಿಷಯ ಬಯಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *