– ಭಾರತದಲ್ಲಿ ಮತಾಂತರಕ್ಕೆ ಅಮೆರಿಕ, ಕೆನಾಡ ಸೇರಿದಂತೆ ವಿದೇಶಗಳಿಂದ ಫಂಡಿಂಗ್
ಲಕ್ನೋ: ಉತ್ತರ ಪ್ರದೇಶದ (Uttar Pradesh) ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಸೀಕ್ರೆಟ್ ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಮತಾಂತರದ ಬೃಹತ್ ಜಾಲವನ್ನ ಭೇದಿಸಿದ್ದಾರೆ.
ಹೌದು. ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆದು ಐಸಿಸ್ ಮಾದರಿಯಲ್ಲಿ ಮತಾಂತರ (ISIS-Style’ Religious Conversion) ದಂಧೆ ನಡೆಸುತ್ತಿದ್ದ ಬೃಹತ್ ಜಾಲ ಭೇದಿಸಿರುವ ಪೊಲೀಸರು 6 ವಿಭಿನ್ನ ರಾಜ್ಯಗಳಲ್ಲಿ 10 ಮಂದಿಯನ್ನ ಬಂಧಿತರನ್ನ ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್ ರಾಯ್) ಮತ್ತು ಒಸಾಮಾ, ಆಗ್ರಾದ ರೆಹಮಾನ್ ಖುರೇಷಿ, ಖಲಾಪರ್, ಮುಜಫರ್‌ನಗರದ ಅಬ್ಬು ತಾಲಿಬ್, ಡೆಹ್ರಾಡೂನ್‌ನ ಅಬುರ್ ರೆಹಮಾನ್, ದೆಹಲಿಯ ಮುಸ್ತಫಾ (ಅಲಿಯಾಸ್ ಮನೋಜ್), ಜೈಪುರದ ಮೊಹಮ್ಮದ್ ಅಲಿ ಮತ್ತು ಜುನೈದ್ ಖುರೇಷಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ
ಬೆನ್ನುಬಿದ್ದದ್ದು ಹೇಗೆ?
ಕಳೆದ ಮಾರ್ಚ್ ತಿಂಗಳಲ್ಲಿ 33 ಮತ್ತು 18 ವರ್ಷದ ಇಬ್ಬರು ಸಹೋದರಿಯರು ಕಾಣೆಯಾಗಿದ್ದರು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಅವರನ್ನು ತಮ್ಮ ಧರ್ಮ ಬದಲಾಯಿಸಲು ಒತ್ತಾಯಿಸಲಾಗಿದೆ ಜೊತೆಗೆ ಮೂಲಭೂತ ವಾದಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಗೊತ್ತಾಯಿತು. ಅಲ್ಲದೇ ‘ಲವ್ ಜಿಹಾದ್’ ಮತ್ತು ಮೂಲಭೂತವಾದದಲ್ಲಿ ತೊಡಗಿರುವ ಗ್ಯಾಂಗ್ ಈ ಸಹೋದರಿಯರನ್ನ ಗುರಿಯಾಗಿಸಿಕೊಂಡಿದೆ ಎಂಬುದನ್ನೂ ಕಂಡುಕೊಂಡರು. ಇಲ್ಲಿಂದ ತನಿಖೆ ಶುರು ಮಾಡಿದ ಪೊಲೀಸರು ದಂಧೆಯನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಗುಂಪು ಐಸಿಸ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಂದಿಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ, ಮತಾಂತರ ದಂಧೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ʻಮಿಷನ್ ಅಸ್ಮಿತಾʼಕಾರ್ಯಾಚರಣೆ ಆರಂಭಿಸಿದ್ದು, ಮತಾಂತರ ಸಿಂಡಿಕೇಟ್‌ನ ಪ್ರಮುಖರಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಜಹಾಂಗೀರ್ ಆಲಂ ಖಾಸ್ಮಿನನ್ನ ವಿಶೇಷ ತಂಡ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯನ್ನ TRF ನಡೆಸಿದೆ ಅನ್ನೋದಕ್ಕೆ ಸಾಕ್ಷಿ ತೋರಿಸಿ – ಉಗ್ರ ಸಂಘಟನೆಗೆ ಪಾಕ್ ನೇರ ಬೆಂಬಲ
ಛಂಗೂರ್ ಬಾಬಾ ನೇತೃತ್ವದ ಸಿಂಡಿಕೇಟ್ ವಿಚಾರಣೆಯನ್ನ ಎಸ್ ಐಟಿ ಮತ್ತು ವಿಶೇಷ ಕಾರ್ಯಪಡೆ ಮುಂದುವರೆಸಿವೆ. ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜೊತೆಗೆ ಸೇರಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈ ಜೋಡಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಆರು ರಾಜ್ಯಗಳಾದ್ಯಂತ 10 ಜನರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಮೆರಿಕ, ಕೆನಡಾದಿಂದ ಫಂಡಿಂಗ್
ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಇನ್ನಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಈ ಕುರಿತು ಮಾಹಿತಿ ನೀಡಿರುವ ಆಗ್ರಾ ಪೊಲೀಸ್ ಆಯುಕ್ತ, ಈ ಮತಾಂತರ ದಂಧೆಗೆ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿದೇಶಗಳಿಂದ ಹಣೆ ಹೊಳೆಯೇ ಹರಿದುಬಂದಿದೆ. ಸದ್ಯಕ್ಕೆ ಅಮೆರಿಕ ಮತ್ತು ಕೆನಡಾದ ಹಣದ ಮೂಲದ ಬಗ್ಗೆ ಸುಳಿವು ಸಿಕ್ಕಿದೆ. ಉಳಿದ ದೇಶಗಳಿಂದ ಹಣ ಸಂದಾಯವಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪುಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ – ಕೆಲಸದ ಒತ್ತಡವೇ ಕಾರಣ ಅಂತ ಡೆತ್ ನೋಟ್ ಬರೆದಿಟ್ಟು ಸೂಸೈಡ್
ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ವಿಶೇಷ ಕಾರ್ಯಪಡೆ (STF) ಮತ್ತು ಭಯೋತ್ಪಾದನಾ ನಿಗ್ರಹ ದಳ (ATS) ಸೇರಿದಂತೆ ವಿಶೇಷ ಘಟಕಗಳನ್ನು ಕರೆಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್